Tuesday , December 10 2019
Breaking News
Home / ನಮಾಝ್ / ಜನಾಝ ನಮಾಝ್‌ನ ಪೂರ್ಣ ರೂಪ ಕನ್ನಡದಲ್ಲಿ: ವೀಡಿಯೋ

ಜನಾಝ ನಮಾಝ್‌ನ ಪೂರ್ಣ ರೂಪ ಕನ್ನಡದಲ್ಲಿ: ವೀಡಿಯೋ

ಜನಾಝ ನಮಾಝ್‌ನಲ್ಲಿ ಪಾಲ್ಗೊಳ್ಳುವುದು ಅತ್ಯಂತ ಪುಣ್ಯವುಳ್ಳ ಕರ್ಮವಾಗಿದೆ. ಒಬ್ಬ ವಿಶ್ವಾಸಿಯು ತನ್ನ ಇನ್ನೊಬ್ಬ ವಿಶ್ವಾಸಿ ಸಹೋದರನಿಗೆ ಸಲ್ಲಿಸಬೇಕಾದ 6 ಹಕ್ಕುಗಳಲ್ಲಿ ಆತ ಮರಣ ಹೊಂದಿದರೆ ಸಂದರ್ಶಿಸುವುದು ಕೂಡ ಒಂದು. ಮರಣ ಸಂದರ್ಶನ ಪೂರ್ಣವಾಗಬೇಕಾದರೆ ಅಥವಾ ಅದರ ಪ್ರತಿಫಲ ಪೂರ್ಣವಾಗಿ ಲಭಿಸಬೇಕಾದರೆ ಮರಣದ ಮನೆಯವರಿಗೆ ಸಾಂತ್ವನ ಹೇಳುವುದರಿಂದ ಹಿಡಿದು ಮಯ್ಯತ್ತನ್ನು ಕಬರ್‌ಗೆ ಇಳಿಸುವವರೆಗಿನ ಕರ್ಮದಲ್ಲಿ ಪಾಲ್ಗೊಳ್ಳಬೇಕಾಗಿದೆ.

ವ್ಯಕ್ತಿಯೊಬ್ಬರು ಮರಣಹೊಂದಿದರೆ, ಅಲ್ಲಾಹನೊಂದಿಗೆ ಸಹಭಾಗಿ ಕಲ್ಪಿಸದ (ಅಂದರೆ ಶಿರ್ಕ್ ಮಾಡದ) 40 ಜನರು ಆತನ ಜನಾಝ ನಮಾಝ್‌ನಲ್ಲಿ ಪಾಲ್ಗೊಂಡು ಅವನ ಅವನ ಪಾಪ ವಿಮೋಚನೆಗಾಗಿ ಆಲ್ಲಾಹನಲ್ಲಿ ಪ್ರಾರ್ಥಿಸಿದರೆ ಆತನನ್ನು ಅಲ್ಲಾಹನು ಕ್ಷಮಿಸುವನು ಎಂದು ಪ್ರವಾದಿ ಮಹಮ್ಮದ್(ಸ) ಕಲಿಸಿದ್ದಾರೆ.

ನಮ್ಮವರು ಯಾರಾದರೂ ಮರಣ ಹೊಂದಿದರೆ ಆ ಕುಟುಂಬದ ವ್ಯಕ್ತಿಯೇ ಜನಾಝ ನಮಾಝ್‌ಗೆ ನೇತೃತ್ವ ನೀಡುವುದು ಉತ್ತಮ. ಇದು ಯಾಕೆಂದರೆ ಆ ವ್ಯಕ್ತಿಗಾಗಿ ಹೃದಯ ತೆರೆದು ಅಲ್ಲಾಹನಲ್ಲಿ ಪಾಪ ವಿಮೋಚನೆ ಬೇಡಲು ಆತನ ಕುಟುಂಬಕ್ಕೆ ಸೇರಿದ ವ್ಯಕ್ತಿಯಿಂದ ಮಾತ್ರ ಸಾಧ್ಯ. ಯಾರೋ ಹೊರಗಿನ ವ್ಯಕ್ತಿ ಅಥವಾ ಆತನ ಪರಿಚಯವೇ ಇಲ್ಲದ ವ್ಯಕ್ತಿಗೆ ಆತ ನನ್ನವ ಎಂಬ ಭಾವನೆ ಇರಲಾರದು. ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ಜನಾಝ ನಮಾಝ್ ನಿರ್ವಹಿಸಲು ಗೊತ್ತಿಲ್ಲದ ಕಾರಣ ಬೇರೆಯವರಿಗೆ ಬಿಟ್ಟು ಕೊಡುತ್ತಾರೆ.

ಈ ಒಂದು ವೀಡಿಯೋದಲ್ಲಿ ಜನಾಝ ನಮಾಝ್ ನಿರ್ವಹಿಸುವ ಸಂಪೂರ್ಣ ರೂಪವನ್ನು ಕನ್ನಡ ಭಾಷೆಯಲ್ಲಿ ವಿವರಿಸಲಾಗಿದೆ.

Leave a Reply

Your email address will not be published. Required fields are marked *