Monday , August 26 2019
Breaking News
Home / ರಾಷ್ಟ್ರೀಯ / 57 ಮುಸ್ಲಿಮ್ ದೇಶಗಳ ಒಕ್ಕೂಟವಾದ OIC ಯ ಈ ಪ್ರಸ್ತಾವವನ್ನು ಭಾರತ ವಜಾ ಮಾಡಿದೆ

57 ಮುಸ್ಲಿಮ್ ದೇಶಗಳ ಒಕ್ಕೂಟವಾದ OIC ಯ ಈ ಪ್ರಸ್ತಾವವನ್ನು ಭಾರತ ವಜಾ ಮಾಡಿದೆ

ಸಂದೇಶ ಇ-ಮ್ಯಾಗಝಿನ್: ಕಾಶ್ಮೀರದ ಬಗ್ಗೆ OIC (ಇಸ್ಲಾಮಿಕ್ ದೇಶಗಳ ಒಕ್ಕೂಟ) ಉಲ್ಲೇಖಿಸಿರುವುದರ ಬಗ್ಗೆ ಭಾರತ ಮತ್ತೊಮ್ಮೆ ಅಸಮ್ಮತಿ ವ್ಯಕ್ತಪಡಿಸಿದೆ. ಜಮ್ಮು ಕಾಶ್ಮೀರವು OIC ಯ ಅಧಿಕಾರ ವ್ಯಾಪ್ತಿಯೊಳಗೆ ಬರುವುದಿಲ್ಲ ಮತ್ತು ಇದು ಭಾರತದ ಅವಿಭಾಜ್ಯ ಭಾಗವಾಗಿದೆ ಎಂದು ಭಾರತ ಹೇಳಿದೆ. ಅಮರ್ ಉಜಾಲಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಿದೇಶಾಂಗ ಸಚಿವಾಲಯದ ವಕ್ತಾರ ರವಿಶ್ ಕುಮಾರ್ ಅವರು, “ಜಮ್ಮು ಕಾಶ್ಮೀರ ರಾಜ್ಯವು ಭಾರತದ ಒಂದು ಅವಿಭಾಜ್ಯ ಭಾಗವಾಗಿದೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯವು OIC ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮೇ 31 ರಂದು ಸೌದಿ ಅರೇಬಿಯಾದ ಮಕ್ಕಾದಲ್ಲಿ OICಯ 14 ನೇ ಶೃಂಗಸಭೆಯಲ್ಲಿ ಅಂಗೀಕರಿಸಿದ ಕೊನೆಯ ಹೇಳಿಕೆಯಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಭಾಗ ಎಂದು ಒಪ್ಪಿಕೊಳ್ಳಲಾಗದ ಪ್ರಸ್ತಾಪವನ್ನು ನಾವು ವಜಾಗೊಳಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದು ಮಾತ್ರವಲ್ಲ, OIC ಅಂತಹ ಅನಗತ್ಯ ಉಲ್ಲೇಖಗಳನ್ನು ತಪ್ಪಿಸಬೇಕೆಂಬುದನ್ನು ಭಾರತ ಪುನರಾವರ್ತಿಸುತ್ತದೆ ಎಂದು ರವಿಶ್ ಕುಮಾರ್ ಒತ್ತಾಯಿಸಿದರು.

ಮಕ್ಕಾದಲ್ಲಿ ನಡೆದ OIC ಶೃಂಗಸಭೆಯಲ್ಲಿ ಕಾಶ್ಮೀರಕ್ಕೆ ಸಂಭಂದಿತ ಆರೋಪಿತ ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯವನ್ನು ಪ್ರಸ್ತಾಪಿಸಲಾಗಿತ್ತು. ಯುಎನ್ ಕಮಿಷನ್ ಮತ್ತು ಇತರ ಅಂತಾರಾಷ್ಟ್ರೀಯ ಸಂಘಟನೆಗಳು ಅಲ್ಲಿಗೆ ಹೋಗಲು ಅವಕಾಶ ನೀಡಬೇಕು ಎಂದು ಸಭೆಯು ಭಾರತದೊಂದಿಗೆ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ತಿರಸ್ಕರಿಸಿರುವ ಭಾರತ ಇದು ತನ್ನ ಆಂತರಿಕ ವಿಚಾರವಾಗಿದೆ ಎಂದು ಹೇಳಿದೆ. OIC 57 ಮುಸ್ಲಿಮ್ ರಾಷ್ಟ್ರಗಳ ಒಕ್ಕೂಟ ಸಂಘಟನೆಯಾಗಿದ್ದು, ಕಳೆದ ಶುಕ್ರವಾರ ಸೌದಿ ಅರೇಬಿಯಾದ ಮಕ್ಕಾದಲ್ಲಿ ಇದರ 14 ನೇ ಶೃಂಗಸಭೆ ನಡೆದಿತ್ತು.

Check Also

ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

000ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್ ಅವರು ಈ ಪ್ರದೇಶದಲ್ಲಿ ವಾಸಿಸುವ …

Leave a Reply

Your email address will not be published. Required fields are marked *