Tuesday , October 15 2019
Breaking News
image Courtesy: youtube
Home / ರಾಷ್ಟ್ರೀಯ / ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್ ಅವರು ಈ ಪ್ರದೇಶದಲ್ಲಿ ವಾಸಿಸುವ ಮುಸ್ಲಿಮರು ಬಿಜೆಪಿ ಬೆಂಬಲಿಗರಾಗಿರುವ ಅಂಗಡಿ ವ್ಯಾಪಾರಿಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದ ವೀಡಿಯೋ ವೈರಲ್ ಆಗಿದೆ. ಕೈರಾನ ಮತ್ತು ಹತ್ತಿರದ ಹಳ್ಳಿಗಳಲ್ಲಿ ವಾಸಿಸುವ ಮುಸ್ಲಿಮ್ ಸಮುದಾಯದವರನ್ನು ಉದ್ದೇಶಿಸಿ ನಹೀದ್ ಹಸನ್, 10 ದಿನಗಳು ಅಥವಾ ಒಂದು ತಿಂಗಳು ಬೇರೆಡೆಗೆ ಹೋಗಿ ಅಥವಾ ಪಕ್ಕದ ಹಳ್ಳಿಗಳಿಗೆ ಹೋಗಿ ಅಗತ್ಯ ಸಾಮಾನುಗಳನ್ನು ಖರೀದಿಸಿ ಆ ಮೂಲಕ ನಿಮ್ಮ ಸಹೋದರರೊಂದಿಗೆ ಐಕ್ಯಮತ ವ್ಯಕ್ತಪಡಿಸಿ, ಕೆಲವು ಕಷ್ಟಗಳನ್ನು ಎದುರಿಸಿದರೂ ತೊಂದರೆ ಇಲ್ಲ ಆದರೆ ಈ ಬಿಜೆಪಿ ಬೆಂಬಲಿಗರನ್ನು ಮಾರುಕಟ್ಟೆಯಲ್ಲಿ ಬಹಿಷ್ಕರಿಸಿ. ಆಗ ಪರಿಸ್ಥಿತಿ ಸುಧಾರಿಸುತ್ತವೆ. ನಾವು ಅವರಿಂದ ವಸ್ತುಗಳನ್ನು ಖರೀದಿಸುವುದರಿಂದ ಅವರ ಮನೆಗಳು ನಡೆಯುತ್ತವೆ. ಆದರೆ ನಾವು ಮಾತ್ರ ಇವರ ಕಾಟದಿಂದ ಬಳಲುತ್ತಿದ್ದೇವೆ ಎಂದು ಹಸನ್ ಹೇಳಿದ್ದಾರೆ.

ಉತ್ತರಪ್ರದೇಶದ ಕೈರಾನ ಒಂದು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಮುಸ್ಲಿಮರ ಭಯದಿಂದಾಗಿ ಹಿಂದೂಗಳು ಊರು ತೊರೆಯುತ್ತಿದ್ದಾರೆ ಎಂದು ವರದಿಗಳು ಬಂದ ನಂತರ ಈ ಊರು ಸುದ್ದಿಯಲ್ಲಿತ್ತು. ಕೈರಾನಾದಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇಕಡಾ 60 ಕ್ಕಿಂತ ಹೆಚ್ಚಿದೆ.

Check Also

ಕಾನೂನಿನ ಪ್ರಕಾರ ಅಯೋಧ್ಯೆ ತೀರ್ಪು ಮಸೀದಿಯ ಪರವಾಗಿ ಬರಬೇಕಾಗಿದೆ: ಡಿಎಂಕೆ ಮುಖಂಡ ಎ. ರಾಜಾ ಹೇಳಿಕೆ

8113ಸಂದೇಶ ಇ-ಮ್ಯಾಗಝಿನ್: ಅಯೋಧ್ಯೆ ವಿವಾದದಲ್ಲಿ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ದಿನಂಪ್ರತಿ ವಿಚಾರಣೆ ನಡೆಯುತ್ತಿದೆ. ಪ್ರಕರಣದ ವಿಚಾರಣೆ ಅಕ್ಟೋಬರ್ 18 ರೊಳಗೆ …

Leave a Reply

Your email address will not be published. Required fields are marked *