Saturday , April 4 2020
Breaking News
Home / ವಿಶೇಷ / ಮುಸ್ಲಿಮರ ನಮಾಝ್‌ಗಾಗಿ ತಮ್ಮ ವ್ಯಾಪಾರವನ್ನೇ ತ್ಯಜಿಸಿದ ಹಿಂದೂಗಳು

ಮುಸ್ಲಿಮರ ನಮಾಝ್‌ಗಾಗಿ ತಮ್ಮ ವ್ಯಾಪಾರವನ್ನೇ ತ್ಯಜಿಸಿದ ಹಿಂದೂಗಳು

ಸಂದೇಶ ಇ-ಮ್ಯಾಗಝಿನ್: ಬಲವಾದ ಸಾಮುದಾಯಿಕ ಸೌಹಾರ್ದ ಮತ್ತು ಬಂಧನವನ್ನು ಎತ್ತಿ ತೋರಿಸುವ ಸುದ್ದಿಯೊಂದು ಮಧ್ಯಪ್ರದೇಶದ ರಾಜಧಾನಿ ಭುಪಾಲ್‌ನಿಂದ ವರದಿಯಾಗಿದೆ. ಇಲ್ಲಿ ನಿನ್ನೆ ರಂಝಾನ್ ತಿಂಗಳ ಕೊನೆಯ ಜುಮಾ ನಮಾಝ್ ನಿರ್ವಹಿಸಲು ಬಂದಿದ್ದ ಮುಸ್ಲಿಮ್ ಬಾಂಧವರಿಗೆ ಹಿಂದೂ ವ್ಯಾಪಾರಿಗಳು ಸಹಕರಿಸಿದ್ದಾರೆ.

ನಿನ್ನೆ ರಂಝಾನಿನ ಜುಮಾತುಲ್ ವಿದಾ (ವಿಯಾ ಶುಕ್ರವಾರ) ಆಗಿದ್ದು, ನಗರದ ಚೌಕ್ ಬಜಾರ್‌ನ ಜಾಮಾ ಮಸೀದಿಯಲ್ಲಿ ನಮಾಝ್ ನಿರ್ವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರ ಭಾಗವಹಿಸಿದ್ದರು. ಮಧ್ಯಾಹ್ನ ಸುಮಾರು 1 ಗಂಟೆ ಆಗುವಷ್ಟರ ಹೊತ್ತಿಗೆ ಮಸೀದಿ ಭರ್ತಿಯಾಗಿತ್ತು. ಆನಂತರ ಬಂದ ಜನರಿಗೆ ಮಸೀದಿಯ ಒಳಗೆ ನಮಾಝ್ ನಿರ್ವಹಿಸಲು ಜಾಗವಿರಲಿಲ್ಲ.

ನಮಾಝ್‌ಗೆ ಬಂದ ಮುಸ್ಲಿಮರು ಮಸೀದಿಯ ಹೊರಭಾಗದಲ್ಲಿ ನಿಂತಿರುವುದನ್ನು ನೋಡಿದ ಸಮೀಪದಲ್ಲೇ ಅಂಗಡಿ ವ್ಯಾಪಾರ ಮಾಡುತ್ತಿದ್ದ ಹಿಂದೂ ವ್ಯಾಪಾರಿಗಳು, ಕೂಡಲೇ ತಮ್ಮ ಅಂಗಡಿಯ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿ ಗ್ರಾಹಕರನ್ನು ಹೊರಗೆ ಕಳುಹಿಸಿ ಅಂಗಡಿಯ ಒಳಭಾಗದಲ್ಲಿ ನಮಾಝ್ ನಿರ್ವಹಿಸಲು ಮುಸ್ಲಿಮರಿಗೆ ಅನುವು ಮಾಡಿಕೊಟ್ಟಿದ್ದಾರೆ.

ಹೊರಭಾಗದಲ್ಲಿ ವಿಪರೀತ ಸೆಖೆ ಇರುವ ಈ ಕಾಲದಲ್ಲಿ ಅಂಗಡಿಯ ಒಳಗೆ ನಮಾಝ್ ಮಾಡಲು ದೊರೆತಿರುವುದು ಉಪವಾಸಿಗ ನಮಾಝಿಗರಿಗೆ ಕೊಂಚ ಮಟ್ಟಿನ ಆರಾಮ ತಂದಿದೆ. ಅಂಗಡಿಗಳೆಲ್ಲ ತುಂಬಿದ ನಂತರ ಮತ್ತೂ ಆಗಮಿಸುತ್ತಿದ್ದ ನಮಾಝಿಗರನ್ನು ನಗರದ ಬೀದಿಯಲ್ಲಿ ನಮಾಝ್ ನಿರ್ವಹಿಸಲು ಅನುಮತಿಸಿದ ಈ ವ್ಯಾಪಾರಿಗಳು ಸ್ವತಃ ತಾವೇ ಸ್ವಯಂ ಸೇವಕರಾಗಿ ಮುಸ್ಲಿಮರಿಗೆ ನಮಾಝ್ ನಿರ್ವಹಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಟ್ಟರು. ಈ ಕಾರಣದಿಂದಾಗಿ ಮುಸ್ಲಿಮರ ನಮಾಝ್ ಮುಗಿಯುವ ವರೆಗೆ ಚೌಕ್ ಬಜಾರ್‌ನ ಎಲ್ಲಾ ವ್ಯಾಪಾರ ವ್ಯವಹಾರ ಸ್ಥಗಿತವಾಗಿದ್ದವು.

ಚೌಕ್ ಬಜಾರ್ ‌ನಲ್ಲಿ ವ್ಯಾಪಾರ ಮಾಡುವ ಬಟ್ಟೆ ವ್ಯಾಪಾರಿ ವಿಕಾಸ್ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಪವಿತ್ರ ತಿಂಗಳು ಪ್ರತೀ ವರ್ಷ ರಂಜಾನ್‌ನಲ್ಲಿ ಇಲ್ಲಿ ಮಸೀದಿ ತುಂಬುತ್ತದೆ. ಆಗ ನಾವು ಪ್ರಾರ್ಥನೆಗಾಗಿ ನಮ್ಮ ಅಂಗಡಿಗಳಲ್ಲಿ ಮುಸ್ಲಿಮರಿಗೆ ಜಾಗವನ್ನು ಒದಗಿಸುತ್ತೇವೆ. ಇದು ತುಂಬಾ ವರ್ಷದಿಂದ ನಡೆಯುತ್ತಾ ಬಂದಿದೆ. ನಾವಿಲ್ಲಿ ಪರಸ್ಪರ ಪ್ರೀತಿ ಹಾಗೂ ಸೌಹಾರ್ದದಿಂದ ಬದುಕಲು ಕಲಿತಿದ್ದೇವೆ ಎಂದು ವಿಕಾಸ್ ಹೇಳಿದ್ದಾರೆ.

ಆಭರಣ ವ್ಯಾಪಾರಿ ಅಲೋಕ್ ಮಿತ್ತಲ್ ಮಾತನಾಡಿ, ನಮ್ಮಲ್ಲಿ ಯಾವುದೇ ಜಾತಿ ಭೇದವಿಲ್ಲ. ಇದು ಇಲ್ಲಿ ಪ್ರತೀ ವರ್ಷ ನಡೆಯುತ್ತದೆ. ಹಿಂದೂ ವ್ಯಾಪಾರಿಗಳು ಮುಸ್ಲಿಮರಿಗೆ ನಮಾಝ್ ನಿರ್ವಹಿಸಲು ಚಾಪೆಯನ್ನೂ ಒದಗಿಸುತ್ತಾರೆ ಎಂದರು.

Check Also

ನನ್ನ ಉಮ್ಮಾ: ಹಿಂದೂ ವ್ಯಕ್ತಿ ತನ್ನ ಮುಸ್ಲಿಂ ತಾಯಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಪೋಸ್ಟ್ ವೈರಲ್

ಸಂದೇಶ ಇ-ಮ್ಯಾಗಝಿನ್: ಕೇರಳದ ಮಲಪ್ಪುರಂನ ಕಾಳಿಕಾವ್‌ನ ಅನಿವಾಸಿ ಭಾರತೀಯರಾದ ಶ್ರೀಧರನ್ ಅವರ ಫೇಸ್‌ಬುಕ್ ಪೋಸ್ಟ್, “ನನ್ನ ಉಮ್ಮಾ (ತಾಯಿ) ಅಲ್ಲಾಹನ …

Leave a Reply

Your email address will not be published. Required fields are marked *