Friday , November 15 2019
Breaking News
Home / ಕ್ರೀಡೆ / ವಲ್ಡ್ ಕಪ್ 2019: ಸೆಮಿಫೈನಲಿನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ ಸೋಲು

ವಲ್ಡ್ ಕಪ್ 2019: ಸೆಮಿಫೈನಲಿನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ ಸೋಲು

ಸಂದೇಶ ಇ-ಮ್ಯಾಗಝಿನ್: 2019 ರ ವಲ್ಡ್ ಕಪ್ ಮೊದಲ ಸೆಮಿಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್‌ ವಿರುದ್ಧ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದಿದೆ. ಮಳೆ ಅಡ್ಡಿಪಡಿಸಿದ್ದ ನಿನ್ನೆಯ ಶೇಷ ಪಂದ್ಯದಲ್ಲಿ, ಟಾಸ್ ಗೆದ್ದಿದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಭಾರತಕ್ಕೆ 240 ರನ್ ಗಳಿಸುವ ಗುರಿ ನಿಗದಿಪಡಿಸಿತು. ಇದಕ್ಕೆ ಉತ್ತರಿಸಿದ ಭಾರತ 221 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಟೂರ್ನಿಯ ಫೇವರಿಟ್ ತಂಡವಾಗಿದ್ದ ಭಾರತ ಇಂದಿನ ಇನ್ನಿಂಗ್ಸ್ ನಲ್ಲಿ ಅತ್ಯಂತ ಕಳಪೆ ಆಟ ಪ್ರದರ್ಶಿಸಿದ್ದು, ಕೇವಲ ನಾಲ್ಕು ಓವರ್‌ಗಳಲ್ಲಿ ಟೀಮ್ ಇಂಡಿಯಾ ತಮ್ಮ ಅಗ್ರ ಮೂರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತು. ಎರಡನೇ ಓವರ್‌ನಲ್ಲಿ ರೋಹಿತ್ ಶರ್ಮಾ (1), ಮೂರನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ (1) ಮತ್ತು ನಾಲ್ಕನೇ ಓವರ್‌ನಲ್ಲಿ ಕೆ.ಎಲ್.ರಾಹುಲ್ (1) 10 ನೇ ಓವರ್‌ನಲ್ಲಿ ದಿನೇಶ್ ಕಾರ್ತಿಕ್ (6) ಅವರನ್ನು ಮ್ಯಾಟ್ ಹೆನ್ರಿ ಮತ್ತು ಟ್ರೆಂಟ್ ಬೌಲ್ಟ್ ಜೋಡಿ ಪೆವಿಲಿಯನ್‌ಗೆ ಸೇರಿಸಿದರು.

ಕೊನೆಯಲ್ಲಿ ಒಂದಷ್ಟು ಹೋರಾಟ ಮಾಡಿದ ರವೀಂದ್ರ ಜಡೇಜಾ(74) ಹಾಗೂ ಧೋನಿ (51) ಜೋಡಿಯ ಜೊತೆಯಾಟ ಜಡೇಜಾ 48 ನೇ ಓವರ್‌ನ ಮೊದಲ ಎಸೆತದಲ್ಲಿ ಟಾಮ್ ಲಾಥಮ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಮುರಿಯಿತು. ಇದು ಭಾರತದ ಗೆಲುವಿನ ಕನಸನ್ನು ನುಚ್ಚು ನೂರು ಮಾಡಿತು. ನಂತರ ಧೋನಿ ರನ್ ಔಟ್ ಆಗುವ ಮೂಲಕ ಪೆಲಿಯನ್ ಸೇರಿದರು. ಕೊನೆಗೆ ಬಂದ ಟೇಲಂಡರ್ ಗಳು ಬೇಗ ಬೇಗ ವಿಕೆಟ್ ಒಪ್ಪಿಸುವ ಮೂಲಕ ಭಾರತ 221ರನ್ನಿಗೆ ಆಲ್ ಔಟ್ ಆಗಿ, ನ್ಯೂಝಿಲ್ಯಾಂಡ್ ತಂಡವು 19 ರನ್ನುಗಳ ಜಯ ದಾಖಲಿಸಿತು.

Check Also

ವಲ್ಡ್ ಕಪ್ ಫೈನಲ್: ಕಳಪೆ ಅಂಪಾಯರಿಂಗ್ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ

ಸಂದೇಶ ಇ-ಮ್ಯಾಗಝಿನ್: 2019 ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ವಿವಾದಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ಏಕೆಂದರೆ ಮಾಜಿ ಅಂತರರಾಷ್ಟ್ರೀಯ ಅಂಪೈರ್ …

Leave a Reply

Your email address will not be published. Required fields are marked *