Monday , July 22 2019
Breaking News
Home / ರಿಯಲ್ ಹೀರೋಸ್ / ರಿಕ್ಷಾ ಚಾಲಕ ಅಬ್ದುಲ್ಲ ಶೈಖ್ ಅವರಿಗೆ ಸ್ವಂತ ಮನೆ ಇಲ್ಲ, ಆದರೂ ಪ್ರಯಾಣಿಕ ಬಿಟ್ಟು ಹೋದ ದುಡ್ಡನ್ನು ಏನು ಮಾಡಿದರು ನೋಡಿ

ರಿಕ್ಷಾ ಚಾಲಕ ಅಬ್ದುಲ್ಲ ಶೈಖ್ ಅವರಿಗೆ ಸ್ವಂತ ಮನೆ ಇಲ್ಲ, ಆದರೂ ಪ್ರಯಾಣಿಕ ಬಿಟ್ಟು ಹೋದ ದುಡ್ಡನ್ನು ಏನು ಮಾಡಿದರು ನೋಡಿ

ಸಂದೇಶ ಇ-ಮ್ಯಾಗಝಿನ್: ಈ ವ್ಯಕ್ತಿಯ ಹೆಸರು ಅಬ್ದುಲ್ಲ ಶೈಖ್, ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ಇವರು ಮುಂಬೈಯ ಗೋವಾಂಡಿ ಪ್ರದೇಶದಲ್ಲಿ ವಾಸವಿದ್ದಾರೆ. ಇವರು ಎಷ್ಟು ಬಡವರೆಂದರೆ, ಇವರಿಗೆ ವಾಸಿಸಲು ಸ್ವಂತ ಮನೆ ಕೂಡ ಇಲ್ಲ. ಇವರ ಮಗಳು ಕೆಲಸ ಮಾಡುವ ಶಾಲೆಯವರು ನೀಡಿದ ಕೋಣೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಆದರೂ ಇವರು ಸ್ವಾಭಿಮಾನಿ. ಅತ್ಯಂತ ಪ್ರಾಮಾಣಿಕ ಮತ್ತು ದೇವರ ಭಯವುಳ್ಳ ವ್ಯಕ್ತಿ. ಹಾಗೆ ಹೇಳಲು ಕಾರಣ ಏನಂತೀರಾ? ಹಾಗಾದರೆ ಮುಂದೆ ಓದಿ.

ಸುಹೇಲ್ ಚೌಧರಿ ಎಂಬವರು ತಮ್ಮ ಫೇಸ್ಬುಕ್ ಗೋಡೆಯಲ್ಲಿ ಬರೆಯುತ್ತಾರೆ; ಇಂದು ಬೆಳಿಗ್ಗೆ ನನ್ನ ಸಹೋದ್ಯೋಗಿ ಕುರ್ಲಾ ರೈಲ್ವೇ ನಿಲ್ದಾಣದಿಂದ ಅಬ್ದುಲ್ಲ ಶೈಖ್ ಅವರ ಆಟೋ ವನ್ನು ಹಿಡಿದು ತಾನು ತಲುಪಬೇಕಾದ ಸ್ಥಳಕ್ಕೆ ತೆರಳಿದ. ಆದರೆ ಅಚಾತುರ್ಯದಿಂದಾಗಿ ಆತನ ಬ್ಯಾಗ್ ಇವರ ಆಟೋ ದಲ್ಲೇ ಮರೆತು ಹೋದ. ಆ ಬ್ಯಾಗ್ ನಲ್ಲಿ ಲಕ್ಷಾಂತರ ಹಣ ಇತ್ತು.

ಆಟೋ ಮತ್ತು ಚಾಲಕನ ಸುಳಿವು ಇಲ್ಲದ ಕಾರಣ ಹಣವನ್ನು ಮರಳಿ ಪಡೆಯುವ ಭರವಸೆಯನ್ನು ನಾವು ಬಹುತೇಕ ಕಳೆದುಕೊಂಡೆವು. ನನ್ನ ಸ್ನೇಹಿತ ಬಹಳ ದುಃಖದಲ್ಲಿದ್ದ, ತುಂಬಾ ಕಷ್ಟದ ಹಣ, ಬೇರೊಂದು ಕಡೆ ನೀಡುವುದಕ್ಕೆ ಹೊಂದಿಸಿದ್ದ. ಇನ್ನೇನು ಮಾಡುವುದೆಂದು ತೋಚದೆ ತಲೆ ಹಿಡಿದು ಕುಳಿತು ಬಿಟ್ಟ.

ಆದರೆ ಅಬ್ದುಲ್ಲ ಶೈಖ್ ಅವರಿಗೆ ತನ್ನ ಆಟೋದಲ್ಲಿ ಬ್ಯಾಗ್ ಬಾಕಿಯಾಗಿದೆ ಎಂಬುದು ತಿಳಿದಾಗ ಅವರು ಅದನ್ನು ಬಿಚ್ಚಿ ನೋಡಿದರು. ಒಳಗೆ ಲಕ್ಷಾಂತರ ಹಣ ನೋಡಿಯೂ ಅವರು ಅದನ್ನು ಕಬಳಿಸುವ ಯತ್ನ ಮಾಡಲಿಲ್ಲ. ಬ್ಯಾಗ್‌ನಲ್ಲಿ ಅದರ ಮಾಲೀಕನ ಏನಾದರೂ ಸುಳಿವು ಸಿಗುತ್ತಾ ಎಂದು ಹುಡುಕುತ್ತಾ ಹೋದ ಅಬ್ದುಲ್ಲ ಶೈಖ್ ಅವರಿಗೆ ಒಂದು ರೈಲ್ವೇ ಟಿಕೆಟ್ ಸಿಗುತ್ತೆ.

ಟಿಕೆಟ್‌ನಲ್ಲಿದ್ದ ಫೋನ್ ನಂಬರ್‌ಗೆ ಕರೆ ಮಾಡಿ ಹಣದ ಬ್ಯಾಗ್ ತನ್ನ ಆಟೋದಲ್ಲಿ ಬಿಟ್ಟು ಹೋದ ಬಗ್ಗೆ ಮಾಹಿತಿ ನೀಡಿದರು. ಅದರಂತೆ ನಾವು ಅವರನ್ನು ಭೇಟಿಯಾಗಿ ಹಣವನ್ನು ಪಡೆದೆವು.

ಇಂತಹವರು ಈ ಜಗತ್ತಿನಲ್ಲಿ ಇನ್ನೂ ಇದ್ದಾರೆ ಎಂಬುದೇ ಸಂತಸದ ವಿಷಯ ಅಲ್ಲಾಹನು ಅಬ್ದುಲ್ಲ ಶೈಖ್ ಅವರಿಗೆ ಒಳ್ಳೆಯದನ್ನೇ ಕರುಣಿಸಲಿ ಎಂದು ಸುಹೇಲ್ ಚೌಧರಿ ಬರೆದಿದ್ದಾರೆ.

Check Also

ನನ್ನಿಂದ ಇಷ್ಟೇ ಸಾಧ್ಯ ಇದರಿಂದ ಆ ಅನಾಥ ಮಕ್ಕಳಿಗೆ ಏನಾದರೂ ಖರೀದಿಸಿಕೊಡು

000ಸಂದೇಶ ಇ-ಮ್ಯಾಗಝಿನ್: ನನ್ನನ್ನು ಅಪಾರವಾಗಿ ಕಾಡಿದ ಈ ವ್ಯಕ್ತಿಯ ಬಗ್ಗೆ ಬರೆಯಬೇಕು ಅಂತ ಬಯಸಿದೆ. ಇವರ ಹೆಸರು ಬಾಷಾ, 82 …

Leave a Reply

Your email address will not be published. Required fields are marked *