Friday , November 15 2019
Breaking News
Home / ಕ್ರೀಡೆ / ವಿಶ್ವಕಂಡ ಶ್ರೇಷ್ಟ ಕ್ರಿಕೆಟ್ ಕಪ್ತಾನನ್ನು ಐಸಿಸಿ ಹೊಗಳಿದ್ದು ಹೀಗೆ

ವಿಶ್ವಕಂಡ ಶ್ರೇಷ್ಟ ಕ್ರಿಕೆಟ್ ಕಪ್ತಾನನ್ನು ಐಸಿಸಿ ಹೊಗಳಿದ್ದು ಹೀಗೆ

ಸಂದೇಶ ಇ-ಮ್ಯಾಗಝಿನ್: ತಮ್ಮ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ಹಂತದಲ್ಲಿರುವ ಭಾರತದ ಕ್ರಿಕೆಟ್ ಇತಿಹಾಸದ ಸರ್ವಶ್ರೇಷ್ಟ್ರ ಕಪ್ತಾನ ಮಹೇಂದ್ರ ಸಿಂಗ್ ಧೋನಿಯನ್ನು ಐಸಿಸಿ ಗೌರವಿಸಿದೆ. ಐಸಿಸಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಭಾರತೀಯ ಮಾಜಿ ನಾಯಕ ಹಾಗೂ ಹಾಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಧೋನಿ ಅವರ ಸಾಧನೆಗಳನ್ನು ಆಚರಿಸುವ ವೀಡಿಯೊ ವೊಂದನ್ನು ಪೋಸ್ಟ್ ಮಾಡಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್(ICC) ಧೋನಿ ಕುರಿತು, “ಭಾರತೀಯ ಕ್ರಿಕೆಟ್‌ನ ಮುಖವನ್ನು ಬದಲಾಯಿಸಿದ ಹೆಸರು. ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸುವ ಹೆಸರು. ನಿರಾಕರಿಸಲಾಗದ ಪರಂಪರೆಯನ್ನು ಹೊಂದಿರುವ ಹೆಸರು, ಎಂ.ಎಸ್.ಧೋನಿ – ಕೇವಲ ಹೆಸರಲ್ಲ” ಎಂದು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬರೆದಿದೆ. 2007 ರ ವಿಶ್ವಕಪ್ ನಲ್ಲಿ ಬಾಂಗ್ಲಾದಂತಹ ದುರ್ಬಲ ತಂಡದ ವಿರುದ್ಧ ಸೋತು ವಿಶ್ವಕಪ್ ನಿಂದ ಹೊರಬಿದ್ದಿದ್ದ ಭಾರತೀಯ ತಂಡವನ್ನು ಕೋಚ್ ಇಲ್ಲದೆಯೇ ಮೇಲೆತ್ತಿದ ಧೋನಿ ತನ್ನ ನಾಯಕತ್ವದಲ್ಲಿ ಐಸಿಸಿ ಟಿ20 ವಲ್ಡ್ ಕಪ್, ಐಸಿಸಿ ವಲ್ಡ್ ಕಪ್, ಐಸಿಸಿ ಚಾಂಪಿಯನ್ ಟ್ರೋಫಿ ಸೇರಿದಂತೆ ಹಲವಾರು ದೊಡ್ಡ ದೊಡ್ಡ ಸರಣಿಗಳನ್ನು ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದರು. ಇಂದು ಕಾಣುವ ಬಲಿಷ್ಟ ಭಾರತೀಯ ಕ್ರಿಕೆಟ್ ತಂಡವನ್ನು ಕಟ್ಟಿದವರು ಇದೇ ಮಹೇಂದ್ರ ಸಿಂಗ್ ಧೋನಿ ಎಂದರೆ ತಪ್ಪಲ್ಲ. ಆದಾಗ್ಯೂ ತಂಡವನ್ನು ಕಟ್ಟಲು ಅವರು ತೆಗೆದುಕೊಂಡ ಕೆಲವು ನಿರ್ಧಾರಗಳಿಂದಾಗಿ ಅವರ ವಿರೋಧಿಗಳು ಅವರನ್ನು ವಿಮರ್ಶಿಸುತ್ತಿರುವುದು ಸುಳ್ಳಲ್ಲ.

Check Also

ವಲ್ಡ್ ಕಪ್ ಫೈನಲ್: ಕಳಪೆ ಅಂಪಾಯರಿಂಗ್ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ

ಸಂದೇಶ ಇ-ಮ್ಯಾಗಝಿನ್: 2019 ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ವಿವಾದಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ಏಕೆಂದರೆ ಮಾಜಿ ಅಂತರರಾಷ್ಟ್ರೀಯ ಅಂಪೈರ್ …

Leave a Reply

Your email address will not be published. Required fields are marked *