Monday , July 22 2019
Breaking News
Home / ರಾಷ್ಟ್ರೀಯ / ಉಗ್ರರ ಗುಂಡಿಗೆ ಎದೆಯೊಡ್ಡಿದ್ದ ಜಮ್ಮು ಪೊಲೀಸ್ ಅಧಿಕಾರಿ ಅರ್ಶದ್ ಅಹ್ಮದ್ ಹುತಾತ್ಮ

ಉಗ್ರರ ಗುಂಡಿಗೆ ಎದೆಯೊಡ್ಡಿದ್ದ ಜಮ್ಮು ಪೊಲೀಸ್ ಅಧಿಕಾರಿ ಅರ್ಶದ್ ಅಹ್ಮದ್ ಹುತಾತ್ಮ

ಸಂದೇಶ ಇ-ಮ್ಯಾಗಝಿನ್: ಜೂನ್ 12 ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಅರ್ಸದ್ ಅಹ್ಮದ್ ಖಾನ್ ಭಾನುವಾರ ಮಧ್ಯಾಹ್ನ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಜೂನ್ 12 ರಂದು ಉಗ್ರರು ಅನಂತ್‌ನಾಗ್‌ನ ಕೆಪಿ ರಸ್ತೆಯಲ್ಲಿ ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ ಬಳಿಕ ಸ್ಥಳಕ್ಕಾಗಮಿಸಿದ್ದ ಅರ್ಶದ್ ಅಹ್ಮದ್ ಖಾನ್ ಅವರು ತಮ್ಮ ಬುಲೆಟ್ ಫ್ರೂಫ್ ವಾಹನದಿಂದ ಇಳಿದು ಐದು ನಿಮಿಷಗಳ ಕಾಲ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಸಿದ್ದರು. ಆದರೆ ಉಗ್ರನೊಬ್ಬ ಹಾರಿಸಿದ ಗುಂಡು ಅರ್ಶದ್ ಅಹ್ಮದ್ ಅವರ ಎದೆಗೆ ನುಗ್ಗಿ ನೇರವಾಗಿ ಯಕೃತ್ತಿಗೆ ಇಳಿದಿತ್ತು. ಕೂಡಲೇ ಅವರನ್ನು ಶ್ರೀನಗರದ 92 ಬೇಸ್ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಯಿತು. ರವಿವಾರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನವದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರ್ಶದ್ ಮೃತಪಟ್ಟಿದ್ದಾರೆ.

ಖಾನ್ ಅವರ ಸಾವಿನೊಂದಿಗೆ ಮೊನ್ನೆ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಅಧಿಕಾರಿಗಳ ಸಂಖ್ಯೆ 6 ಕ್ಕೇರಿದೆ. ಇತರ ಐದು ಮಂದಿ ಸಿಆರ್ಪಿಎಫ್ ಸೇನಾ ಅಧಿಕಾರಿಗಳು ಮೃತಪಟ್ಟಿದ್ದಾರೆ. ಖಾನ್ ಅವರು ಪತ್ನಿ ಹಾಗೂ ನಾಲ್ಕು ಹಾಗೂ ಒಂದು ವರ್ಷದ ಒಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

Check Also

ಐಎಂಎ ವಂಚಕ ಮನ್ಸೂರ್ ಖಾನ್ ದೆಹಲಿ ವಿಮಾನ ನಿಲ್ದಾಣದಲ್ಲಿ ಅರೆಸ್ಟ್

000ಸಂದೇಶ ಇ-ಮ್ಯಾಗಝಿನ್: ಶುಕ್ರವಾರ ಮುಂಜಾನೆ ದುಬೈನಿಂದ ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಹು ಕೋಟಿ ಐಎಂಎ ಫಾಂಝಿ ಸ್ಕೀಮ್ ಹಗರಣದ …

Leave a Reply

Your email address will not be published. Required fields are marked *