Monday , July 22 2019
Breaking News
Home / ಆರೋಗ್ಯ / ಧೂಮಪಾನ ಮೋಜಿನಲ್ಲಿ ಪ್ರಾರಂಭ ಸಾವಿನಲ್ಲಿ ಅಂತ್ಯ
smoking

ಧೂಮಪಾನ ಮೋಜಿನಲ್ಲಿ ಪ್ರಾರಂಭ ಸಾವಿನಲ್ಲಿ ಅಂತ್ಯ

ಯೌವ್ವನದ ದಿನಗಳಲ್ಲಿ ಸ್ನೇಹಿತರೊಂದಿಗೆ ಮೋಜಿಗೆಂದು ಪ್ರಾರಂಭವಾಗುವ ಧೂಮಪಾನ ಕೊನೆಗೆ ಅದೇ ಒಂದು ಚಟವಾಗಿ ಶಾಪವಾಗಿ ಮಾರ್ಪಟ್ಟು ವ್ಯಕ್ತಿಯನ್ನು ನಾಶಮಾಡುತ್ತಿರುವುದು ವಿದ್ಯಾವಂತ ಸಮಾಜದ ದುರಂತವೇ ಸರಿ. ಅದರಿಂದಾಗುವ ನಾಶವನ್ನು ಅರಿತೂ ಕೂಡ ನಮ್ಮ ಜನಗಳು ರಾತ್ರಿ ಕಂಡ ಬಾವಿಗೆ ಹಗಲು ಬೀಳುವಂತೆ ಧೂಮಪಾನ ಚಟಕ್ಕೆ ಬಲಿಯಾಗುತ್ತಿದ್ದಾರೆ. ಈಗಿನ ಕೆಲವು ಯುವಕರಿಗೆ ವಿದ್ಯಾರ್ಥಿ ಜೀವನದಲ್ಲಿ ಸಿಗರೇಟು ಎಳೆಯದಿದ್ದಲ್ಲಿ ಗಂಡಸೇ ಅಲ್ಲ ಎಂಬ ಭಾವನೆ. ಆದರೆ ಧೂಮಪಾನದಿಂದ ಆಗುವ ಹಾನಿಯನ್ನು ಪ್ರಾರಂಭದಲ್ಲೇ ಅರ್ಥೈಸಿ ಕೊಂಡರೆ ವ್ಯಕ್ತಿ ಅದರ ಹತ್ತಿರ ಕೂಡ ಸುಳಿಯಲಾರ.

smoking harms

ಇಲ್ಲಿ ಕೆಲವು ವಿಚಾರಗಳಿವೆ ನೋಡಿ , ನಂತರ ನೀವೇ ನಿರ್ಧರಿಸಿ ನಿಮಗೆ ಆರೋಗ್ಯ ಬೇಕೋ…? ಅಥವಾ ಧೂಮಪಾನ ಬೇಕೋ…? ಎಂದು.

* ಸಿಗರೇಟು ಉರಿಸಲು ಬೇಕಾದ ಆಮ್ಲಜನಕದ ಪ್ರಮಾಣ, ಅಷ್ಟೇ ಅವಧಿಯಲ್ಲಿ ನಾಲ್ಕು ಜನ ಉಸಿರಾಡಲು ಅಗತ್ಯವಾದ ಆಮ್ಲಜನಕ್ಕೆ ಸಮ.

* ಸಿಗರೇಟಿಗಿಂತ ಬೀಡಿ ಸೇದುವವರ ಸಂಖ್ಯೆ ಅಧಿಕ. ಬೀಡಿಗಳಲ್ಲಿನ ಹೊಗೆಸೊಪ್ಪು ಒಂದೇ ಸಮನಾಗಿ ಸುಡುವುದಿಲ್ಲ. ಕಾರಣ ಬೀಡಿಯ ಬಹುಭಾಗ ಕೋಕ್ ಆಗಿ ಪರಿವರ್ತನೆ ಹೊಂದುವುದು. ಇದರಿಂದ ಇಂಗಾಲದ ಮೊನಾಕ್ಸೈಡ್ ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದು ಆರೋಗ್ಯಕ್ಕೆ ಸಿಗರೇಟಿಗಿಂತಲೂ ಹೆಚ್ಚು ಹಾನಿಕರ.

* ಬೀಡಿ, ಸಿಗರೇಟು ಸೇದಿ ಮೂಗಿನ ಮೂಲಕ ಹೊಗೆ ಬಿಡುವುದರಿಂದ ವಾಸನೆ ಅರಿಯುವ ಸಂವೇದನಾ ಶಕ್ತಿ ಕುಂದುವುದು.

* ಹೊಗೆಸೊಪ್ಪಿನಲ್ಲಿರುವ ನಿಕೋಟಿನ್ ಪ್ರಭಾವದಿಂದ ಹೊಟ್ಟೆಯು ಅಧಿಕ ಪ್ರಮಾಣದಲ್ಲಿ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಹೊಟ್ಟೆ ಹುಣ್ಣಾಗುವುದು.

* ಶುದ್ಧ ರಕ್ತನಾಳಗಳಲ್ಲಿ ಟಾರ್ ಅಂಶ ಹೆಚ್ಚುವುದು. ಇದು ರಕ್ತ ಪರಿಚಲನೆಗೆ ಅಡ್ಡಿ ಉಂಟುಮಾಡುತ್ತದೆ, ರಕ್ತದ ಒತ್ತಡ ಹೆಚ್ಚುವುದು.

* ಧೂಮಪಾನವು ಪ್ರಾರಂಭದಲ್ಲಿ ಉತ್ತೇಜನಕಾರಿಯಾಗಿ ಕಂಡರೂ, ಕಾಲಾಂತರದಲ್ಲಿ ನರದೌರ್ಬಲ್ಯಕ್ಕೆ ಕಾರಣವಾಗುತ್ತದೆ.

* ನಿಕೋಟಿನ್ ಹಾಗೂ ಇಂಗಾಲದ ಮೊನಾಕ್ಸೈಡ್ ಪ್ರಭಾವದಿಂದಾಗಿ ರಕ್ತ ಸಂಚಾರಕ್ಕೆ ಅಡ್ಡಿಯಾಗಿ, ಅಂಗಾಂಗಳಿಗೆ ಆಮ್ಲಜನಕದ ಕೊರತೆಯಾಗುತ್ತದೆ.

* ತುಟಿಗಳಿಂದ ಹಿಡಿದು, ಕರುಳು, ಶ್ವಾಸಕೊಶದ ವರೆಗಿನ ಒಳಪದರ ಹಾನಿಗೊಳಗಾಗುತ್ತದೆ.

* ಯಾವುದೇ ಭಾಗದಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

* ಹೃದಯಾಘಾತ ಸಾಧ್ಯತೆ ಅಧಿಕ.

* ಗರ್ಭಿಣಿಯು ಸಿಗರೇಟು ಸೇದಿದರೆ ಗರ್ಭಸ್ಥ ಶಿಶುವಿನ ಬೆಳವಣಿಗೆ ಕುಂಠಿತವಾಗುತ್ತದೆ, ಮಗು ಅಂಗವೈಕಲ್ಯ ಹೊಂದಬಹುದು.

* ಅಧಿಕ ಸಿಗರೇಟು ಸೇದುವ ಗರ್ಭಿಣಿಯರಿಗೆ ಗರ್ಭಪಾತ ಸಾಮಾನ್ಯ.

* ವಿಶ್ವದಲ್ಲಿ ಧೂಮಪಾನ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಸಾಯುವವರ ಪ್ರಮಾಣ ವಾರ್ಷಿಕ 10 ಲಕ್ಷಕ್ಕೂ ಹೆಚ್ಚು.

* ಧೂಮಪಾನಿಯ ಆಯಸ್ಸು ಪ್ರತಿ ಸಿಗರೇಟು ಅಥವಾ ಬೀಡಿ ಸೇದಿದಾಗಲೂ ಐದು ನಿಮಿಷದಂತೆ ಕಡಿಮೆಯಾಗುತ್ತದೆ.

* ಧೂಮಪಾನಿಗಳಲ್ಲಿ ನಿದ್ರಾಹೀನತೆ ಸರ್ವೇ ಸಾಮಾನ್ಯ.

* ಧೂಮಪಾನಿಗಳಲ್ಲಿ ಲೈಂಗಿಕ ಆಸಕ್ತಿ ಕುಂದುವುದು, ಬಂಜೆತನ ಕಾಡಬಹದು.

* ಬೇರೆಯವರಿಗೆ ಹೋಲಿಸಿದಾಗ ಧೂಮಪಾನಿಗಳಲ್ಲಿ ದೃಷ್ಟಿದೋಷ ಹೆಚ್ಚು.

Check Also

ಜೇನು ಶುದ್ಧವೋ ಅಶುದ್ಧವೋ ಅಂತ ಈ 4 ವಿಧಾನಗಳಿಂದ ಪರೀಕ್ಷೆ ಮಾಡಿ ನೋಡಿ

207ಸಂದೇಶ ಇ-ಮ್ಯಾಗಝಿನ್: ಜೇನು ಎಂಬುದು ಪ್ರಾಕೃತಿಕವಾಗಿ ದೊರೆಯುವಂತಹ ಒಂದು ಶುದ್ಧ ಆಹಾರ ಪದಾರ್ಥವಾಗಿದೆ. ಇದು ಸ್ವಾದದಲ್ಲಿ ಎಷ್ಟು ಸಿಹಿಯೋ ಅಷ್ಟೇ …

Leave a Reply

Your email address will not be published. Required fields are marked *