Friday , May 24 2019
Breaking News
Home / ರಾಷ್ಟ್ರೀಯ / ಭಾರತದ ಈ ನಗರದಲ್ಲಿ ಭಿಕ್ಷುಕರ ಬಗ್ಗೆ ಮಾಹಿತಿ ನೀಡುವವರಿಗೆ ಸಿಗಲಿದೆ 1000 ರೂ ಬಹುಮಾನ

ಭಾರತದ ಈ ನಗರದಲ್ಲಿ ಭಿಕ್ಷುಕರ ಬಗ್ಗೆ ಮಾಹಿತಿ ನೀಡುವವರಿಗೆ ಸಿಗಲಿದೆ 1000 ರೂ ಬಹುಮಾನ

ಸಂದೇಶ ಇ-ಮ್ಯಾಗಝಿನ್: ಭಿಕ್ಷುಕರ ಉಪಟಳ ಭಾರತೀಯ ಮಹಾನಗರಗಳಲ್ಲಿ ಒಂದು ಸಾಮಾನ್ಯವಾದ ಸಂಗತಿ. ಇವರಲ್ಲಿ ಕೆಲವರು ಬೇರೆ ಉಪಾಯವಿಲ್ಲದೆ ಬೇದುವವರಿದ್ದಾರಾದರೂ, ಇನ್ನು ಕೆಲವರು ಅದನ್ನೇ ಕಾಯಕವನ್ನಾಗಿಸಿಕೊಂಡವರು. ಈ ನಿಟ್ಟಿನಲ್ಲಿ ಹೈದರಾಬಾದ್ ಮಹಾನಗರದ ಪೊಲೀಸರು ಇತ್ತೀಚೆಗೆ ಒಂದು ಪ್ರಕಟನೆ ಹೊರಡಿಸಿದ್ದು, ನಗರದ ಯಾವುದೇ ಮೂಲೆಯಲ್ಲೂ ಭಿಕ್ಷಾಟನೆ ಮಾಡುವವರನ್ನು ಕಂಡರೆ ಅಂತಹವರ ಬಗ್ಗೆ ನಮಗೆ ಮಾಹಿತಿ ಕೊಟ್ಟು ಒಂದು ಸಾವಿರ ರೂಪಾಯಿಗಳ ಬಹುಮಾನ ಗೆಲ್ಲಿರಿ ಎಂದು ಘೋಷಿಸಲಾಗಿದೆ. ಸಾರ್ವಜನಿಕರಿಂದ ಮಾಹಿತಿ ಪಡೆದು ಆ ಬಳಿಕ ಪೊಲೀಸರೇ ಸ್ಥಳಕ್ಕಾಗಮಿಸಿ ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ಸಾಗಿಸುವ ಕಾರ್ಯ ಮಾಡಲಿದ್ದು, ಇಂತಹ ಭಿಕ್ಷುಕರ ಸಂಪೂರ್ಣ ಜವಾಬ್ದಾರಿಯನ್ನು ಸರಕಾರವೇ ವಹಿಸಲಿದೆ ಎಂದು ತೆಲಂಗಾಣ ಜೈಲು ಮತ್ತು ಸುಧಾರಣ ಸೇವೆಗಳ ಮಹಾನಿರ್ದೇಶಕ ವಿ.ಕೆ. ಸಿಂಗ್ ತಿಳಿಸಿದ್ದಾರೆ.

ಪುರುಷ ಮತ್ತು ಮಹಿಳಾ ಭಿಕ್ಷುಕರಿಗೆ ಪ್ರತ್ಯೇಕ ಪ್ರತ್ಯೇಕವಾದ ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಿ ಅವರಲ್ಲಿ ದುಡಿಯಲು ಶಕ್ತರಾದವರಿಗೆ ಉದ್ಯೋಗದ ವ್ಯವಸ್ಥೆ ಕೂಡ ಮಾಡಲಾಗುವುದು. ನಗರ ಪೊಲೀಸರ ಈ ಕ್ರಮವನ್ನು ಸಾರ್ವಜನಿಕರು ಪ್ರಶಂಸಿದ್ದು, ಇದರಿಂದಾಗಿ ಭಿಕ್ಷಾಟನೆಯಲ್ಲಿ ಹೆಚ್ಚಿನ ಹಣ ದೊರೆಯುತ್ತದೆ ಎಂದು ಅದನ್ನೇ ಕಾಯಕ ಮಾಡಿಕೊಂಡಿರುವವರಿಗೆ ಕಡಿವಾಣ ಬೀಳಲಿದೆ ಎಂದು ಆಶಿಸಿದ್ದಾರೆ.

Check Also

ಕಾಂಗ್ರೇಸ್ ವಿರುದ್ಧದ 5000 ಕೋಟಿ ರೂ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯಲು ಅನಿಲ್ ಅಂಬಾನಿ ನಿರ್ಧಾರ

000ಸಂದೇಶ ಇ-ಮ್ಯಾಗಝಿನ್: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ತಯಾರಿಸಲು ಸಿದ್ಧವಾಗಿರುವ ರಾಫೆಲ್ ಫೈಟರ್ ಜೆಟ್ ವಿವಾದದ ಬಗ್ಗೆ ಲೇಖನ …

Leave a Reply

Your email address will not be published. Required fields are marked *