Saturday , April 4 2020
Breaking News
Home / ರಿಯಲ್ ಹೀರೋಸ್ / ಪತ್ರಕರ್ತ ಅಮೀರ್ ಅವರ ಈ ಮಾನವೀಯ ಸೇವೆ ಖಂಡಿತಾ ಕಲ್ಲು ಹೃದಯವನ್ನೂ ಕರಗಿಸುತ್ತೆ

ಪತ್ರಕರ್ತ ಅಮೀರ್ ಅವರ ಈ ಮಾನವೀಯ ಸೇವೆ ಖಂಡಿತಾ ಕಲ್ಲು ಹೃದಯವನ್ನೂ ಕರಗಿಸುತ್ತೆ

ಸಂದೇಶ ಇ-ಮ್ಯಾಗಝಿನ್: ಮಾನವೀಯತೆ ಸತ್ತ ಜನರನ್ನು ನೋಡುವಾಗ ಕೆಲವೊಮ್ಮೆ ನಮಗೆ ಅನಿಸುವುದೇನೆಂದರೆ ಜಗತ್ತಿನಲ್ಲಿ ಈಗ ಯಾರಿಗೂ ಮಾನವೀಯತೆ ಎಂಬುದೇ ಇಲ್ಲ. ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿಯೇ ಮಾಡುವುದು ಎಂದಾಗಿದೆ. ಆದರೆ ನಮ್ಮ ಈ ವಿಚಾರ ಧಾರೆಯನ್ನು ಆಗೊಮ್ಮೆ ಹೀಗೊಮ್ಮೆ ಸುಳ್ಳಾಗಿಸುವ ಮಹಾನ್ ಚೇತನಗಳು ನಮ್ಮ ಮಧ್ಯೆಯಿಂದಲೇ ಎದ್ದು ಬರುತ್ತಾರೆ.

ಪತ್ರಕರ್ತರೆಂದರೆ ಇದೀಗ ಮೊದಲಿನ ಗೌರವ ಜನ ಸಾಮಾನ್ಯರಲ್ಲಿ ಉಳಿದಿಲ್ಲ. ಆದರೆ ಕೆಲವು ಪತ್ರಕರ್ತರು ಇಂದಿಗೂ ತಮ್ಮ ನೈತಿಕತೆಯನ್ನು ಉಳಿಸಿ, ತಮ್ಮ ಪತ್ರಿಕಾ ಧರ್ಮಕ್ಕೆ ಯಾವುದೇ ಚ್ಯುತಿ ಬಾರದ ಹಾಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದೇ ಸಂತಸದ ವಿಚಾರ. ಅಂತಹ ಪತ್ರಕರ್ತರಲ್ಲಿ ನಮ್ಮ ಇಂದಿನ ರಿಯಲ್ ಹೀರೋ ಅಮೀರ್ ಕೂಡ ಒಬ್ಬರು.

ಬಿಹಾರದ ಮುಝಪ್ಪುರ್ ಫುರ್ ನಗರದ ಸ್ಥಳೀಯ ನ್ಯೂಸ್ ಚಾನಲ್ ಒಂದರಲ್ಲಿ ಪತ್ರಕರ್ತರಾಗಿರುವ ಮೊಹಮ್ಮದ್ ಅಮೀರ್, ಮೊನ್ನೆ ವರದಿಗಾಗಿ ನಗರ ಟ್ಯಾಂಕಿ ಚೌಕಿಯ ಬಳಿ ತಮ್ಮ ಬೈಕಿನಲ್ಲಿ ಹಾದುಹೋಗುತ್ತಿರುವಾಗ ಅಸಹಾಯಕ ತಾಯಿ ಮಗುವನ್ನು ಕಂಡರು. ಆ ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು. ತಾಯಿ ಮಗುವಿಗೆ ಏನು ಮಾಡುವುದು ಎಂದು ತಿಳಿಯದೆ ಅಳುತ್ತಿದ್ದಳು. ಕೂಡಲೇ ತಮ್ಮ ಬೈಕ್ ಪಕ್ಕದಲ್ಲಿ ನಿಲ್ಲಿಸಿ ತಾಯಿಯ ಹತ್ತಿರ ಹೋದ ಅಮೀರ್ ಆ ತಾಯಿ ಮಗು ತುಂಬಾ ಸಮಯದಿಂದ ಅಲ್ಲಿ ಅಸಹಾಯಕರಾಗಿ ಅಳುತ್ತಾ ಇದ್ದರೂ ಯಾರೂ ಅವರ ಸಹಾಯಕ್ಕೆ ಬರದೇ ಇರುವುದನ್ನು ಮನಗಂಡರು.

ಬಳಿಕ ಆ ತಾಯಿಯನ್ನು ಮತ್ತು ಮಗುವನ್ನು ತನ್ನದೇ ಬೈಕಿನಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ನೆರವಾದರು. ಈ ಸುದ್ದಿ ಕೆಲವು ವೆಬ್ ಬ್ಲಾಗ್‌ಗಳಲ್ಲಿ ಸುದ್ದಿಯಾಯಿತೇ ಹೊರತು ಬೇರೆ ಯಾವುದೇ ಪ್ರಚಾರ ಪಡೆದು 24/7 ಗೆ ಆಹಾರವಾಗಲಿಲ್ಲ.

ಇದೇ ಜಾಗದಲ್ಲಿ ಒಬ್ಬ ಕಾರ್ಪೊರೇಟ್ ಟಿಆರ್‍‌ಪಿ ದಾಹಿ ಮಾಧ್ಯಮದ ಪತ್ರಕರ್ತನನ್ನು ನೆನೆಸಿ ನೋಡೋಣ, ಆತ ಸಾಯುವ ಹಂತದಲ್ಲಿದ ಆ ಮಗುವನ್ನು ಫೋಕಸ್ ಮಾಡಿ, ತಾನು ಅವರಿಗೆ ಸಹಾಯ ಮಾಡುವುದನ್ನು ಬಿಟ್ಟು, ಇಲ್ಲಿ ನೋಡಿ ಈ ದೇಶದ ಅವಸ್ಥೆ ಇಲ್ಲಿ ಯಾರೂ ಸಹಾಯ ಮಾಡುತ್ತಿಲ್ಲ. ಆಂಬುಲೆನ್ಸ್ ಕೂಡ ಇವರಿಗೆ ಸಹಾಯ ಮಾಡಲು ಬರಲಿಲ್ಲ. ಈ ಸುದ್ದಿಯನ್ನು ಮೊದಲು ತೋರಿಸಿದ್ದು ನಾವು ಎನ್ನುತ್ತಿದ್ದರೋ ಏನೋ..!

ತಾಯಿ ಮತ್ತು ಮಗುವಿನ ಬದುಕಿನ ಮುಂದೆ ನನಗೆ ಟಿಆರ್‌ಪಿ ದೊಡ್ಡದಾಗಿ ಕಾಣಲಿಲ್ಲ. ನಾನು ಆವತ್ತಿನ ನನ್ನ ವರದಿಯ ಕೆಲಸವನ್ನು ಅಲ್ಲಿಗೇ ಬಿಟ್ಟು ತಾಯಿ ಮಗುವಿನ ಶುಶ್ರೋಷೆಗೆ ಮುಂದಾದೆ. ಅದಕ್ಕಾಗಿ ನನ್ನ ಬಾಸ್ ನನಗೆ ಫೋನ್ ಮಾಡಿ ಬೈದರು. ವಿಷಯ ತಿಳಿದಾಗ ಅವರಿಗೂ ಅನುಕಂಪ ಉಂಟಾಯಿತು ಎಂದು ಅಮೀರ್ ವಿವರಿಸಿದ್ದಾರೆ.

Check Also

ಅಮೇರಿಕಾದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಶಸ್ತಿ ಪಡೆದ 10 ವರ್ಷದ ಹಫೀಜ್-ಎ-ಕುರಾನ್

ಸಂದೇಶ ಇ-ಮ್ಯಾಗಝಿನ್: ಕ್ಯಾವಿಟಿ ಕ್ರಷರ್ ಅನ್ನು ಕಂಡುಹಿಡಿದಿದ್ದಕ್ಕಾಗಿ 10 ವರ್ಷದ ಪಾಕಿಸ್ತಾನಿ ಮಗು ಮತ್ತು ಅವರ ಕುಟುಂಬದೊಂದಿಗೆ ಅಮೆರಿಕದಲ್ಲಿ ಎಐ …

Leave a Reply

Your email address will not be published. Required fields are marked *