Friday , May 24 2019
Breaking News
Home / ಲೇಖನ / ದೇಶ ದ್ರೋಹ ಹಾಗೂ ಮಾನಸಿಕ ಅಸ್ವಸ್ಥತೆಯ ಸರ್ಟಿಫಿಕೇಟ್ ವಿತರಿಸುತ್ತಿರುವ ಮಾಧ್ಯಮಗಳು

ದೇಶ ದ್ರೋಹ ಹಾಗೂ ಮಾನಸಿಕ ಅಸ್ವಸ್ಥತೆಯ ಸರ್ಟಿಫಿಕೇಟ್ ವಿತರಿಸುತ್ತಿರುವ ಮಾಧ್ಯಮಗಳು

ಜಗತ್ತು ಆಧುನೀಕರಣ ಗೊಂಡಂತೆ ನಮ್ಮ ದೈನಂದಿನ ಬದುಕಿನ ಜೀವಾಳವಾಗಿರುವ ಮಾಧ್ಯಮಗಳೂ ಕೂಡ ಅದಕ್ಕಿಂತ ದುಪ್ಪಟ್ಟು ವೇಗದಲ್ಲಿ ಆಧುನೀಕರಣ ಗೊಂಡಿದೆ. ಆದರೆ ಬರ ಬರುತ್ತಾ ರಾಯರ ಕುದುರೆ ಕತ್ತೆ ಆಯಿತು ಅನ್ನೋ ಗಾದೆ ಮಾತಿನ ಹಾಗೆ ನಮ್ಮ ದೇಶದ ಮಾಧ್ಯಮಗಳು ಅದರಲ್ಲೂ ಮುಖ್ಯವಾಗಿ ದೃಶ್ಯ ಮಾಧ್ಯಮಗಳು ಜನರನ್ನು ಮಂಗ ಮಾಡುವುದರಲ್ಲಿ ಪೈಪೋಟಿ ನಡೆಸುತ್ತಿದೆ. ಪುಲ್ವಾಮ ಭಯೋತ್ಪಾದಕ ದಾಳಿಯಾದ ಬಳಿಕ ನಮ್ಮ ದೇಶದ ಮಾಧ್ಯಮಗಳು ಹರಿ ಬಿಟ್ಟ ಸುಳ್ಳುಗಳು ಲೆಕ್ಕ ಹಾಕಿದರೆ ಲೋಡು ಲೆಕ್ಕದಲ್ಲಿ ಸಿಗಬಹುದೇನೋ! ಮಾಧ್ಯಮಗಳ ಮೂಲಕ ಜನರನ್ನು ಒಂದು ರೀತಿಯಲ್ಲಿ ಕಂಫ್ಯೂಶನ್ ನಲ್ಲಿ ಇಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಾಧ್ಯಮಗಳ ಕೋಮುವಾದೀಕರಣವಾಗಿದೆ ಎನ್ನುವುದು ದುರಂತ. ಸಂವಿಧಾನದ ಕಾವಲು ನಾಯಿಯಾಗಿರಬೇಕಾದ ಜವಾಬ್ದಾರಿಯುತ ಮಾಧ್ಯಮಗಳು ದೇಶದ ಜನರಿಗೆ ದೇಶ ಪ್ರೇಮ, ದೇಶ ದ್ರೋಹ ಹಾಗೂ ಮಾನಸಿಕ ಅಸ್ವಸ್ಥತೆ ಸರ್ಟಿಫಿಕೇಟ್ ವಿತರಣೆ ಮಾಡುತ್ತಿದೆ. ಮೊನ್ನೆ ಉಡುಪಿಯಲ್ಲಿ ಮುಖಕ್ಕೆ ಬಟ್ಟೆ ಕಟ್ಟಿ ಪಾಕಿಸ್ತಾನಕ್ಕೆ ಜೈ ಕಾರ ಹಾಕಿ ಮಲ್ಪೆಗೆ ಬಾಂಬ್ ಹಾಕುವುದಾಗಿ ಬೆದರಿಸಿ ಅರೆಸ್ಟ್ ಆದ ಸೃಜನ್ ಪೂಜಾರಿ ಎಂಬ ಯುವಕನನ್ನು ಉಡುಪಿಯ ಸ್ಥಳೀಯ ದೃಶ್ಯ ಮಾಧ್ಯಮವೊಂದು ಸೂಪರ್ ಸಾನಿಕ್ ವೇಗದಲ್ಲಿ ಮಾನಸಿಕ ಅಸ್ವಸ್ಥ ಎಂದು ಘೋಷಿಸಿದೆ. ಈ ಹಿಂದೆ ಕೂಡ ನಿರ್ದಿಷ್ಟ ಸಂಘಟನೆಗೆ ಸೇರಿದ ವ್ಯಕ್ತಿಗಳು ಈ ರೀತಿ ಮಾಡಿದಾಗ ಮಾಧ್ಯಮಗಳು ಇದೇ ರೀತಿ ಹೇಳಿದೆ. ನಿಜಕ್ಕೂ ಇಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗುತ್ತಿಲ್ಲ.

ಈ ಮಾಧ್ಯಮಗಳು ಯಾಕಾಗಿ ಈ ರೀತಿ ವರ್ತಿಸುತ್ತಿದೆ. ಕೋಮುವಾದದಿಂದ ದೇಶಕ್ಕೆ ನಾಶವೇ ಹೊರತು ಯಾವುದೇ ಲಾಭವಿಲ್ಲ. ಲಾಭವಾಗುವುದಾದರೂ ಒಂದಷ್ಟು ರಾಜಕೀಯ ಪಕ್ಷಗಳಿಗೆ ಮಾತ್ರ. ಫೈಲುಗಟ್ಟಲೆ ವಿದ್ಯಾಭ್ಯಾಸದ ಸರ್ಟಿಫಿಕೆಟ್ ಪಡೆದುಕೊಂಡು ಸೂಟು ಬೂಟು ಹಾಕಿ ಕಚೇರಿಯಲ್ಲಿ ಕುಳಿತಿರುವ ಮಾಧ್ಯಮ ಮಂದಿಗೆ ಯಾಕೆ ಇದು ಅರ್ಥವಾಗುತ್ತಿಲ್ಲ. ಭಯೋತ್ಪಾದನೆ ಯಾರೇ ಮಾಡಿದರೂ ಆತ ಭಯೋತ್ಪಾದಕನೇ ಆಗುತ್ತಾನೆ. ಅದಕ್ಕೆ ಧರ್ಮ ಜಾತಿಯ ಬೇಲಿ ಇಲ್ಲ. ಇರಲೂ ಬಾರದು. ನೀವು ಒಬ್ಬ ಭಯೋತ್ಪಾದಕನನ್ನು ಮಾನಸಿಕ ಅಸ್ವಸ್ಥ ಅಂತ ರಕ್ಷಿಸಲು ಹೊರಟರೆ ನೀವು ಮಾಡುತ್ತಿರುವುದು ಕೂಡ ದೇಶದ್ರೋಹಿ ಕೆಲಸನೇ ನೆನಪಿಟ್ಟು ಕೊಳ್ಳಿ ಮಾಧ್ಯಮಗಳೆ.

Check Also

ಏನಿದು ಅಭಿನಂದನ್ ಬಿಡುಗಡೆಗೆ ಕಾರಣವಾದ ಜಿನೆವಾ ಒಪ್ಪಂದ?

116ಸಂದೇಶ ಇ-ಮ್ಯಾಗಝಿನ್: ಭಾರತದ ವಾಯು ಸೇನೆಯ ಮಿಗ್ -21 ಫೈಟರ್ ಜೆಟ್‌ನ ಫೈಟರ್ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ …

Leave a Reply

Your email address will not be published. Required fields are marked *