Saturday , April 4 2020
Breaking News
Home / ವೀಡಿಯೋ / ಜಮ್ಮು: ಈ ಕಾರಣಕ್ಕಾಗಿ ಭಾರತೀಯ ಸೇನೆ ಸ್ಥಳೀಯರಿಗೆ ಇಫ್ತಾರ್ ಕೂಟ ಆಯೊಜಿಸಿದೆ

ಜಮ್ಮು: ಈ ಕಾರಣಕ್ಕಾಗಿ ಭಾರತೀಯ ಸೇನೆ ಸ್ಥಳೀಯರಿಗೆ ಇಫ್ತಾರ್ ಕೂಟ ಆಯೊಜಿಸಿದೆ

ಸಂದೇಶ ಇ-ಮ್ಯಾಗಝಿನ್: ಗುರುವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಭಾರತೀಯ ಸೇನೆಯ ವತಿಯಿಂದ ಸ್ಥಳೀಯ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜಿಸಲಾಯಿತು. ರಾಜ್ಯದಲ್ಲಿ ಶಾಂತಿ, ಸಾಮರಸ್ಯ ಮತ್ತು ಏಕತೆಯನ್ನು ಉತ್ತೇಜಿಸುವಾಗ ಸಲುವಾಗಿ ಭಾರತೀಯ ಸೇನೆಯು ಸ್ಥಳೀಯರಿಗೆ ಇಫ್ತಾರ್ ಆಯೋಜಿಸಿದೆ ಎಂದು ಸೇನಾ ಮೂಲಗಳು ತಿಳಿಸಿದೆ. ಇಫ್ತಾರ್ ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಮತ್ತು ಸೇನಾ ಅಧಿಕಾರಿಗಳು ಉಪಸ್ಥಿತರಿದ್ದರು. ಇಫ್ತಾರ್ ಕೂಟಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಸೇನಾ ಕ್ಯಾಂಪ್‌ನಲ್ಲಿರುವ ಮಸೀದಿಯಲ್ಲಿ ನಮಾಝ್‌ಗೆ ವ್ಯವಸ್ಥೆ ಮಾಡಲಾಗಿತ್ತು. ನಮಾಝ್‌ನ ಬಳಿಕ ಸೇನಾ ಅಧಿಕಾರಿಗಳು ಹಾಗೂ ನಾಗರಿಕರು ಒಟ್ಟಿಗೆ ಕುಳಿತು ಉಪಹಾರ ಸೇವಿಸಿದರು. ಜಮ್ಮು ಕಣಿವೆಯಲ್ಲಿ ಸೇನೆಯು ನೀಡಿರುವ ಈ ಇಫ್ತಾರ್ ಕೂಟದ ಬಗ್ಗೆ ಸ್ಥಳೀಯರು ಹೆಚ್ಚು ಸಂತಸ ವ್ಯಕ್ತಪಡಿಸಿದ್ದಾರೆ. ಸೇನೆಯು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಲು ಈ ನಡೆ ಸ್ವಾಗತಾರ್ಹ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

Check Also

ತನ್ನ ಉಳಿತಾಯದ ಹಣದಲ್ಲಿ ಹಜ್‌ಗೆ ಹೊರಟ ತಂದೆಗೆ ಮಕ್ಕಳು ಮಾಡಿದರು ಈ ಸ್ಥಿತಿ

ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನದ ಸಿಂಧ್‌ನಲ್ಲಿ ತಂದೆಯು ಹಣವನ್ನು ಪುತ್ರರಿಗೆ ಕೊಡುವ ಬದಲು ಹಜ್‌ಗಾಗಿ ಬಳಸಿದ್ದಕ್ಕಾಗಿ ವೃದ್ಧ ತಂದೆಯನ್ನು ಪುತ್ರರು ಥಳಿಸಿದ …

Leave a Reply

Your email address will not be published. Required fields are marked *