Friday , November 15 2019
Breaking News
Home / ವೀಡಿಯೋ / ರಮದಾನ್‌ನಲ್ಲಿ ಅನಾಥರ ಜೊತೆ ಉಮ್ರಾ ನಿರ್ವಹಿಸಿದ ಜಾರ್ಡನ್ ಕ್ವೀನ್ ರಾನಿಯಾ

ರಮದಾನ್‌ನಲ್ಲಿ ಅನಾಥರ ಜೊತೆ ಉಮ್ರಾ ನಿರ್ವಹಿಸಿದ ಜಾರ್ಡನ್ ಕ್ವೀನ್ ರಾನಿಯಾ

ಸಂದೇಶ ಇ-ಮ್ಯಾಗಝಿನ್: ಜಾರ್ಡನ್ ದೊರೆ ಕಿಂಗ್ ಅಬ್ದುಲ್ಲ ll ಅವರ ಪತ್ನಿ ಅನಾಥ ಮಹಿಳೆಯರ ಜೊತೆ ಉಮ್ರಾ ನಿರ್ವಹಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಧ್ಯಮಗಳ ವರದಿಯ ಪ್ರಕಾರ ಜಾರ್ಡನಿನ ಅನಾಥ ಮಹಿಳೆಯರ ಗುಂಪೊಂದು ಹಲವಾರು ದತ್ತಿ ಸಂಸ್ಥೆಗಳ ನೆರವಿನೊಂದಿಗೆ ಮೇ 8 ರಂದು ಮಕ್ಕಾಗೆ ಉಮ್ರಾ ನಿರ್ವಹಿಸಲು ಆಗಮಿಸಿದ್ದು, ಕ್ವೀನ್ ರಾನಿಯಾ ಕೂಡ ಈ ಗುಂಪಿನ ಜೊತೆ ಸೇರಿದರು ಎನ್ನಲಾಗಿದೆ. ಮಕ್ಕಾ ,ಮದೀನಾ ಹಾಗೂ ಇನ್ನಿತರ ಸಂದರ್ಶನ ಸ್ಥಳಗಳಿಗೆ ಅನಾಥ ಮಹಿಳೆಯರ ಗುಂಪಿನ ಜೊತೆ ಸಾಮಾನ್ಯ ಮಹಿಳೆಯ ಹಾಗೆ ಭೇಟಿ ನೀಡಿದ ರಾನಿಯಾ ಅವರ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ತಮ್ಮ ಮಾನವೀಯ ಸೇವೆಯ ಕೆಲಸ ಕಾರ್ಯಗಳಿಗೆ ಹೆಸರು ವಾಸಿಯಾಗಿರುವ ಕ್ವೀನ್ ರಾನಿಯಾ 1993 ರಲ್ಲಿ ಅಬ್ದುಲ್ಲ ll ಅವರನ್ನು ಮದುವೆಯಾಗಿದ್ದು, ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ.

Check Also

ತನ್ನ ಉಳಿತಾಯದ ಹಣದಲ್ಲಿ ಹಜ್‌ಗೆ ಹೊರಟ ತಂದೆಗೆ ಮಕ್ಕಳು ಮಾಡಿದರು ಈ ಸ್ಥಿತಿ

ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನದ ಸಿಂಧ್‌ನಲ್ಲಿ ತಂದೆಯು ಹಣವನ್ನು ಪುತ್ರರಿಗೆ ಕೊಡುವ ಬದಲು ಹಜ್‌ಗಾಗಿ ಬಳಸಿದ್ದಕ್ಕಾಗಿ ವೃದ್ಧ ತಂದೆಯನ್ನು ಪುತ್ರರು ಥಳಿಸಿದ …

Leave a Reply

Your email address will not be published. Required fields are marked *