Friday , November 15 2019
Breaking News
Home / ರಾಜಕೀಯ / ಓವೈಸಿ ಪ್ರಮಾಣವಚನದಲ್ಲಿ ಬಿಜೆಪಿಗರಿಂದ ಜೈಶ್ರೀರಾಮ್ ಘೋಷಣೆ; ಓವೈಸಿ ಹೇಳಿದರು ಈ ಮಾತು

ಓವೈಸಿ ಪ್ರಮಾಣವಚನದಲ್ಲಿ ಬಿಜೆಪಿಗರಿಂದ ಜೈಶ್ರೀರಾಮ್ ಘೋಷಣೆ; ಓವೈಸಿ ಹೇಳಿದರು ಈ ಮಾತು

ಸಂದೇಶ ಇ-ಮ್ಯಾಗಝಿನ್: ಹೈದರಾಬಾದ್ ಸಂಸದ ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಮುಖಂಡ ಅಸಾದುದ್ದೀನ್ ಓವೈಸಿ ಇಂದು ಸಂಸತ್ತಿನಲ್ಲಿ ನೂತನ ಸಂಸದರಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಬಿಜೆಪಿ ಮತ್ತದರ ಮಿತ್ರ ಪಕ್ಷಗಳ ಸಂಸದರು ಸಂಸತ್ತಿನಲ್ಲಿ ‘ಜೈ ಶ್ರಿ ರಾಮ್’ ಹಾಗೂ ‘ವಂದೇ ಮಾತರ’ ಘೋಷಣೆ ಕೂಗಿ ಸಂಸತ್ತಿನಲ್ಲಿ ಗದ್ದಲ ಉಂಟುಮಾಡಿದರು. ಬಿಜೆಪಿ ಸಂಸದರು ಘೋಷಣೆ ಕೂಗುವುದನ್ನು ನೋಡಿ ಓವೈಸಿ ತನ್ನ ಎರಡೂ ಕೈಗಳನ್ನೆತ್ತಿ ಇನ್ನೂ ಜೋರಾಗಿ ಘೋಷಣೆ ಕೂಗುವಂತೆ ಬಿಜೆಪಿ ಸಂಸದರನ್ನು ಪ್ರೋತ್ಸಾಹಿಸಿದರು. ಇದಕ್ಕಿಂತ ಮೊದಲು ಪಶ್ಚಿಮ ಬಂಗಾಳದ ತೃಣ ಮೂಲ ಕಾಂಗ್ರೇಸ್‌ನ ಸಂಸದರು ಪ್ರಮಾಣವಚನ ಸ್ವೀಕಾರ ಮಾಡುವಾಗಲೂ ಬಿಜೆಪಿ ಸಂಸದರು ಜೈ ಶ್ರೀ ರಾಮ್ ಘೋಷಣೆ ಕೂಗಿದ್ದರು. ಸಂಸದರ ಪ್ರಮಾಣ ವಚನದ ಎರಡನೇ ದಿನವಾದ ಮಂಗಳವಾರವೂ ಬಿಜೆಪಿ ಮತ್ತದರ ಸಹ ಪಕ್ಷಗಳ ಸಂಸದರು ಈ ರೀತಿಯ ವರ್ತನೆ ತೋರಿದರು.

ಬಿಜೆಪಿಯವರ ಗದ್ದಲದ ನಡುವೆಯೂ ಓವೈಸಿ ಪ್ರಮಾಣ ವಚನವನ್ನು ಜೈ ಹಿಂದ್, ಜೈ ಭೀಮ್, ಜೈ ಮೀಮ್, ಅಲ್ಲಾಹು ಅಕ್ಬರ್ ಘೋಷಣೆಯಿಂದ ಅಂತ್ಯ ಗೊಳಿಸಿದರು. ಆ ಬಳಿಕ ಮಾತನಾಡಿದ ಓವೈಸಿ ಇದು ಉತ್ತಮ ಬೆಳವಣಿಗೆ ಅವರಿಗೆ ನನ್ನನ್ನು ನೋಡಿ ರಾಮನ ನೆನಪಂತೂ ಆಯಿತಲ್ವ, ಬಿಜೆಪಿಯವರಿಗೆ ಸಂವಿಧಾನ ಕೂಡ ನೆನಪಾಗಲಿ ಅದೇ ರೀತಿ ಮುಝಪ್ಪರ್ ಪುರದ ಮಕ್ಕಳ ಸಾವೂ ಕೂಡ ನೆನಪಾಗಲಿ ಎಂದು ಓವೈಸಿ ಹಾರೈಸಿದರು.

Check Also

ಶೌಚಾಲಯ ಮತ್ತು ಚರಂಡಿಗಳನ್ನು ಸ್ವಚ್ಛ ಗೊಳಿಸಲು ಸಂಸತ್ ಸದಸ್ಯಳಾಗಿಲ್ಲ: ಪ್ರಜ್ಞಾ ಠಾಕೂರ್

ಸಂದೇಶ ಇ-ಮ್ಯಾಗಝಿನ್: ನರೇಂದ್ರ ಮೋದಿ ಸರ್ಕಾರ ‘ಸ್ವಚ್ಛ ಭಾರತ ಅಭಿಯಾನ’ ಯಶಸ್ವಿಯಾಗಲು ಹಣವನ್ನು ವ್ಯಯಿಸಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಈ ಸಮಯದಲ್ಲಿ, …

Leave a Reply

Your email address will not be published. Required fields are marked *