Friday , November 15 2019
Breaking News
Home / ರಾಷ್ಟ್ರೀಯ / ಭಾರತದ ಈ ರಾಜ್ಯದಲ್ಲಿ ಮದುವೆಗೆ ಮೊದಲು ಗಂಡು ಹೆಣ್ಣಿನ ಎಚ್‌ಐವಿ ಪರೀಕ್ಷೆ ಕಡ್ಡಾಯವಾಗಲಿದೆ

ಭಾರತದ ಈ ರಾಜ್ಯದಲ್ಲಿ ಮದುವೆಗೆ ಮೊದಲು ಗಂಡು ಹೆಣ್ಣಿನ ಎಚ್‌ಐವಿ ಪರೀಕ್ಷೆ ಕಡ್ಡಾಯವಾಗಲಿದೆ

ಸಂದೇಶ ಇ-ಮ್ಯಾಗಝಿನ್: ಮದುವೆ ನೋಂದಣಿಗೆ ಮುಂಚಿತವಾಗಿ ಎಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ಕರಾವಳಿ ರಾಜ್ಯ ಗೋವಾದ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಂಗಳವಾರ ಹೇಳಿದ್ದಾರೆ. “ಗೋವಾದಲ್ಲಿ ಮದುವೆ ನೋಂದಣಿಗೆ ಮುಂಚಿತವಾಗಿ ಭವಿಷ್ಯದ ದಂಪತಿಗಳಿಗೆ ಎಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ನಾವು ಯೋಚಿಸುತ್ತಿದ್ದೇವೆ. ಮದುವೆಗೆ ಮೊದಲು ಎಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಕಾನೂನು ಇಲಾಖೆ ಪರಿಗಣಿಸುತ್ತಿದೆ. ಇದನ್ನು ಶೀಘ್ರದಲ್ಲೇ ಇಲಾಖೆಯು ಅನುಮೋದಿಸಿದರೆ, ನಾವು ರಾಜ್ಯ ವಿಧಾನಸಭೆಯ ಮಾನ್ಸೂನ್ ಅಧಿವೇಶನದಲ್ಲಿ ಕಾನೂನು ರೂಪಿಸುತ್ತೇವೆ” ಎಂದು ರಾಜ್ಯದ ಕಾನೂನು ಮಂತ್ರಿಯೂ ಆಗಿರುವ ರಾಣೆ ಹೇಳಿದರು.

ಗೋವಾದಲ್ಲಿ 2006 ರಲ್ಲೇ ಅಂದಿನ ಆರೋಗ್ಯ ಸಚಿವ ದಯಾನಂದ್ ನರ್ವೆಕರ್ ಅವರು ಈ ಪ್ರಸ್ತಾವನೆಯನ್ನು ಪ್ರಸ್ತಾಪಿಸಿದ್ದರು, ಅದರಲ್ಲಿ ಗೋವಾ ಕ್ಯಾಬಿನೆಟ್ ಮದುವೆಗೆ ಮೊದಲು ಎಚ್ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಕಾನೂನನ್ನು ಅಂಗೀಕರಿಸಿತ್ತು. ಆದರೆ ಈ ಕ್ರಮವು ಆ ಬಳಿಕ ಮುಂದುವರಿದು ಕಾನೂನು ಜಾರಿಯಾಗದೆ ನೆನೆಗುದಿಗೆ ಬಿದ್ದಿತ್ತು.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *