Monday , September 16 2019
Breaking News
Home / ಗಲ್ಫ್ ಸುದ್ದಿ / ಸೌದಿಯಲ್ಲಿ ಪಾರ್ಶ್ವವಾಯು ಪೀಡಿಯ ಅಬ್ದುಲ್ ಮಜೀದ್‌ಗೆ ನೆರವಾದ ಸೋಶಿಯಲ್ ಫೋರಂ

ಸೌದಿಯಲ್ಲಿ ಪಾರ್ಶ್ವವಾಯು ಪೀಡಿಯ ಅಬ್ದುಲ್ ಮಜೀದ್‌ಗೆ ನೆರವಾದ ಸೋಶಿಯಲ್ ಫೋರಂ

ಸಂದೇಶ ಇ-ಮ್ಯಾಗಝಿನ್: ದಕ್ಷಿಣ ಕನ್ನಡ ಜಿಲ್ಲೆಯ ಮಲ್ಲೂರು ನಿವಾಸಿಯಾದ ಅಬ್ದುಲ್ ಮಜೀದ್ ಎಂಬವರು ಪಾರ್ಶ್ವವಾಯು ಪೀಡಿತರಾಗಿ ತೀವ್ರ ಅನಾರೋಗ್ಯ ಪೀಡಿತರಾದ ಕಾರಣ ಸೌದಿ ಅರೇಬಿಯಾದ ಅಲ್ ಸುಮೈಶಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೂಕ್ತ ದಾಖಲೆಗಳಿಲ್ಲದೆ ಊರಿಗೆ ಬರಲು ಅಡಚಣೆಯಾಗಿದೆ ಎಂದು ಅಸಹಾಯಕ ಅಬ್ದುಲ್ ಮಜೀದ್ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಮೆಸೇಜನ್ನು ನೋಡಿ ಕಾರ್ಯಪ್ರವೃತ್ತರಾದ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಇದರ ಕಾರ್ಯಕರ್ತರು ಅಬ್ದುಲ್ ಮಜೀದ್ ಅವರ ಸೌದಿ ಪ್ರಾಯೋಜಕನ ಸಹೋದರನನ್ನು ಭೇಟಿಯಾಗಿ ವಿಷಯ ಮನದಟ್ಟು ಮಾಡಿದರು. ಸೋಶಿಯಲ್ ಫೋರಂ ತಂಡದ ಮನವಿಗೆ ಸ್ಪಂದಿಸಿದ ಸೌದಿ ಪ್ರಾಯೋಜಕ (ಕಫೀಲ್) ಮಜೀದ್ ಅವರನ್ನು ಊರಿಗೆ ಕಳುಹಿಸಲು ಬೇಕಾದಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸಿದರು. ಬಳಿಕ ಭಾರತೀಯ ಧೂತವಾಸವನ್ನು ಭೇಟಿಯಾದ ಸೋಶಿಯಲ್ ಫೋರಂ ತಂಡ ತುರ್ತು ಆಗಮನಕ್ಕಾಗಿ ವೈಟ್ ಪಾಸ್‌ಪೋರ್ಟ್ ಕೂಡ ಸಿದ್ಧ ಪಡಿಸಿ ಅಬ್ಧುಲ್ ಮಜೀದ್ ಅವರನ್ನು ಊರಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ.

ಸೋಶಿಯಲ್ ಫೋರಂ ರಿಯಾದ್ ಇದರ ಕಾರ್ಯಕರ್ತರ ಪರಿಶ್ರಮದ ಜೊತೆಗೆ ಕೆಲವು ದಾನಿಗಳೂ ಕೂಡ ಅಬ್ದುಲ್ ಮಜೀದ್ ಅವರ ಊರಿಗೆ ಬರುವ ಖರ್ಚು ವೆಚ್ಚಗಳನ್ನು ನಿಭಾಯಿಸುವಲ್ಲಿ ಸಹಾಯ ಒದಗಿಸಿದ್ದಾರೆ ಎಂದು ತಿಳಿದುಬಂದಿದೆ.

Check Also

ಕ್ರೈಸ್ಟ್ ಚರ್ಚ್ ದಾಳಿ ಸಂತ್ರಸ್ತರ 200 ಕುಟುಂಬಸ್ಥರಿಗೆ ದೊರೆ ಸಲ್ಮಾನ್ ರಿಂದ ಹಜ್ ಕೊಡುಗೆ

103ಸಂದೇಶ ಇ-ಮ್ಯಾಗಝಿನ್: ಕ್ರೈಸ್ಟ್‌ಚರ್ಚ್ ಭಯೋತ್ಪಾದಕ ದಾಳಿಯ ಸಂತ್ರಸ್ತರ 200 ಕುಟುಂಬ ಸದಸ್ಯರಿಗೆ ಈ ಬಾರಿಯ ಹಜ್ ಆತಿಥ್ಯ ವಹಿಸುವಂತೆ ಸೌದಿ …

Leave a Reply

Your email address will not be published. Required fields are marked *