Friday , November 15 2019
Breaking News
Home / ಕ್ರೀಡೆ / ನಿನ್ನೆಯ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಈ 13 ಹೊಸ ದಾಖಲೆಗಳು ನಿರ್ಮಾಣವಾಗಿದೆ

ನಿನ್ನೆಯ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಈ 13 ಹೊಸ ದಾಖಲೆಗಳು ನಿರ್ಮಾಣವಾಗಿದೆ

ಸಂದೇಶ ಇ-ಮ್ಯಾಗಝಿನ್: ನಿನ್ನೆಯ ರೋಮಾಂಚಕಕಾರಿ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಭರ್ಜರಿಯಾಗಿ ಸೋಲಿಸಿ ಇತಿಹಾಸವನ್ನು ಮರುಕಳಿಸಿತು. ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲುವನ್ನೇ ಕಾಣದ ಪಾಕಿಸ್ತಾನಕ್ಕೆ ವಿಶ್ವಕಪ್ ಇತಿಹಾಸದಲ್ಲಿ ಇದು ಭಾರತದ ವಿರುದ್ಧದ ಸತತ ಏಳನೇ ಬಾರಿಯ ಸೋಲಾಗಿದೆ. ಇದರ ಜೊತೆ ಈ ಪಂದ್ಯದಲ್ಲಿ ಇತರ 13 ಹೊಸ ದಾಖಲೆಗಳನ್ನು ಆಟಗಾರರು ಈ ಪಂದ್ಯದಲ್ಲಿ ಬರೆದಿದ್ದಾರೆ.

ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಸಚಿನ್ ತೆಂಡುಲ್ಕರ್ ಅವರನ್ನು ಹಿಂದಿಕ್ಕಿ ಅತೀ ವೇಗವಾಗಿ 11000 ರನ್ ಮಾಡಿದ ಕೀರ್ತಿಗೆ ಪಾತ್ರವಾದರು. ಸಚಿನ್ 11000 ರನ್ ಪೂರೈಸಲು 276 ಇನ್ನಿಂಗ್ಸ್ ತೆಗೆದು ಕೊಂಡರೆ, ವಿರಾಟ್ ಕೇವಲ 222 ಇನ್ನಿಂಗ್ಸ್ ನಲ್ಲೇ ಪೂರೈಸಿದ್ದಾರೆ.

ಟೀಮ್ ಇಂಡಿಯಾ ವಿಶ್ವ ಕಪ್ ನಲ್ಲಿ ಪಾಕಿಸ್ತಾನ ತಂಡವನ್ನು 7 ನೇ ಬಾರಿಗೆ ಸೋಲಿಸಿತು. ಸತತ ವಾಗಿ ಒಂದೇ ತಂಡವನ್ನು ವಿಶ್ವಕಪ್ ನಲ್ಲಿ ಸೋಲಿಸಿದ್ದು ಕೂಡ ವಲ್ಡ್ ರೆಕಾರ್ಡ್ ಆಗಿದೆ.

ಟೀಮ್ ಇಂಡಿಯಾದ ಆಲ್ ರೌಂಡರ್ ವಿಜಯ್ ಶಂಕರ್ ತಮ್ಮ ಪ್ರಥಮ ವಲ್ಡ್ ಕಪ್‍೬ನ ಪ್ರಥಮ ಎಸೆತದಲ್ಲೇ ವಿಕೆಟ್ ಪಡೆದು ದಾಖಲೆ ಬರೆದರು. 44 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ವಿಜಯ ಶಂಕರ್ ಆಗಿದ್ದಾರೆ.

ನಿನ್ನೆ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಅವರ ಬ್ಯಾಟ್ ನಲ್ಲಿ ನಿನ್ನೆ 77 ರನ್ ಬಂದಿತ್ತು. ಪಾಕಿಸ್ತಾನ ತಂಡದ ವಿರುದ್ಧ ವಲ್ಡ್ ಕಪ್ ಪಂದ್ಯದಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತೀಯ ಕಪ್ತಾನ ದಾಖಲೆ ವಿರಾಟ್ ಹೆಗಲಿಗೆ ಬಿತ್ತು.

ಪಾಕಿಸ್ತಾನ ತಂಡವನ್ನು ವಲ್ಡ್ ಕಪ್ ಪಂದ್ಯದಲ್ಲಿ ನಿನ್ನೆ ಟೀಮ್ ಇಂಡಿಯಾವು 89 ರನ್ ಗಳಿಗೆ ಸೋಲಿಸಿದೆ. ಇದು ವಲ್ಡ್ ಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಇದುವರೆಗಿನ ಅತೀ ದೊಡ್ಡ ಗೆಲುವಾಗಿದೆ.

ರೋಹಿತ್ ಶರ್ಮ ಸತತವಾಗಿ ಮೂರನೇ ಬಾರಿ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದು ದಾಖಲೆ ಬರೆದರು. ವಲ್ಡ್ ಕಪ್ ಟೂರ್ನಿಯಲ್ಲಿ ಅತ್ಯಧಿಕ ಬಾರಿ ಅಂದರೆ 9 ಬಾರಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದ ದಾಖಲೆ ಸಚಿನ್ ಹೆಸರಲ್ಲಿದೆ.

ಶೊಯೆಬ್ ಮಲಿಕ್ ಭಾರತದ ವಿರುದ್ಧ ವಲ್ಡ್ ಕಪ್‌ನಲ್ಲಿ ಗೋಲ್ಡನ್ ಡಕ್‌ನಲ್ಲಿ ಔಟ್ ಆದ ಎರಡನೇ ಆಟಗಾರನೆನಿಸಿಕೊಂಡರು. ತಮ್ಮದೇ ಬ್ಯಾಟಲ್ಲಿ ಚೆಂಡನ್ನು ಹೊಡೆದು ವಿಕೆಟ್‌ಗೆ ಹಿಟ್ ಮಾಡುವುದಕ್ಕೆ ಕ್ರಿಕೆಟ್‌‍ನಲ್ಲಿ ಗೋಲ್ಡನ್ ಡಕ್ ಎನ್ನುತ್ತಾರೆ. ನಿನ್ನೆಯ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಚೆಂಡಿಗೆ ಪಾಕಿಸ್ತಾನದ ಭರವಸೆಯ ಆಟಗಾರ ಶೊಹೆಬ್ ಮಲಿಕ್ ಇದೇ ರೀತಿ ಔಟ್ ಆಗಿದ್ದಾರೆ.

ಇಂಗ್ಲೇಂಡ್ ನೆಲದಲ್ಲಿ ಭಾರತದ ಪರವಾಗಿ ಅತ್ಯಧಿಕ ಶತಕ ಬಾರಿಸಿದ ಆಟಗಾರ ಎಂಬ ಶಿಖರಧವನ್ ದಾಖಲೆಯನ್ನು ರೋಹಿತ್ ಶರ್ಮ ಸರಿಗಟ್ಟಿದರು. ಇದೀಗ ಇಬ್ಬರೂ 4-4 ರಲ್ಲಿದ್ದಾರೆ.

ನಿನ್ನೆ ಪಾಕಿಸ್ತಾನದ ವಿರುದ್ಧದ ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾರ 136 ರನ್ನುಗಳ ಜೊತೆಯಾಟ ಪಾಕಿಸ್ತಾನದ ವಿರುದ್ಧ ಭಾರತೀಯ ಆಟಗಾರರು ವಲ್ಡ್ ಕಪ್ ಪಂದ್ಯದಲ್ಲಿ ಮಾಡಿದ ಅತ್ಯಧಿಕ ರನ್ನುಗಳ ಜೊತೆಯಾಟವಾಗಿದೆ.

ವಲ್ಡ್ ಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಶತಕ ದಾಖಲಿಸಿದ ಎರಡನೆ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ನಿನ್ನೆ ಪಾತ್ರವಾದರು. ಇದಕ್ಕಿಂತ ಮೊದಲು 2015 ರಲ್ಲಿ ಕೊಹ್ಲಿ ಈ ದಾಖಲೆ ಮಾಡಿದ್ದರು.

ಇಂಗ್ಲೇಂಡ್‌ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆ ರೋಹಿತ್ ಶರ್ಮ ತಮ್ಮ ಹೆಸರಿಗೆ ಬರೆಸಿಕೊಂಡರು. ಈ ಮೊದಲು 17 ಸಿಕ್ಸರ್ ಬಾರಿಸಿದ್ದ ಸೌರವ್ ಗಂಗೋಲಿ ಹೆಸರಿಗೆ ಇತ್ತು. ಇದೀಗ ರೋಹಿತ್ 19 ಸಿಕ್ಸರ್ ಬಾರಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಬ್ಯಾಕ್ ಟು ಬ್ಯಾಕ್ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಕೂಡ ರೋಹಿತ್ ಶರ್ಮ ಹೆಸರಿಗೆ ದಾಖಲಾಯಿತು.

ಇಂಗ್ಲೇಂಡ್ ನಲ್ಲಿ ಆಡಿದ ಪಂದ್ಯದಲ್ಲಿ ಅತೀ ವೇಗವಾಗಿ 1000 ರನ್ ಪೂರೈಸಿದ ಭಾರತೀಯ ಆಟಗಾರ ಎಂಬ ದಾಖಲೆ ಕೂಡ ರೋಹಿತ್ ಹೆಸರಿಗೆ ದಾಖಲಾಯಿತು. ಅವರು 18 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ.

Check Also

ವಲ್ಡ್ ಕಪ್ ಫೈನಲ್: ಕಳಪೆ ಅಂಪಾಯರಿಂಗ್ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ

ಸಂದೇಶ ಇ-ಮ್ಯಾಗಝಿನ್: 2019 ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ವಿವಾದಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ಏಕೆಂದರೆ ಮಾಜಿ ಅಂತರರಾಷ್ಟ್ರೀಯ ಅಂಪೈರ್ …

Leave a Reply

Your email address will not be published. Required fields are marked *