Friday , May 24 2019
Breaking News
Home / ರಾಜಕೀಯ / ಕಮಲ್ ಹಾಸನ್ ಬೆಂಬಲಕ್ಕೆ ನಿಂತ ಓವೈಸಿ; ಹೇಳಿದರು ಈ ಮಾತು

ಕಮಲ್ ಹಾಸನ್ ಬೆಂಬಲಕ್ಕೆ ನಿಂತ ಓವೈಸಿ; ಹೇಳಿದರು ಈ ಮಾತು

ಸಂದೇಶ ಇ-ಮ್ಯಾಗಝಿನ್: ಮಹಾತ್ಮಾ ಗಾಂಧಿಯ ಹಂತಕ ನಾಥೂರಾಮ್ ಗೋಡ್ಸೆಯನ್ನು ಭಯೋತ್ಪಾದಕ ಎಂದು ಕರೆದಿರುವ ನಟ ಕಮಲ್ ಹಾಸನ್ ಅವರ ಹೇಳಿಕೆ ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು, ‘ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್’ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ. ‘ಮಹಾತ್ಮಾ ಗಾಂಧಿಯನ್ನು ಕೊಂದಂತಹ ವ್ಯಕ್ತಿಯನ್ನು ಭಯೋತ್ಪಾದಕನೆಂದು ಕರೆಯದೆ ಇನ್ನೇನೆಂದು ಕರೆಯಲು ಸಾಧ್ಯ, ಬಾಪುವನ್ನು ಕೊಂದಂತಹ ವ್ಯಕ್ತಿಯೊಬ್ಬನನ್ನು ಇದಕ್ಕಿಂತ ಕೇವಲವಾಗಿ ಯಾವ ರೀತಿ ಕರೆಯಬಹುದು ಎಂತ ನೀವೇ ಹೇಳಿ ಎಂದು ಪ್ರಶ್ನೆ ಹಾಕಿದ್ದಾರೆ. ರಾಷ್ಟ್ರಪಿತನ ಹತ್ಯೆಯನ್ನು ಮರೆತವರು ಅವರ ಮೇಲೆ ಪ್ರೀತಿ ಇಲ್ಲದವರು ಮಾತ್ರ. ಯಾರೆಲ್ಲ ಮಹಾತ್ಮನ ಹತ್ಯೆಯಲ್ಲಿ ಭಾಗಿಯಾಗಿದ್ದಾರೋ ಅವರೆಲ್ಲರೂ ಭಯೋತ್ಪಾದಕರೇ ಹೊರತು ಒಳ್ಳೆಯವರಲ್ಲ ಎಂದು ಓವೈಸಿ ಹೇಳಿದ್ದಾರೆ.

ತಮಿಳುನಾಡಿನ ಅರವಕುರಿಚ್ಚಿ ವಿಧಾನ ಸಭಾ ಕ್ಷೇತ್ರದಲ್ಲಿ ಮೇ 19 ನಡೆಯಲಿರುವ ಉಪಚುಣಾವಣೆಯಲ್ಲಿ ಸ್ಪರ್ಧಿಸುತ್ತಿರುವ ತಮ್ಮ ‘ಮಕ್ಕಳ್ ನೀದಿ ಮೈಯಮ್’ ಪಕ್ಷದ ಅಭ್ಯರ್ಥಿ ಪರ ಭಾನುವಾರ ಪ್ರಚಾರ ಮಾಡುತ್ತಿದ್ದ ನಟ ಕಮಲ್ ಹಾಸನ್ ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ. ಅವನ ಹೆಸರು ನಾಥೂರಾಮ್ ಗೋಡ್ಸೆ ಎಂದಾಗಿತ್ತು ಎಂದು ಹೇಳಿದ್ದರು. ಈ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ಕಮಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

Check Also

ರೋಷನ್ ಬೇಗ್ ಹೇಳಿಕೆಗೆ ಸಹಮತಿ ಸೂಚಿಸಿದ ಸಿಎಂ ಇಬ್ರಾಹಿಂ; ಹೇಳಿದರು ಈ ಮಾತು

002ಸಂದೇಶ ಇ-ಮ್ಯಾಗಝಿನ್: ಕಾಂಗ್ರೇಸ್ ಪಕ್ಷದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ. ಪಕ್ಷದ ಮುಖಂಡರು ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಮುಸ್ಲಿಮರಿಗೆ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದೇ …

Leave a Reply

Your email address will not be published. Required fields are marked *