Thursday , June 20 2019
Breaking News
Home / ರಾಷ್ಟ್ರೀಯ / ಮಾಲ್ಡೀವ್ಸ್‌ನಲ್ಲಿ ಈ ಮಸೀದಿಯ ಸಂರಕ್ಷಣೆಗಾಗಿ ಭಾರತ ಸಹಾಯ ಮಾಡಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ

ಮಾಲ್ಡೀವ್ಸ್‌ನಲ್ಲಿ ಈ ಮಸೀದಿಯ ಸಂರಕ್ಷಣೆಗಾಗಿ ಭಾರತ ಸಹಾಯ ಮಾಡಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ

ಸಂದೇಶ ಇ-ಮ್ಯಾಗಝಿನ್: ಶನಿವಾರ ಮಾಲ್ಡೀವ್ಸ್‌ಗೆ ಭೇಟಿ ನೀಡಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾಲ್ಡೀವ್ಸ್‌ನ್ ಅತ್ಯಂತ ಹಳೆಯ ಮತ್ತು ಪ್ರತಿಷ್ಟಿತ ಶುಕ್ರವಾರ ಮಸೀದಿ ಎಂದು ಅರಿಯಲ್ಪಡುವ ಹುಕುರು ಮಿಸ್ಕಿಯನ್ನು ಸಂರಕ್ಷಿಸಲು ಭಾರತವು ಮಾಲ್ಡೀವ್ಸ್‌ಗೆ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ. ಹವಳದ ಕಲ್ಲುಗಳಿಂದ ನಿರ್ಮಿಸಲ್ಪಟ್ಟ ಈ ಮಸೀದಿಯು ಮಾಲ್ಡೀವ್ಸ್‌ನ ಒಂದು ಐತಿಹಾಸಿಕ ಹೆಗ್ಗುರುತಾಗಿದೆ.

ಮಾಲ್ಡೀವ್ಸ್ ಪಾರ್ಲಿಮೆಂಟ್ ಪೀಪಲ್ಸ್ ಮಜ್ಲಿಸ್‌ನಲ್ಲಿ ಶನಿವಾರ ಮಾತನಾಡಿದ ಮೋದಿ, ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಇತಿಹಾಸಕ್ಕಿಂತಲೂ ಹಳೆಯದು ಎಂದು ಹೇಳಿದರು. ಮಾಲ್ಡೀವ್ಸ್‌ನ ಐತಿಹಾಸಿಕ ಹೆಗ್ಗುರುತಾದ ಹೂಕುರು ಮಿಸ್ಕಿ ಎಂದು ಕರೆಯಲಾಗುವ ಶುಕ್ರವಾರ ಮಸೀದಿಯನ್ನು ಸಂರಕ್ಷಿಸಲು ಭಾರತ ಮಾಲ್ಡೀವ್ಸ್‌ಗೆ ಸಹಾಯ ಮಾಡಲಿದೆ ಎಂದು ಹೇಳಿದರು.

ಮಾಲ್ಡೀವ್ಸ್ ಸುಸ್ಥಿರ ಅಭಿವೃದ್ಧಿಯ ಕಡೆಗೆ ಕೆಲಸ ಮಾಡುತ್ತಿದೆ. ಮತ್ತು ಅಂತರರಾಷ್ಟ್ರೀಯ ಸೌರ ಒಕ್ಕೂಟದ ಭಾಗವಾಗಿರುವುದರ ಬಗ್ಗೆ ಭಾರತಕ್ಕೆ ಸಂತೋಷವಿದೆ ಎಂದು ಅವರು ಹೇಳಿದರು. ಜಗತ್ತಿನಲ್ಲಿ ಹೂಕುರು ಮಿಸ್ಕಿ ಯಂತಹ ಇನ್ನೊಂದು ಮಸೀದಿಯಿಲ್ಲ. ಈ ಮಸೀದಿ ಸಂಪೂರ್ಣವಾಗಿ ಹವಳದ ಕಲ್ಲಿನಿಂದ ಮಾಡಲ್ಪಟ್ಟಿರುವುದು ವಿಶೇಷ ಎಂದು ಮೋದಿ ಕೊಂಡಾಡಿದರು.

ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಭಾರತೀಯ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ವತಿಯಿಂದ ಶುಕ್ರವಾರ ಮಸೀದಿಯ ಮರುಸ್ಥಾಪನೆ ನಡೆಸಲು ಕೊಡುಗೆ ನೀಡುವುದಾಗಿ ಹೇಳಿದ ಭಾರತಕ್ಕೆ ಮತ್ತು ಭಾರತೀಯ ಪ್ರಧಾನಿಗೆ ಧನ್ಯವಾದ ಹೇಳಿದ್ದಾರೆ.

1658 ರಲ್ಲಿ ಸ್ಥಾಪನೆಯಾದ ಈ ಮಸೀದಿಯು ಮಾಲೆ ನಗರದ ಅತ್ಯಂತ ಹಳೆಯ ಮಸೀದಿಯಾಗಿದೆ. 2008 ರಲ್ಲಿ ಈ ಮಸೀದಿಯನ್ನು ವಿಶ್ವಸಂಸ್ಥೆಯ ಯುನೆಸ್ಕೋ ತನ್ನ ವಿಶ್ವ ಪಾರಂಪರಿಕ ತಾಣದಲ್ಲಿ ಸೇರಿಸಿತ್ತು. ಹವಳದ ಕಲ್ಲಿನಿಂದ ನಿರ್ಮಿಸಲಾಗಿರುವ ಈ ಮಸೀದಿಯನ್ನು ಸಮುದ್ರ ಸಂಸ್ಕೃತಿ ವಾಸ್ತುಕಲೆಯ ಅದ್ವಿತೀಯ ಉದಾಹರಣೆ ಎನ್ನಲಾಗಿದೆ.

Check Also

ಉಗ್ರರ ಗುಂಡಿಗೆ ಎದೆಯೊಡ್ಡಿದ್ದ ಜಮ್ಮು ಪೊಲೀಸ್ ಅಧಿಕಾರಿ ಅರ್ಶದ್ ಅಹ್ಮದ್ ಹುತಾತ್ಮ

101ಸಂದೇಶ ಇ-ಮ್ಯಾಗಝಿನ್: ಜೂನ್ 12 ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ …

Leave a Reply

Your email address will not be published. Required fields are marked *