Monday , August 26 2019
Breaking News
Home / ಕರಾವಳಿ / ಮಿಥುನ್ ರೈ ಗೆಲ್ಲುತ್ತಾರೆ ಅಂತ ನನಗೆ ಶಾರದಾ ದೇವಿ ಬಂದು ಹೇಳಿದ್ದಾಳೆ: ಜನಾರ್ಧನ ಪೂಜಾರಿ

ಮಿಥುನ್ ರೈ ಗೆಲ್ಲುತ್ತಾರೆ ಅಂತ ನನಗೆ ಶಾರದಾ ದೇವಿ ಬಂದು ಹೇಳಿದ್ದಾಳೆ: ಜನಾರ್ಧನ ಪೂಜಾರಿ

ಸಂದೇಶ ಇ-ಮ್ಯಾಗಝಿನ್: ನಿನ್ನೆಯಷ್ಟೇ ಮಂಗಳೂರಿನ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರಿಗೆ ಆಶಿರ್ವಾದ ಮಾಡಿ ಈ ಬಾರಿ ಏನೇ ಆದರೂ ಕಟೀಲ್ ಗೆಲ್ಲುತ್ತಾರೆ. ಮೋದಿ ಮತ್ತೆ ಎರಡು ಬಾರಿ ಪ್ರಧಾನಿ ಆಗ್ತಾರೆ ಅಂತ ಹೇಳಿದ್ದ ಹಿರಿಯ ಕಾಂಗ್ರೇಸ್ ಮುಖಂಡ ಜನಾರ್ಧನ ಪೂಜಾರಿ ಇಂದು ಉಲ್ಟಾ ಹೇಳಿಕೆ ನೀಡಿದ್ದಾರೆ. ಇಂದು ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈಯವರು ಜಾನರ್ಧನ ಪೂಜಾರಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಿಥುನ್ ರೈ ಖಂಡಿತಾ ಗೆಲ್ಲುತ್ತಾರೆ, ಶಾರದಾ ಮಾತೆಯೇ ನನ್ನ ಕನಸಿನಲ್ಲಿ ಬಂದು ಮಿಥುನ್ ಗೆಲ್ಲುತ್ತಾರೆ ಎಂದು ಹೇಳಿದ್ದಾಳೆ. ನಾನು ಕಾಂಗ್ರೇಸಿಗ ನಾನು ಮಿಥುನ್‌ಗೆ ಬೆಂಬಲವಾಗಿ ಸಾಗುತ್ತೆನೆ. ಖಂಡಿತಾ ಮಿಥುನ್ ಗೆಲ್ಲುತ್ತಾರೆ. ನಾವು ಮಂಗಳೂರಿನಲ್ಲಿ ಬಹಳ ಒಳ್ಳೆಯ ಅಭ್ಯರ್ಥಿಯನ್ನು ಕೊಟ್ಟಿದ್ದೇವೆ. ಇನ್ನು ಜನರ ನಿರ್ಧಾರಕ್ಕೆ ಬಿಟ್ಟದ್ದು ಎಂದು ಪೂಜಾರಿ ಹೇಳಿದರು.

ನಿನ್ನೆ ರಾತ್ರಿ ನನ್ನ ಕನಸಿನಲ್ಲಿ ಶಾರದಾ ದೇವಿ ಬಂದು ನೀನು ಮಲಗಿದ್ದೀಯ ನಿನಗೆ ಅಹಂಕಾರ ಬಂದಿದೆ. ಮಿಥುನ್ ಖಂಡಿತಾ ಗೆಲ್ಲುತ್ತಾರೆ ಅಂತ ಸ್ವತಃ ಶಾರದಾ ಮಾತೆಯೇ ನನ್ನ ಎದೆಗೆ ಪೆಟ್ಟು ಕೊಟ್ಟು ಬಡಿದೆಬ್ಬಿಸಿದ್ದಾಳೆ ಎಂದು ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಹೇಳಿದರು.

Check Also

ಮಂಗಳೂರು: ಪ್ರವಾದಿ ಮುಹಮ್ಮದ್(ಸ)ರನ್ನು ನಿಂದಿಸಿದ ವ್ಯಕ್ತಿ ಖಾಝಿಯವರ ಮನೆಗೆ ತೆರಳಿ ಕ್ಷಮೆಯಾಚನೆ

009ಸಂದೇಶ ಇ-ಮ್ಯಾಗಝಿನ್: ಇಸ್ಲಾಮ್ ಧರ್ಮ ಹಾಗೂ ಪ್ರವಾದಿ ಮುಹಮ್ಮದ್(ಸ) ರನ್ನು ಅವಹೇಳನಕಾರಿಯಾದ ಶಬ್ದ ಬಳಸಿ ನಿಂದಿಸಿದ್ದ ವ್ಯಕ್ತಿಯೊಬ್ಬರು ಮಂಗಳೂರಿನ ಖಾಝಿ …

Leave a Reply

Your email address will not be published. Required fields are marked *