Friday , April 3 2020
Breaking News
Home / ಸುದ್ದಿ / ಒಂದು ವೇಳೆ ಗಾಂಧಿ ಹತ್ಯೆಯ ತೀರ್ಪು ಇಂದಾಗಿರುತ್ತಿದ್ದರೆ, ಗೋಡ್ಸೆಯನ್ನು ದೇಶ ಭಕ್ತನೆಂದು ಘೋಷಿಸುತ್ತಿದ್ದರು: ತುಷಾರ್ ಗಾಂಧಿ

ಒಂದು ವೇಳೆ ಗಾಂಧಿ ಹತ್ಯೆಯ ತೀರ್ಪು ಇಂದಾಗಿರುತ್ತಿದ್ದರೆ, ಗೋಡ್ಸೆಯನ್ನು ದೇಶ ಭಕ್ತನೆಂದು ಘೋಷಿಸುತ್ತಿದ್ದರು: ತುಷಾರ್ ಗಾಂಧಿ

ಸಂದೇಶ ಇ-ಮ್ಯಾಗಝಿನ್: ಇವತ್ತು ಸುಪ್ರಿಂ ಕೋರ್ಟ್ ಹೊರಡಿಸಿದ ಅಯೋಧ್ಯೆ ಬಾಬ್ರಿ ಮಸೀದಿ-ರಾಮ ಜನ್ಮ ಭೂಮಿ ವಿವಾದದ ತೀರ್ಪಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಮಹಾತ್ಮಾ ಗಾಂಧೀಜಿಯವರ ಮೊಮ್ಮಗ ತುಷಾರ್ ಗಾಂಧಿಯವರು, ಒಂದು ವೇಳೆ ಮಹಾತ್ಮಾ ಗಾಂಧೀಜಿಯವರ ಹತ್ಯೆ ಪ್ರಕರಣದ ಬಗ್ಗೆ ಇಂದು ಮರುವಿಚಾರಣೆ ತೀರ್ಪು ನೀಡಿದ್ದಾಗಿದ್ದಲ್ಲಿ, ಹಂತಕ ನಾಥೂರಾಮ್ ಗೋಡ್ಸೆಯನ್ನು ಕೊಲೆಗಾರ ಆದರೂ ದೇಶ ಭಕ್ತ ಎಂದು ಘೋಷಿಸುತ್ತಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

ಶನಿವಾರ ಸುಪ್ರಿಂ ಕೋರ್ಟ್ ತನ್ನ ತೀರ್ಪಿನಲ್ಲಿ ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಿಸಲು ಅನುಮತಿ ನೀಡಿದ್ದು, ಮುಸ್ಲಿಮರಿಗೆ ಅಯೋಧ್ಯೆಯಲ್ಲೇ ಐದು ಎಕರೆ ಜಮೀನು ನೀಡಬೇಕು ಎಂದು ಹೇಳಿದೆ. ಇದರ ಬಗ್ಗೆ ಗಾಂಧಿ ಮೊಮ್ಮಗ ತುಷಾರ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ‘ಎಲ್ಲವೂ ನ್ಯಾಯವಲ್ಲ ಮತ್ತು ಎಲ್ಲವೂ ರಾಜಕೀಯವಾಗಿದೆ’ ಎಂದು ಹೇಳಿದ್ದಾರೆ. ‘ಒಮ್ಮೆ ಅಯೋಧ್ಯೆ ವಿಚಾರ ತೀರ್ಮಾನವಾದರೆ ನಂತರವಾದರೂ ನಾವು ನಮ್ಮ ರಾಷ್ಟ್ರವನ್ನು ಕಾಡುತ್ತಿರುವ ನೈಜ ಸಮಸ್ಯೆಗಳೆಡೆಗೆ ಹಿಂದಿರುಗ ಬಹುದೇ?’ ಎಂದು ಗಾಂಧಿ ಮೊಮ್ಮಗ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *