Saturday , November 16 2019
Breaking News
Home / ಆರೋಗ್ಯ / ಜೇನು ಶುದ್ಧವೋ ಅಶುದ್ಧವೋ ಅಂತ ಈ 4 ವಿಧಾನಗಳಿಂದ ಪರೀಕ್ಷೆ ಮಾಡಿ ನೋಡಿ

ಜೇನು ಶುದ್ಧವೋ ಅಶುದ್ಧವೋ ಅಂತ ಈ 4 ವಿಧಾನಗಳಿಂದ ಪರೀಕ್ಷೆ ಮಾಡಿ ನೋಡಿ

ಸಂದೇಶ ಇ-ಮ್ಯಾಗಝಿನ್: ಜೇನು ಎಂಬುದು ಪ್ರಾಕೃತಿಕವಾಗಿ ದೊರೆಯುವಂತಹ ಒಂದು ಶುದ್ಧ ಆಹಾರ ಪದಾರ್ಥವಾಗಿದೆ. ಇದು ಸ್ವಾದದಲ್ಲಿ ಎಷ್ಟು ಸಿಹಿಯೋ ಅಷ್ಟೇ ಆರೋಗ್ಯಕಾರಕ ಆಹಾರವೂ ಆಗಿದೆ. ಜೇನು ಇಷ್ಟ ಪಡದವರು ಬಹುಷಃ ಯಾರೂ ಇಲ್ಲ ಅಂತ ಹೇಳಬಹುದು. ಆಯುರ್ವೇದದಲ್ಲಿ ಇದನ್ನು ಮದ್ದು ತಯಾರಿಸಲೂ ಬಳಸುತ್ತಾರೆ. ಪ್ರವಾದಿ ಮುಹಮ್ಮದ್(ಸ)ರವರ ವೈದ್ಯಕೀಯ ವಿಧಾನದಲ್ಲೂ ಜೇನಿನ ಬಗ್ಗೆ ವಿಶೇಷವಾಗಿ ಹೇಳಿರುವುದು ಹದೀಗಳಲ್ಲಿ ಕಾಣಬಹುದು. ಆದರೆ ಇವತ್ತಿನ ಕಾಲದಲ್ಲಿ ಎಲ್ಲವೂ ಫೇಕ್. ವ್ಯಾಪಾರಿಗಳು ಲಾಭಗಳಿಸಲು ಎಂತಹ ದುಷ್ಟ ಕೃತ್ಯಕ್ಕೂ ಕೈ ಹಾಕಲು ಹೇಸದವರಾಗಿದ್ದಾರೆ. ಇಂತಹವರಿಂದಾಗಿ ಪಾಕೃತಿಕವಾಗಿ ಶುದ್ಧವಾಗಿ ದೊರೆಯುವ ಜೇನು ಕೂಡ ಅಶುದ್ಧವಾಗಿದೆ ಎಂದರೆ ತಪ್ಪಲ್ಲ. ಜೇನನ್ನು ಹಲವಾರು ರೀತಿಯಲ್ಲಿ ಕಲಬೆರಕೆ ಮಾಡಿ ಗ್ರಾಹಕರನ್ನು ಯಾಮಾರಿಸುತ್ತಾರೆ. ವಿಶೇಷವಾಗಿ ಬೆಲ್ಲ ಅಥವಾ ಸಕ್ಕರೆಯ ಪಾಕವನ್ನು ಮಿಶ್ರಣವಾಗಿ ಅದಕ್ಕೆ ಒಂದು ಹತ್ತು ಪರ್ಸೆಂಟ್ ಅಷ್ಟು ಜೇನು ತುಪ್ಪು ಬೆರೆಸಿ ಮಾರುತ್ತಾರೆ.

ಇದೀಗ ಬಂದಿರುವ ಚೈನಾ ಪ್ಯಾಕ್ಡ್ ಹನೀ ಕೂಡ ಮಿಶ್ರಣ ಅಂತ ಹೇಳುತ್ತಾರೆ. ಇದರಲ್ಲಿ ಕೆಲವು ರಾಸಾಯನಿಕ ಕೂಡ ಮಿಕ್ಸ್ ಮಾಡುತ್ತಾರೆ ಅಂತ ಹೇಳುತ್ತಾರೆ. ಇದು ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಕ್ಯಾನ್ಸರ್ ಮುಂತಾದ ಮಾರಕ ರೋಗಕ್ಕೂ ಇದು ಕಾರಣವಾಗಬಹುದು. ಆದುದರಿಂದ ಜೇನು ಸೇವಿಸುವ ಮುನ್ನ ಅದು ಶುದ್ಧವೋ ಅಥವಾ ಕಲಬೆರಕೆ ಆಗಿದೆಯೋ ಅಂತ ಪರೀಕ್ಷೆ ಮಾಡುವುದು ಉತ್ತಮ. ಜೇನನ್ನು ಪರೀಕ್ಷೆ ಮಾಡಲು ನೀವು ಈ ನಾಲಕ್ಕು ಟ್ರಿಕ್ಸ್‌ಗಳನ್ನು ಬಳಸಬಹುದು. ನೀವು ಈ ಲೇಖನವನ್ನು ಓದಿದ ನಂತರ ನಿಮ್ಮ ಸ್ನೇಹಿತರಲ್ಲೂ ಹಂಚಿಕೊಳ್ಳಲು ಮರೆಯಬೇಡಿ. ಏಕೆಂದರೆ ಇದು ಎಲ್ಲರಿಗೂ ಅಗತ್ಯವಿರುವ ಒಂದು ಜ್ಞಾನವಾಗಿದೆ.

1. ಮೊದಲನೇಯ ಪರೀಕ್ಷೆ ಏನೆಂದರೆ ನಿಮ್ಮಲ್ಲಿರುವ ಜೇನಿನ ಒಂದು ಹನಿಯನ್ನು ಒಂದು ಖಾಲಿ ಕಾಗದದ ಮೇಲೆ ಹಾಕಿ, ಒಂದು ವೇಳೆ ಆ ಕಾಗದ ನಿಮ್ಮ ಜೇನಿನ ಹನಿಯನ್ನು ಹೀರಿಕೊಂಡು ಒದ್ದೆಯಾದರೆ ನಿಮ್ಮ ಜೇನು ಶುದ್ಧವಲ್ಲ ಎಂದು ತಿಳಿದುಕೊಳ್ಳಿರಿ.

2. ನಿಮ್ಮಲ್ಲಿರುವ ಜೇನಿನ ಒಂದು ಹನಿಯನ್ನು ಸ್ವಲ್ಪ ಧೂಳು ಇಲ್ಲದ ಮರಳಿನ ಮೇಲೆ ಹಾಕಿ. ಧೂಳಿಲ್ಲದ ಮರಳು ಅಂದರೆ ಸಮುದ್ರದ ಬದಿಯಲ್ಲಿ ಸಿಗುವಂತಹ ಶುದ್ಧವಾದ ಮರಳು. ಒಂದು ವೇಳೆ ನಿಮ್ಮ ಜೇನಿನ ಹನಿ ಮರಳಿನಲ್ಲಿ ಮಿಕ್ಸ್ ಆದರೆ ನಿಮ್ಮ ಜೇನು ಅಶುದ್ಧ ಅಂತ ಲೆಕ್ಕ. ಏಕೆಂದರೆ ಶುದ್ಧ ಜೇನು ಯಾವುದೇ ವಸ್ತುವಿನೊಂದಿಗೆ ಮಿಕ್ಸ್ ಆಗೋದಿಲ್ಲ. ನೀವು ಕೋಲಿನಿಂದ ಮಿಕ್ಸ್ ಮಾಡಲು ಪ್ರಯತ್ನಿಸಿದರೆ ಮಾತ್ರ ಅದು ಚೆಂಡು ರೂಪದಲ್ಲಿ ಮುದ್ದೆಯಾಗಬಹುದಷ್ಟೆ.

3. ಇನ್ನೊಂದು ವಿಧಾನವೆಂದರೆ, ಒಂದು ಗ್ಲಾಸ್ ನೀರಲ್ಲಿ ಸ್ವಲ್ಪ ಜೇನನ್ನು ಹಾಕಿ ನೋಡಿ. ನಿಮ್ಮ ಜೇನು ಯಾವುದೇ ಪ್ರಯಾಸವಿಲ್ಲದೆ. ಸಕ್ಕರೆ ನೀರಲ್ಲಿ ಮಿಕ್ಸ್ ಆಗುವ ಹಾಗೆ ಮಿಕ್ಸ್ ಆದರೆ ನಿಮ್ಮ ಜೇನು ಅಶುದ್ಧ ಅಂತ ಅರ್ಥ. ಏಕೆಂದರೆ ಶುದ್ಧ ಜೇನು ಅಷ್ಟು ಸುಲಭವಾಗಿ ನೀರಲ್ಲಿ ಮಿಕ್ಸ್ ಆಗೋದಿಲ್ಲ. ಒಂದು ವೇಳೆ ನೀವು ಒಂದು ಎರಡು ನಿಮಿಷ ಚೆನ್ನಾಗಿ ಕಲಸಿದ ನಂತರ ಮಿಕ್ಸ್ ಆದರೂ ಕೂಡ ಅದು ನೀವು ಸ್ವಲ್ಪ ಸಮಯ ಬಿಟ್ಟು ನೋಡುವಾಗ ತಳದಲ್ಲಿ ಊರಿರುತ್ತದೆ. ನೀರಿನ ಸಾಂಧ್ರತೆಗಿಂತ ಜೇನಿನ ಸಾಂಧ್ರತೆ ಹೆಚ್ಚು.

4. ಒಂದು ಬೆಂಕಿ ಕಡ್ಡಿ ಗೀರಿ ಜೇನಿನಲ್ಲಿ ಮುಳುಗಿಸಿ ನೋಡಿ. ಈ ಬೆಂಕಿಕಡ್ಡಿ ಒಂದೆರಡು ಸೆಕೆಂಡಿನಷ್ಟು ಸಮಯ ಪ್ರಕಾರ ಮಾನವಾಗಿ ಉರಿದರೆ ನಿಮ್ಮ ಜೇನು ಶುದ್ಧ ಅಂತ ತಿಳಿದುಕೊಳ್ಳಿ. ಇಲ್ಲಾ ನೀವು ಮುಳುಗಿಸಿದ ಕೂಡಲೇ ಬೆಂಕಿ ಕಡ್ಡಿ ಠುಸ್ ಆಯಿತು ಅಂತಾದರೆ ನಿಮ್ಮ ಜೇನು ಕಲಬೆರಕೆಯಾಗಿದೆ ಅಂತ ಅರ್ಥ.

Check Also

ಮಹಾಮಾರಿ ನಿಫಾ ವೈರಸ್: ಮುಂಜಾಗ್ರತ ಕ್ರಮ ಹೇಗೆ?

ಇದುವರೆಗೂ ಯಾರೂ ಹೆಸರು ಕೇಳಿರದ ಹಾಗೂ ಕೆಲವು ದಿನಗಳಿಂದ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವ ಹೆಸರೇ ‘ನಿಪಾ ವೈರಸ್’. ಇತ್ತೀಚೆಗೆ …

Leave a Reply

Your email address will not be published. Required fields are marked *