Monday , August 26 2019
Breaking News
image courtesy: BBC.com
Home / ವಿಶೇಷ / ಇಸ್ರೇಲ್: 1,200 ವರ್ಷಗಳಷ್ಟು ಹಳೆಯದಾದ ಮಸೀದಿ ಪತ್ತೆ

ಇಸ್ರೇಲ್: 1,200 ವರ್ಷಗಳಷ್ಟು ಹಳೆಯದಾದ ಮಸೀದಿ ಪತ್ತೆ

ಸಂದೇಶ ಇ-ಮ್ಯಾಗಝಿನ್: ಇಸ್ರೇಲ್‌ನ ನೆಗೆವ್ ಮರುಭೂಮಿಯಲ್ಲಿ 1,200 ವರ್ಷಗಳಷ್ಟು ಹಳೆಯದಾದ ಮಸೀದಿಯನ್ನು ಪುರಾತತ್ವ ತಜ್ಞರು ಪತ್ತೆ ಹಚ್ಚಿದ್ದಾರೆ. ಈ ಮಸೀದಿಯನ್ನು ಆ ಕಾಲದ ರೈತರು ಬಳಸುತ್ತಿದ್ದರು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಮಸೀದಿಯು ಅರೇಬಿಕ್ ಬಿಡಿಯಾನ್ ಬುಡಕಟ್ಟು ಜನಾಂಗ ವಾಸಿಸುತ್ತಿದ್ದ ರಾಹತ್ ನಗರದ ಬಳಿ ಪತ್ತೆಯಾಗಿದೆ. ಉತ್ಖನನವನ್ನು ನಿರ್ವಹಿಸಿದ ಪುರಾತತ್ವ ನಿರ್ದೇಶಕರಾದ ಜಾನ್ ಸಾಲಿಗ್ಮನ್ ಮತ್ತು ಶಹರ್ ಜುರ್ ಅವರು, “7 ಮತ್ತು 8 ನೇ ಶತಮಾನದ ಈ ಸಣ್ಣ ನಗರೀಯ ಮಸೀದಿ ಜಗತ್ತಿನಲ್ಲಿ ಅಪರೂಪದ ಆವಿಷ್ಕಾರವಾಗಲಿದೆ ಎಂದು ಹೇಳಿದ್ದಾರೆ. ಡಿಡಬ್ಲ್ಯೂ ಹಿಂದಿಯಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಈ ಪ್ರದೇಶದಲ್ಲಿ ಈವರೆಗೆ ಅಂತಹ ಯಾವುದೇ ರಚನೆ ಕಂಡುಬಂದಿಲ್ಲ. ಈ ಮಸೀದಿಯು ಆಯತಾಕಾರದ ಕಟ್ಟಡವಾಗಿದ್ದು, ಅದರ ಮೇಲ್ಭಾಗವು ತೆರೆದಿದೆ. ಅದರಲ್ಲಿ ಮಕ್ಕಾದ ದಿಕ್ಕಿಗೆ ಮಾಡಿದ ಪ್ರಾರ್ಥನಾ ಸ್ಥಳವು ಅರ್ಧ ಗೋಳಾಕಾರದಲ್ಲಿದೆ. ಆಗಿನ ಕಾಲದಲ್ಲಿ ಇದನ್ನು ರೈತರು ಬಳಸುತ್ತಿದ್ದರು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಇದರ ಜೊತೆಗೆ ಪುರಾತತ್ತ್ವಜ್ಞರು ಈ ಸ್ಥಳದಲ್ಲಿ ವಾಸದ ಕೋಣೆ, ಅಂಗಳ, ಅಂಗಡಿ ಕೊಠಡಿ, ಬೆಂಕಿ ಸುಡುವ ಸ್ಥಳ ಮತ್ತು ಅಡುಗೆ ಕೋಣೆಗಳನ್ನು ಪತ್ತೆ ಹಚ್ಚಿದ್ದಾರೆ. ಇದು ಇಂದಿನ ಇಸ್ರೇಲ್‌ನ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದಾಗಿದ್ದು. ಈ ಪ್ರದೇಶವನ್ನು ಕ್ರಿ.ಶ 636 ರಲ್ಲಿ ಅರಬ್ಬರು ಗೆದ್ದಿದ್ದರು ಎನ್ನಲಾಗಿದೆ.

Check Also

ಬ್ರೈನ್ ಟ್ಯೂಮರ್ ಪೀಡಿತ ಮಗುವಿನ ಆಟಿಕೆ ಕದ್ದ ಕಳ್ಳರು ಕೊನೆಗೆ ಮಾಡಿದ ಕೆಲಸವೇನು ನೋಡಿ

001ಸಂದೇಶ ಇ-ಮ್ಯಾಗಝಿನ್: ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ 5 ವರ್ಷದ ಬಾಲಕನಿಗೆ ಸೇರಿದ ರೆಸ್ಲಿಂಗ್ ಬೆಲ್ಟನ್ನು ಕದ್ದ ಕಳ್ಳರು ನಂತರ …

Leave a Reply

Your email address will not be published. Required fields are marked *