Friday , November 15 2019
Breaking News
Home / ವೀಡಿಯೋ / ಗೋಡ್ಸೆ ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ: ನಟ ಕಮಲ ಹಾಸನ್ ಹೇಳಿಕೆ

ಗೋಡ್ಸೆ ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ: ನಟ ಕಮಲ ಹಾಸನ್ ಹೇಳಿಕೆ

ಸಂದೇಶ ಇ-ಮ್ಯಾಗಝಿನ್: ‘ಮಕ್ಕಳ್ ನೀದಿ ಮೈಯಮ್’ ಪಕ್ಷದ ಮುಖಂಡ ಕಮಲ್ ಹಾಸನ್ ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆ ಗೈದಿದ್ದ ನಾಥೂರಾಮ್ ಗೋಡ್ಸೆಯನ್ನು ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ಎಂದು ಬಣ್ಣಿಸಿದ್ದಾರೆ. ನಾನು ಈ ಮಾತನ್ನು ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿರುವ ಮುಸ್ಲಿಮರನ್ನು ಓಲೈಕೆ ಮಾಡುವ ದೃಷ್ಟಿಯಿಂದ ಹೇಳುತ್ತಿಲ್ಲ. ನೀವು ನನ್ನ ಹೇಳಿಕೆಯನ್ನು ಆ ದೃಷ್ಟಿಯಿಂದ ನೋಡುವ ಅಗತ್ಯವೂ ಇಲ್ಲ ಎಂದು ಅರ್ವಾಕುರಿಚ್ಚಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಗೆ ಸ್ಪರ್ಧಿಸುತ್ತಿರುವ ತಮ್ಮ ಪಕ್ಷದ ಅಭ್ಯರ್ಥಿ ಪರ ರವಿವಾರ ಮತಯಾಚನೆ ಮಾಡುತ್ತಾ ಈ ಮಾತನ್ನು ಹೇಳಿದ ಕಮಲ ಹಾಸನ್, ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದಾಗಿತ್ತು ಎಂದು ಹೇಳಿದರು. ನಾನು ನನ್ನ ಆತ್ಮಸಾಕ್ಷಿಯಲ್ಲಿ ಮಹಾತ್ಮಾಗಾಂಧಿಯವರ ಮರಿಮೊಮ್ಮಗನಾಗಿದ್ದೇನೆ. ನನ್ನ ಮುತ್ತಾತನ ಕೊಲೆಯನ್ನು ನಾನು ಪ್ರಶ್ನಿಸುತ್ತಿದ್ದೇನೆ ಎಂದು ಕಮಲ್ ಹೇಳಿದ್ದಾರೆ.

Check Also

ತನ್ನ ಉಳಿತಾಯದ ಹಣದಲ್ಲಿ ಹಜ್‌ಗೆ ಹೊರಟ ತಂದೆಗೆ ಮಕ್ಕಳು ಮಾಡಿದರು ಈ ಸ್ಥಿತಿ

ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನದ ಸಿಂಧ್‌ನಲ್ಲಿ ತಂದೆಯು ಹಣವನ್ನು ಪುತ್ರರಿಗೆ ಕೊಡುವ ಬದಲು ಹಜ್‌ಗಾಗಿ ಬಳಸಿದ್ದಕ್ಕಾಗಿ ವೃದ್ಧ ತಂದೆಯನ್ನು ಪುತ್ರರು ಥಳಿಸಿದ …

Leave a Reply

Your email address will not be published. Required fields are marked *