Wednesday , December 11 2019
Breaking News
Home / ಓದುಗರ ಲೇಖನ / ರೋಗಿಗಳ ಮನಗೆದ್ದ ನರ್ಸ್ ಮೀನಾಕ್ಷಿ

ರೋಗಿಗಳ ಮನಗೆದ್ದ ನರ್ಸ್ ಮೀನಾಕ್ಷಿ

ಬೀಸಿರೊಡ್ ಕೈಕಂಬ ಪರಿಸರದಲ್ಲಿ ಸರಕಾರಿ ಆಸ್ಪತ್ರೆ ಬಡವರ ಪಾಲಿಗೆ ಆಶಕಿರಣವಾಗಿ ಅತ್ಯುತ್ತಮ ಸೇವೆಯನ್ನು ನೀಡುವಲ್ಲಿ ಅಲ್ಲಿಯ ಪ್ರತಿಯೊಬ್ಬರೂ ಯಶಸ್ವಿಯಾಗಿದ್ದಾರೆ. ಅದರಂತೆ ನಾನು ಕೂಡ ಜ್ವರ, ಅಥವಾ ಇನ್ನಿತರ ಯಾವುದೇ ರೋಗಕ್ಕೆ ತುತ್ತಾದರೂ ನಾನು ಕೂಡ ಧಾವಿಸಿ ಹೋಗುವುದು ಅಲ್ಲಿಗೆ. ಅಲ್ಲಿಯ ವೈದ್ಯರು ಹಾಗೂ ನರ್ಸ್ ಗಳು ರೋಗಿಯನ್ನು ನಮ್ಮವರೆ ಎಲ್ಲರೂ ಎಂಬಂತೆ ಸ್ಪಷ್ಟವಾಗಿ ಚಿಕಿತ್ಸೆ ನೀಡುತ್ತಿದ್ದರಲ್ಲಿ ನನಗಂತೂ ಬಹಳ ಅವರ ಸೇವಾ ಮನೋಭಾವನೆ ಮನ ಗೆದ್ದಿದೆ.

ಅದೇ ರೀತಿ ಗರ್ಭಿಣಿಯರಿಗೆ ಮನೆ ಮನೆಗೆ ತೆರಳಿ ಧೈರ್ಯ, ಹಾಗೂ ಪ್ರೀತಿಯಿಂದ ಮಾತಾಡಿ ಅವರು ಚಿಂತಿತರಾಗಿದ್ದರೆ ಅವರಿಗೆ ಆತ್ಮ ಸ್ಥೈರ್ಯ ನೀಡಿ ಅವರೆಲ್ಲರ ಮನ ಗೆದ್ದ ನರ್ಸ್ ಮಿನಾಕ್ಷಿ ಎಂಬವರು ಇದೀಗ ಬಹಳ ದಿನಗಳು ಕಳೆಯಿತು ಊರಿನ ಕಡೆಗೆ ಧಾವಿಸದೆ ಅವರು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿಲ್ಲವೆ ಎಂದು ವಿಚಾರಿಸಿ ಹೊರಟಾಗ ಅವರು ಅಲ್ಲಿಂದ ತನ್ನ ವೃತ್ತಿಯನ್ನು ಬಿಟ್ಟಿರುವುದಾಗಿ ಕೇಳಿ ಬಂತು ತುಂಬಾ ನೋವು ಕೂಡ ಆಯಿತು.

ಉತ್ತಮ ಮನೋಭಾವ ಉಳ್ಳ ಅವರನ್ನು ತಕ್ಷಣ ಆಸ್ಪತ್ರೆಗೆ ಮರಳಲು ಅಲ್ಲಿಯ ಆಡಳಿತಗಾರರು ತಕ್ಷಣ ಸ್ಪಂಧಿಸಿ ಊರಿನ‌ ಗರ್ಭಿಣಿಯರ ಸೇವೆಗೈಯಲು ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡಲು ಮಗದೊಮ್ಮೆ ಅವರಿಗೆ ಅವಕಾಶ ನೀಡುವಂತೆ ಅಲ್ಲಿಯ ಆಡಳಿತಗಾರರ ಗಮನಕ್ಕೆ ತರಳು ನಾನು ಇಷ್ಟಪಡುತ್ತೇನೆ.

ಮರಳಿ ಅವರು ತನ್ನ ವೃತ್ತಿಯನ್ನು ಆರಂಭಿಸುವಂತೆ ಈ ಬರಹದ ಮೂಲಕ ಮೀನಾಕ್ಷಿ ಅಕ್ಕರಲ್ಲಿ ವಿನಂತಿಸುತ್ತಾ ಅವರಿಗೆ ಮತ್ತೆ ಸೇವೆಗೈಯಲು ಅವಕಾಶ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗಳಲ್ಲಿ ಹಾಗೂ ಅದಕ್ಕೆ ಸಂಬಂದಪಟ್ಟ ಅಧಿಕಾರಿಗಳಲ್ಲಿ ನನ್ನದೊಂದು ಮನವಿ. ಈ ಮನವಿಯನ್ನು ತಿರಸ್ಕರಿಸಲಾರರು ಎಂಬ ಭರವಸೆಯೊಂದಿಗೆ.

ಇತಿ: ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ

Check Also

ಮುಹಮ್ಮದ್ (ಸ) ರವರ ವಿವಾಹಗಳು, ವಿವಾದಗಳು ಮತ್ತು ವಿಮರ್ಶಕರು (ಭಾಗ -2)

ಪ್ರವಾದಿ ಮುಹಮ್ಮದ್ ಸ ಆಯಿಷಾ ಎಂಬ ಕನ್ಯೆಯನ್ನು ವಿವಾಹ ಆಗಿದ್ದಾರೆ ಮತ್ತು ಆಯಿಷಾರವರು ಪ್ರವಾದಿ ವರ್ಯರಿಗಿಂತ ವಯಸ್ಸಿನಲ್ಲಿ ತುಂಬಾ ಕಿರಿಯರು …

One comment

  1. ANM s are doing really good job in rural parts… but their service is neither appreciated by anyone…if they work for 30years also they will not get any types of promotions or salary on time… i think in present situation some of the places in udupi district ANMs didnt got salary from February…officers asking each nd every reports on time but no one is asking about their basic thing tht did they got salary or not…

Leave a Reply

Your email address will not be published. Required fields are marked *