Tuesday , July 23 2019
Breaking News
Home / ಗಲ್ಫ್ ವಿಶೇಷ / ವಿದಾಯದ ಉಮ್ರ ಈ ಭಾರತೀಯ ಪ್ರವಾಸಿ ವ್ಯಕ್ತಿಯ ಅಂತಿಮ ಉಮ್ರಾ ಆಗೋಯ್ತು!

ವಿದಾಯದ ಉಮ್ರ ಈ ಭಾರತೀಯ ಪ್ರವಾಸಿ ವ್ಯಕ್ತಿಯ ಅಂತಿಮ ಉಮ್ರಾ ಆಗೋಯ್ತು!

ಸಂದೇಶ ಇ-ಮ್ಯಾಗಝಿನ್: ಇಸ್ಮಾಯಿಲ್ ಕರಾಯಿಲ್ 51 ವರ್ಷ ಪ್ರಾಯದ ಭಾರತೀಯ ಮೂಲದ ಸೌದಿ ಪ್ರವಾಸಿ. ಕೇರಳದ ಕಣ್ಣೂರು ಮೂಲದವರಾದ ಇಸ್ಮಾಯಿಲ್ ಅವರು ಸೌದಿ ಅರೇಬಿಯಾಗೆ ವಿದಾಯ ಕೋರಿ ಊರಿನಲ್ಲಿ ಬಂದು ನೆಲೆಸುವುದಕ್ಕೆ ತೀರ್ಮಾನಿಸಿದ್ದರು. ಹೊರಡುವುದಕ್ಕಿಂತ ಮೊದಲು ಪವಿತ್ರ ಮಕ್ಕಾಗೆ ತೆರಳಿ ಉಮ್ರಾ ನಿರ್ವಹಿಸಲು ಹೋಗಿದ್ದರು. ಮಕ್ಕಾದಲ್ಲಿ ಉಮ್ರ ನಿರ್ವಹಿಸಿದ ನಂತರ ಕಾಯಿಲೆಗೆ ಈಡಾದ ಇಸ್ಮಾಯಿಲ್‌ರನ್ನು ಮಕ್ಕಾದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಾತನಾಡುವ ಸ್ಥಿತಿಯಲ್ಲಿಲ್ಲದ ಕಾರಣ ಅವರು ಎಲ್ಲಿ ಕೆಲಸ ಮಾಡುತ್ತಿದ್ದರು ಏನ್ ಕಥೆ ಅವರ ಪರಿಚಯದವರು ಯಾರಾದರೂ ಇದ್ದಾರಾ ಎಂದು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಕೊನೆಗೆ ಅವರ ಬಳಿ ಇದ್ದ ಒಂದು ಅಕಾಮಾದಿಂದಾಗಿ ಅವರ ಸ್ಪಾನ್ಸರ್ ರನ್ನು ಭೇಟಿಯಾಲು ಪೊಲೀಸರಿಗೆ ಸಾಧ್ಯವಾಯಿತು. ಸ್ಪಾನ್ಸರ್ ರಿಯಾದ್ ನಲ್ಲಿದ್ದು ಇಸ್ಮಾಯಿಲ್ ವಿರುದ್ಧ ಹುಬೂರ್(ಕೆಲಸದಿಂದ ಓಡಿ ಹೋದ ದೂರು) ದಾಖಲಿಸಿದ್ದರು. ಸ್ಪಾನ್ಸರ್ ಇಸ್ಮಾಯಿಲ್ ಅವರಿಗೆ ದಿನಸಿ ಅಂಗಡಿ ನಡೆಸಲು ಕೊಟ್ಟಿದ್ದರು ಇಸ್ಮಾಯಿಲ್ ಅಲ್ಲಿಂದ ಪರಾರಿಯಾಗಿ ಬೇರೆ ಕಡೆ ದುಡಿದು ಆನಂತರ ಇದೀಗ ಊರಿಗೆ ಹೋಗಲು ತೀರ್ಮಾನಿಸಿದ್ದರು ಎಂದು ತನಿಖೆ ಯಿಂದ ತಿಳಿದು ಬಂದು. ಅಷ್ಟರಲ್ಲಾಗಲೇ ಮಕ್ಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಸ್ಮಾಯಿಲ್ ನಿಧರಾದರು.

ಸ್ಪಾನ್ಸರ್ ಅರಬಿ ಇಸ್ಮಾಯಿಲ್ ಸ್ನೇಹಿತರೊಬ್ಬರಿಗೆ ಇಸ್ಮಾಯಿಲ್ ಅವರ ಮರಣದ ಸುದ್ದಿಯನ್ನು ತಲುಪಿಸುತ್ತಾರೆ. ಸ್ನೇಹಿತ ಮಕ್ಕಾಗೆ ತೆರಳಿ ಮೃತ ದೇಹವನ್ನು ಆಸ್ಪತ್ರೆಯಿಂದ ಪಡೆಯಲು ಪ್ರಯತ್ನಿಸಿದಾಗ ಆಸ್ಪತ್ರೆ ಬಿಲ್ ನೀಡದೆ ಶರೀರ ನೀಡುವುದಿಲ್ಲ ಎಂದು ಶವಾಗಾರದಲ್ಲಿ ಶವವನ್ನು ಇಟ್ಟಿತ್ತು. ಇತ್ತ ಊರಿನಲ್ಲಿ ಇಸ್ಮಾಯಿಲ್ ಮನೆಯವರು ಆಸ್ಪತ್ರೆ ಬಿಲ್ ಕಟ್ಟಲು ತಮ್ಮ ಕಣ್ಣೂರಿನ ಮನೆಯನ್ನು ಮಾರಲು ಸಿದ್ಧರಾಗುತ್ತಾರೆ. ಅಷ್ಟರಲ್ಲಿ ಸಹಾಯಕ್ಕೆ ಆಗಮಿಸಿದ ‘ಕೇರಳ ಮುಸ್ಲಿಮ್ ಕಲ್ಚರಲ್ ಸೆಂಟರ್’ ಎಂಬ ಪ್ರವಾಸಿಗಳ ಸಂಘಟನೆ ಆಸ್ಪತ್ರೆ ಬಿಲ್ ಕಟ್ಟಿ ಶವವನ್ನು ಪಡೆಯಲು ನೆರವಾಯಿತು. ಕೊನೆಗೆ ಇದೀಗ ತಮ್ಮ ಮರಣದ ಸುಮಾರು ಮೂರು ತಿಂಗಳ ನಂತರ ಇಸ್ಮಾಯಿಲ್ ಅವರ ಮೃತದೇಹವನ್ನು ಮಕ್ಕಾದ ಶರಯಾ ಕಬರಸ್ಥಾನದಲ್ಲಿ ದಫನ ಮಾಡಲಾಗಿದೆ.

Check Also

ಯುಎಇ: ರಮದಾನ್‌ನಲ್ಲಿ ಬ್ರಿಟನ್ ಮಹಿಳೆಯಿಂದ ಇಸ್ಲಾಮ್ ಸ್ವೀಕಾರ

204ಸಂದೇಶ ಇ-ಮ್ಯಾಗಝಿನ್: ಯುಕೆ ರಾಷ್ಟ್ರೀಯಳಾದ ಮ್ಯಾಕ್ಸಿನ್ ಬ್ರಾಡಾಕ್ ಯುಎಇಯಲ್ಲಿ ತಮ್ಮ ಜೀವನದ ಒಂಬತ್ತನೇ ರಮದಾನ್ ಉಪವಾಸ ವೃತಾಚರಣೆ ಮಾಡುತ್ತಿದ್ದಾರೆ. ಇದು …

Leave a Reply

Your email address will not be published. Required fields are marked *