Monday , August 26 2019
Breaking News
Home / ರಾಷ್ಟ್ರೀಯ / ಬಾರದ ಅಚ್ಚೇದಿನ್ ದೇಶದಲ್ಲಿ ಉದ್ಯೋಗಕ್ಕಾಗಿ ಆಹಾಕಾರ..!

ಬಾರದ ಅಚ್ಚೇದಿನ್ ದೇಶದಲ್ಲಿ ಉದ್ಯೋಗಕ್ಕಾಗಿ ಆಹಾಕಾರ..!

ದೆಹಲಿ, ಎ.17: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹಿಂದೆಂದಿಗಿಂತಲೂ ಅತೀ ಉನ್ನತ ಮಟ್ಟಕ್ಕೇರಿದ್ದು, ಈ ಸಮಸ್ಯೆಯಿಂದ ಮುಕ್ತಿ ಹೊಂದ ಬೇಕಾದರೆ ಭಾರತ ಪ್ರತೀವರ್ಷ 81 ಲಕ್ಷ ಉದ್ಯೋಗ ಸೃಷ್ಟಿಸಬೇಕು ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯ ಪಟ್ಟಿದೆ.

ವಿಶ್ವ ಬ್ಯಾಂಕಿನ ಪ್ರಕಾರ, ಪ್ರತೀ ತಿಂಗಳು ಭಾರತದಲ್ಲಿ 13 ಲಕ್ಷ ಜನರು ಉದ್ಯೋಗ ಮಾಡುವ ಪ್ರಾಯಕ್ಕೆ ಪ್ರವೇಶಿಸುತ್ತಿದ್ದಾರೆ. ಇವರೆಲ್ಲರಿಗೆ ಉದ್ಯೋಗ ದೊರೆಯಬೇಕಾದರೆ ಭಾರತ ಪ್ರತೀ ವರ್ಷ 81 ಲಕ್ಷ ಉದ್ಯೋಗ ಸೃಷ್ಟಿಸಬೇಕು.

ಆರ್ಥಿಕ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಇದೀಗ ತುರ್ತಾಗಿ 1.5ಕೋಟಿ ಉದ್ಯೋಗದ ಅವಶ್ಯಕತೆ ಇದೆ. ಆದರೆ ಇಲ್ಲಿ ಉದ್ಯೋಗ ನೀಡುವ ಕಂಪನಿಗಳನ್ನು ನೋಡಿದರೆ ಎನ್‌ಎಚ್‌ಪಿಎಸಿ, ಓಎನ್‌ಜಿಸಿ, ಕೋಲ್ ಇಂಡಿಯಾ, ಭಾರತೀಯ ರೈಲ್ವೆ ಯಂತಹ ಸರಕಾರಿ ಸಂಸ್ಥೆಯಲ್ಲಿ ನೇಮಕಾತಿಗಳನ್ನು ಮುಚ್ಚಲಾಗಿದೆ. ಈ ಕಂಪೆನಿಗಳು ಇದೀಗ ಯಾವುದೇ ಹೊಸ ಉದ್ಯೋಗವನ್ನು ಘೋಷಿಸುತ್ತಿಲ್ಲ ಮಾತ್ರವಲ್ಲದೆ ಇರುವ ಉದ್ಯೋಗಿಗಳು ತಮ್ಮ ನೌಕರಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎನ್ನಲಾಗಿದೆ.

ಅದೇ ರೀತಿ ಖಾಸಗಿ ವಲಯವನ್ನು ನೋಡಿದರೆ ಅಲ್ಲೂ ಕೂಡ ನಿರಾಸೆಯೇ ಕಾಣುತ್ತಿದೆ. ಖಾಸಗಿ ವಲಯದಲ್ಲಿ ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್ ನಂತಹ ದೊಡ್ಡ ದೊಡ್ಡ ಕಂಪೆನಿಗಳು ಹೊಸ ನೇಮಕಾತಿಗಳನ್ನು ಮಾಡಿಕೊಳ್ಳುತ್ತಿಲ್ಲ.

ಭಾರತೀಯ ರಿಝರ್ವ್ ಬ್ಯಾಂಕಿನ ಸರ್ವೆಯ ಪ್ರಕಾರ, 2015-16 ರ ಆರ್ಥಿಕ ವರ್ಷದಲ್ಲಿ 0.1 ಶೇಕಡ ನೌಕರಿಯ ಕೊರತೆ ಉಂಟಾಗಿದ್ದು, ಇದು 2016-17ರ ಆರ್ಥಿಕ ವರ್ಷದಲ್ಲಿ 0.2 ಗೆ ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ನೀಡಿದ್ದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದ್ದು, ಇದೀಗ ವರ್ಷಕ್ಕೆ 2ಲಕ್ಷ ಉದ್ಯೋಗ ಕೂಡ ಸೃಷ್ಟಿಯಾಗುತ್ತಿಲ್ಲ ಎನ್ನುವುದು ವಾಸ್ತವವಾಗಿದೆ.

Check Also

ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

000ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್ ಅವರು ಈ ಪ್ರದೇಶದಲ್ಲಿ ವಾಸಿಸುವ …

Leave a Reply

Your email address will not be published. Required fields are marked *