Saturday , April 4 2020
Breaking News
image Courtesy: siasat.com
Home / ಗಲ್ಫ್ ಸುದ್ದಿ / ಸೌದಿಗೆ ತೆರಳಿ ಅತ್ಯಾಚಾರ ಆರೊಪಿಯನ್ನು ಬಂಧಿಸಿದ ಕೇರಳದ ಮಹಿಳಾ ಸೂಪರ್ ಕಾಪ್

ಸೌದಿಗೆ ತೆರಳಿ ಅತ್ಯಾಚಾರ ಆರೊಪಿಯನ್ನು ಬಂಧಿಸಿದ ಕೇರಳದ ಮಹಿಳಾ ಸೂಪರ್ ಕಾಪ್

ಸಂದೇಶ ಇ-ಮ್ಯಾಗಝಿನ್: ಭಾರತದಲ್ಲಿ ಅಪರಾಧ ಮಾಡಿ ವಿದೇಶಕ್ಕೆ ಪರಾರಿಯಾದವರನ್ನು ಪುನಃ ಕರೆತಂದು ಇಲ್ಲಿನ ಕಾನೂನಿನ ಮುಂದೆ ಹಾಜರಿ ಪಡಿಸಿದ್ದು ಬಹಳ ವಿರಳ. ವರದಿಯೊಂದರ ಪ್ರಕಾರ ಹೀಗೆ ವಿದೇಶಕ್ಕೆ ಪರಾರಿಯಾಗುವ ಮೂವರಲ್ಲಿ ಒಬ್ಬರನ್ನು ಮಾತ್ರ ಯಶ್ವಸ್ವಿಯಾಗಿ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ. ಕೊಲ್ಲಿ ದೇಶಗಳಿಗೆ ಪರಾರಿಯಾಗಿರುವವರನ್ನು ಬಹಳ ಸುಲಭವಾಗಿ ಕರೆತರಬಹುದಾದರೂ, ಕೆಲವು ಸಲ ನಮ್ಮಲ್ಲಿನ ರಾಜಕಾರಣದ ಇಚ್ಛಾಶಕ್ತಿಯ ಕೊರತೆಯ ಕಾರಣದಿಂದಾಗಿ ಇದು ಸಾಧ್ಯವಾಗುವುದಿಲ್ಲ. ಆದರೆ ಕೇರಳದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅತ್ಯಾಚಾರ ಮಾಡಿ ಸೌದಿಯಲ್ಲಿ ತಲೆ ಮರೆಸಿಕೊಂಡಿದ್ದ ಅನಿವಾಸಿ ಭಾರತೀಯನನ್ನು ಸೌದಿ ಅರೇಬಿಯಾಗೆ ತೆರಳಿ ಬಂಧಿಸಿದ್ದಾರೆ.

ಯುವ ಐಪಿಎಸ್ ಅಧಿಕಾರಿ, ಕೇರಳದ ಫೈರ್ ಬ್ರಾಂಡ್ ಲೇಡಿ ಕಾಪ್ ಎಂದು ಕರೆಯಲ್ಪಡುವ 29 ವರ್ಷದ ಮೆರಿನ್ ಜೋಸೆಫ್ ಸೌದಿ ಅರೇಬಿಯಾದಲ್ಲಿ ಪ್ರಯಾಣಿಸಿ ಆಥಿತೇಯ ದೇಶದ ಕಾನೂನಿನ ಸಹಾಯದೊಂದಿಗೆ ಹದಿಹರೆಯದ ಹುಡುಗಿಯ ಅತ್ಯಾಚಾರ ಪ್ರಕರಣ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಪ್ರದಾಯವಾದಿ ಇಸ್ಲಾಮಿಕ್ ದೇಶವಾದ ಸೌದಿಯ ಸಂಪ್ರದಾಯವನ್ನು ಗೌರವಿಸುವ ಕಪ್ಪು ಅಬಯಾ (ಬುರ್ಕಾ) ಧರಿಸಿದ ಸೌದಿ ರಾಜಧಾನಿ ರಿಯಾದ್ ನಲ್ಲಿ ಮೂರು ದಿನಗಳ ಕಾಲ ಕಳೆದ ಮೇರಿನ್ ಜೋಸೆಫ್ ಅಪರಾಧ ಮಾಡಿ ಪರಾರಿಯಾಗುವ ವಲಸಿಗರಿಗೆ ಎಚ್ಚರಿಕೆಯ ಸಂದೇಶ ರವಾಸಿದ್ದಾರೆ. ಅದರ ಜೊತೆಗೆ ಭಾರತೀಯ ಪೊಲೀಸರು ಯಾವ ರೀತಿ ತಮ್ಮ ಕಾರ್ಯ ಶೈಲಿಯನ್ನು ನಿರ್ವಹಿಸಬಲ್ಲರು ಎಂದೂ ಪ್ರಮಾಣಿಕರಿಸಿ ಭಾರತೀಯ ಪೊಲೀಸರಿಗೆ ಹೆಮ್ಮೆ ತಂದಿದ್ದಾರೆ.

2017 ರಲ್ಲಿ ಹದಿಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಸುನೀಲ್ ಕುಮಾರ್ ಭದ್ರಾನ್ (38) ರಿಯಾದ್‌ನಲ್ಲಿ ಟೈಲ್ ಫಿಕ್ಸರ್ ಕೆಲಸ ಮಾಡುತ್ತಿದ್ದ, ಹಲವಾರು ವರ್ಷಗಳಿಂದ ಸೌದಿಯಲ್ಲಿ ಕೆಲಸ ಮಾಡುತ್ತಿದ್ದ ಸುನಿಲ್ ಕುಮಾರ್ ಭದ್ರಾನ್ ರಜೆಯ ನಿಮಿತ್ತ ಊರಿಗೆ ಬಂದಿದ್ದಾಗ ಸ್ನೇಹಿತನ ಮಗಳಾದ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿದ ಆರೋಪ ಹೊರಿಸಲಾಗಿತ್ತು. ನಂತರ ಬಾಲಕಿ ಪುನರ್ವಸತಿ ಕೇಂದ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಭದ್ರಾನ್ ದೇಶದಿಂದ ಪರಾರಿಯಾಗಿದ್ದ, ಈತನ ವಿರುದ್ಧ ಇಂಟರ್‌ಪೋಲ್ ಲುಕ್‌ ಔಟ್ ನೊಟೀಸ್ ಕೂಡ ಜಾರಿ ಮಾಡಿತ್ತು.

2019 ರ ಜೂನ್‌ನಲ್ಲಿ ಮೆರಿನ್ ಜೊಸೆಫ್ ಕೊಲ್ಲಮ್ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಪರಿಶೀಲಿಸುವಾಗ ಎರಡು ವರ್ಷದ ಹಿಂದಿನ ಈ ಪ್ರಕರಣದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದರು. ಇಂಟರ್‌ಪೋಲ್‌ನ ಲುಕ್ ಔಟ್ ನೋಟಿಸ್ ಅನ್ನು ಅನುಸರಿಸಿ, ಜೋಸೆಫ್ ಸಿಬಿಐ ಮತ್ತು ಇಂಟರ್ಪೋಲ್ ಅನ್ನು ಸಂಪರ್ಕಿಸಿದರು. ಸುನಿಲ್ ಸೌದಿಯಲ್ಲಿದ್ದಾನೆ ಎಂದು ಇಂಟರ್ಪೋಲ್ ಧೃಡಪಡಿಸಿದ ನಂತರ ಮೆರಿನ್ ಜೊಸೆಫ್ ಸೌದಿಗೆ ತೆರಳಿ ಆತನನ್ನು ಬಂಧಿಸಲು ವೇದಿಕೆ ಸಜ್ಜುಗೊಳಿಸಿದರು.

ಇಂತಹ ಹೆಚ್ಚಿನ ಆರೋಪಿಗಳ ಹಸ್ತಾಂತರ ಪ್ರಕರಣಗಳಲ್ಲಿ ಕೆಳಮಟ್ಟದ ಅಧಿಕಾರಿಗಳು ಪರಾರಿಯಾದವರನ್ನು ವಶಕ್ಕೆ ತೆಗೆದುಕೊಳ್ಳಲು ವಿದೇಶಕ್ಕೆ ಪ್ರಯಾಣಿಸುತ್ತಾರೆ ಆದರೆ ಈ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಮೆರಿನ್ ಜೋಸೆಫ್ ಸ್ವತಃ ಸೌದಿ ಅರೇಬಿಯಾಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದು ವಿಶೇಷ. ತಮ್ಮ ಭೇಟಿಯ ಸಂದರ್ಭದಲ್ಲಿ ರಿಯಾದ್ ನ ಲುಲು ಹೈಪರ್ ಮಾರ್ಕೆಟ್, ಭಾರತೀಯ ದೂತವಾಸ ಕಚೇರಿ ಮುಂತಾದ ಕಡೆ ಭೇಟಿ ನೀಡಿ ಸಾಮಾಜಿಕ ಕಾರ್ಯಕರ್ತರು ಹಾಗೂ ಅಧಿಕಾರಿಗಳನ್ನು ಭೇಟಿಯಾದರು.

Check Also

ಹಜ್: ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮ; ಸಚಿವ ಸಂಪುಟದ ತೀರ್ಮಾನ

ಸಂದೇಶ ಇ-ಮ್ಯಾಗಝಿನ್: ಹಜ್ ಅನ್ನು ರಾಜಕೀಯಗೊಳಿಸುವ ಯಾವುದೇ ಕೃತ್ಯವು ಸ್ವೀಕಾರಾರ್ಹವಲ್ಲ ಎಂದು ಮಂಗಳವಾರ ಜಿದ್ದಾದಲ್ಲಿ ನಡೆದ ಸೌದಿ ಮಂತ್ರಿ ಪರಿಷತ್ತಿನ …

Leave a Reply

Your email address will not be published. Required fields are marked *