Thursday , June 20 2019
Breaking News
Home / ಕ್ರೀಡೆ / ಈ ರೀತಿ ಆದಲ್ಲಿ ಇರ್ಫಾನ್ ಪಠಾಣ್ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ‍ ರಚಿಸಲಿದ್ದಾರೆ

ಈ ರೀತಿ ಆದಲ್ಲಿ ಇರ್ಫಾನ್ ಪಠಾಣ್ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ‍ ರಚಿಸಲಿದ್ದಾರೆ

ಸಂದೇಶ ಇ-ಮ್ಯಾಗಝಿನ್: ಟಿ-20 ಕ್ರಿಕೆಟ್ ಬಂದ ನಂತರ ಕ್ರಿಕೆಟ್ ಆಟದ ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗಿದೆ. ಇದೇ ಕಾರಣದಿಂದಾಗಿ ಬೇರೆ ಬೇರೆ ದೇಶಗಳು ಹೊಸ ಹೊಸ ಲೀಗನ್ನು ಪ್ರಾರಂಭಿಸಿದೆ. ಭಾರತದಲ್ಲಿ ಐಪಿಎಲ್ ಜನಪ್ರಿಯವಾಗಿದೆ. ಅದೇ ರೀತಿ ವೆಸ್ಟ್ ಇಂಡೀಸ್ ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ ತುಂಬಾ ಜನಪ್ರಿಯವಾಗಿದೆ. ಇವುಗಳಲ್ಲಿ ಐಪಿಎಲ್ ಹಣದಲ್ಲೂ ಜನಪ್ರಿಯತೆಯಲ್ಲೂ ಬೇರೆಲ್ಲಾ ಲೀಗ್‌ಗಳಿಗಿಂತ ಮುಂದಿದೆ. ಇದೇ ಕಾರಣಕ್ಕಾಗಿ ವಿದೇಶಿ ಆಟಗಾರರು ಐಪಿಎಲ್ ನಲ್ಲಿ ಆಡುತ್ತಾರೆ. ಆದರೆ ಭಾರತೀಯ ಆಟಗಾರರು ವಿದೇಶಿ ಲೀಗ್ ಗಳಲ್ಲಿ ಆಡುವುದಕ್ಕೆ ಬಿಸಿಸಿಐ ನಿರ್ಬಂಧವಿದೆ. ಇದೇ ಕಾರಣದಿಂದಾಗಿ ವಿದೇಶಿ ಲೀಗ್ ಗಳಲ್ಲಿ ಭಾರತೀಯ ಆಟಗಾರರು ಆಡುವುದಿಲ್ಲ.

ಆದರೆ ಇದೀಗ ಭಾರತೀಯ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೆಸರು ಸಿಪಿಎಲ್ ಡ್ರಾಫ್ಟ್ ನಲ್ಲಿ ಕೊನೆಯ ಹಂತದಲ್ಲಿದೆ. ವಿದೇಶಿ ಲೀಗ್ ನಲ್ಲಿ ಹೆಸರು ದಾಖಲಾದ ಮೊದಲ ಭಾರತೀಯ ಆಟಗಾರ ಇರ್ಫಾನ್ ಪಠಾಣ್ ಆಗಿದ್ದಾರೆ. ಇದೀಗ ಬಿಸಿಸಿಐ ಇರ್ಫಾನ್ ಪಠಾಣ್ ಅವರಿಗೆ ಸಿಪಿಎಲ್ ನಲ್ಲಿ ಆಡಲು ಅವಕಾಶ ನೀಡಿದ್ದೇ ಆದಲ್ಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ವಿದೇಶದ ಲೀಗ್ ನಲ್ಲಿ ಆಡಿದ ಮೊದಲ ಆಟಗಾರ ಇರ್ಫಾನ್ ಪಠಾಣ್ ಆಗಲಿದ್ದಾರೆ.

Check Also

ಉಪವಾಸದಿಂದ ತನ್ನ ಕ್ರಿಕೆಟ್ ಜೀವನದ ಮೇಲಾಗುವ ಲಾಭಗಳನ್ನು ಬಹಿರಂಗ ಪಡಿಸಿದ ಕ್ರಿಕೆಟರ್ ಹಾಶಿಂ ಆಮ್ಲ

009ಸಂದೇಶ ಇ-ಮ್ಯಾಗಝಿನ್: ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಹಾಶಿಂ ಆಮ್ಲ ಅವರು ರಂಝಾನ್ ತಿಂಗಳಲ್ಲಿ ಕ್ರಿಕೆಟ್ ವಿಶ್ವ ಕಪ್ ಬಂದಿರುವುದಕ್ಕೆ ಸಂತಸ …

Leave a Reply

Your email address will not be published. Required fields are marked *