Monday , July 22 2019
Breaking News
Home / ಗಲ್ಫ್ ಸುದ್ದಿ / ಎಲ್ಟಿಟಿಯ ಕೃತ್ಯಕ್ಕೆ ಹಿಂದೂ ಧರ್ಮ ಕಾರಣವಲ್ಲದ ಮೇಲೆ ಭಯೋತ್ಪಾದನೆಗಾಗಿ ಇಸ್ಲಾಮನ್ನು ಏಕೆ ದೂಷಿಸುವುದು: ಇಮ್ರಾನ್ ಖಾನ್ ಪ್ರಶ್ನೆ

ಎಲ್ಟಿಟಿಯ ಕೃತ್ಯಕ್ಕೆ ಹಿಂದೂ ಧರ್ಮ ಕಾರಣವಲ್ಲದ ಮೇಲೆ ಭಯೋತ್ಪಾದನೆಗಾಗಿ ಇಸ್ಲಾಮನ್ನು ಏಕೆ ದೂಷಿಸುವುದು: ಇಮ್ರಾನ್ ಖಾನ್ ಪ್ರಶ್ನೆ

ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಶನಿವಾರ ಇಸ್ಲಾಂಗೆ ಭಯೋತ್ಪಾದನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಬಾಂಬ್ ಹಾಕುತ್ತಿದ್ದ ತಮಿಳು ಟೈಗರ್ಸ್‌ಗಳಿಗಾಗಿ ಹೀಂದೂ ಧರ್ಮವನ್ನು ಹಾಗೂ ಅಮೇರಿಕಾದ ಹಡಗುಗಳಲ್ಲಿ ತಮ್ಮನ್ನು ತಾವೇ ಸ್ಫೋಟಿಸಿದ್ದ ಜಪಾನಿಯರ ಧರ್ಮವನ್ನು ಆ ಕಾರಣಕ್ಕಾಗಿ ಯಾರೂ ದೂಷಿಸಲಿಲ್ಲ. ಮತ್ತೆ ಭಯೋತ್ಪಾದಕರು ಮಾಡುವ ಕೃತ್ಯಕ್ಕೆ ಇಸ್ಲಾಮನ್ನು ಯಾಕೆ ದೂಷಿಸಬೇಕು ಎಂದು ಖಾನ್ ಮಕ್ಕಾದಲ್ಲಿ ನಡೆದ ಇಸ್ಲಾಮಿಕ್ ಸಹಕಾರ ಸಂಸ್ಥೆ (OIC) ಸಂಘಟನೆಯ ಸಮ್ಮೇಳನದಲ್ಲಿ ಮಾತನಾಡುತ್ತಾ ಹೇಳಿದರು. ಆದರೆ ಇಸ್ಲಾಂಗೆ ಭಯೋತ್ಪಾದನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಜಗತ್ತನ್ನು ಶಕ್ತಿಯುತವಾಗಿ ಮನವರಿಕೆ ಮಾಡಿಸಿಕೊಳ್ಳಲು ಮುಸಲ್ಮಾನ ಜಗತ್ತಿಗೆ ಸಾಧ್ಯವಾಗಲಿಲ್ಲ. OIC ಈ ಬಗ್ಗೆ ಕಾರ್ಯ ಪ್ರವೃತ್ತವಾಗಬೇಕು ಎಂದು ಇಮ್ರಾನ್ ಖಾನ್ ವಿನಂತಿಸಿದರು.

ಒಐಸಿ 1969 ರಲ್ಲಿ ಸಂಸ್ಥಾಪಿಸಲ್ಪಟ್ಟ ಅಂತಾರಾಷ್ಟ್ರೀಯ ಸಂಘಟನೆಯಾಗಿದೆ. ಅದರ ಪ್ರಮುಖ ಉದ್ದೇಶವೆಂದರೆ ಇಸ್ಲಾಮಿಕ್ ಸಾಮಾಜಿಕ ಮತ್ತು ಆರ್ಥಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ಮತ್ತು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಎತ್ತಿಹಿಡಿಯುವುದು.

Check Also

ಹಜ್: ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮ; ಸಚಿವ ಸಂಪುಟದ ತೀರ್ಮಾನ

000ಸಂದೇಶ ಇ-ಮ್ಯಾಗಝಿನ್: ಹಜ್ ಅನ್ನು ರಾಜಕೀಯಗೊಳಿಸುವ ಯಾವುದೇ ಕೃತ್ಯವು ಸ್ವೀಕಾರಾರ್ಹವಲ್ಲ ಎಂದು ಮಂಗಳವಾರ ಜಿದ್ದಾದಲ್ಲಿ ನಡೆದ ಸೌದಿ ಮಂತ್ರಿ ಪರಿಷತ್ತಿನ …

Leave a Reply

Your email address will not be published. Required fields are marked *