Sunday , January 19 2020
Breaking News
Home / ರಾಷ್ಟ್ರೀಯ / ಐಎಂಎ ವಂಚಕ ಮನ್ಸೂರ್ ಖಾನ್ ದೆಹಲಿ ವಿಮಾನ ನಿಲ್ದಾಣದಲ್ಲಿ ಅರೆಸ್ಟ್

ಐಎಂಎ ವಂಚಕ ಮನ್ಸೂರ್ ಖಾನ್ ದೆಹಲಿ ವಿಮಾನ ನಿಲ್ದಾಣದಲ್ಲಿ ಅರೆಸ್ಟ್

ಸಂದೇಶ ಇ-ಮ್ಯಾಗಝಿನ್: ಶುಕ್ರವಾರ ಮುಂಜಾನೆ ದುಬೈನಿಂದ ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಹು ಕೋಟಿ ಐಎಂಎ ಫಾಂಝಿ ಸ್ಕೀಮ್ ಹಗರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್‌ನನ್ನು ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಬಂಧಿಸಿದ್ದಾರೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಮನ್ಸೂರ್ ಖಾನ್‌ಗೆ ದುಬೈನಿಂದ ನವದೆಹಲಿಗೆ ಪ್ರಯಾಣಿಸಿ ಕಾನೂನಿನ ಮುಂದೆ ಹಾಜರಾಗುವಂತೆ ಆದೇಶಿಸಿದ ನಂತರ ಐ ಮಾನಿಟರಿ ಅಡ್ವೈಸರಿ (ಐಎಂಎ) ಯ ಮಾಲೀಕ ಮತ್ತು ಸಂಸ್ಥಾಪಕ ಖಾನ್ ಇಂದು ಬೆಳಗ್ಗಿನ ವಿಮಾನದಲ್ಲಿ ಯುಎಇಯಿಂದ ಭಾರತಕ್ಕೆ ಬಂದಿಳಿದಿದ್ದಾನೆ. ಈ ಹಿಂದೆ ಜುಲೈ 15 ರಂದು ಮನ್ಸೂರ್ ಖಾನ್ 24 ಗಂಟೆಗಳ ಒಳಗೆ ಭಾರತಕ್ಕೆ ಹಿಂತಿರುಗುವುದಾಗಿ ಹೇಳಿದ್ದ ವಿಡಿಯೋ ಒಂದು ಬಿಡುಗಡೆಯಾಗಿತ್ತು. ಆ ವೀಡಿಯೋದಲ್ಲಿ ಖಾನ್ ತಾನು ಭಾರತಕ್ಕೆ ಬರುತ್ತಿರುವುದು ಹಣ ಹಿಂದಿರುಗಿಸುವುದಕ್ಕಾಗಿದೆ ಎಂದು ಹೇಳಿದ್ದ.

ಮನ್ಸೂರ್ ಖಾನ್ ವಿರುದ್ಧ ಕರ್ನಾಟಕ ರಾಜ್ಯವೊಂದರಲ್ಲೇ 40,000 ಕ್ಕೂ ಹೆಚ್ಚು ಹೂಡಿಕೆದಾರರು ತಮ್ಮನ್ನು ವಂಚಿಸಿದ್ದಕ್ಕಾಗಿ ದೂರು ನೀಡಿದ್ದರು. ಇದೇ ಪ್ರಕರಣದಲ್ಲಿ ಮನ್ಸೂರ್ ಖಾನ್ ನಿಂದ 400 ಕೋಟಿ ರೂ. ಪಡೆದ ಆರೋಪದಲ್ಲಿ ಶಿವಾಜಿ ನಗರದ ಕಾಂಗ್ರೇಸ್ ಶಾಸಕ ರೋಷನ್ ಬೇಗ್ ರನ್ನು ಎಸ್‌ಐಟಿ ತಂಡ ಮೊನ್ನೆ ಬಂಧಿಸಿತ್ತು. ಮನ್ಸೂರ್ ಖಾನ್‌ನನ್ನು ದೆಹಲಿಯ ಎಂಟಿಎನ್‌ಎಲ್ ಕಟ್ಟಡದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *