Monday , September 16 2019
Breaking News
Home / ರಮದಾನ್ ವಿಶೇಷಾಂಕ / ಉಪವಾಸಿಗರಿಗೆ ಇಫ್ತಾರ್ ಕಿಟ್ ವಿತರಿಸಿದ ಹಿಂದೂ ಮಹಿಳೆ-ರಾಷ್ಟ್ರೀಯ ಭಾವೈಕ್ಯತೆ

ಉಪವಾಸಿಗರಿಗೆ ಇಫ್ತಾರ್ ಕಿಟ್ ವಿತರಿಸಿದ ಹಿಂದೂ ಮಹಿಳೆ-ರಾಷ್ಟ್ರೀಯ ಭಾವೈಕ್ಯತೆ

ಸಂದೇಶ ಇ-ಮ್ಯಾಗಝಿನ್: ಭಾರತವು ಜಗತ್ತಿನ ವಿವಿಧ ರಾಷ್ಟ್ರಗಳ ಮಧ್ಯೆ ಎದೆಯುಬ್ಬಿಸಿ ನಿಲ್ಲುವುದು ತನ್ನ ಜಾತ್ಯಾತೀಯ, ಧರ್ಮಾತೀತ ಪರಂಪರೆಯ ಕಾರಣಕ್ಕಾಗಿ, ಈ ಪರಂಪರೆಗೆ ರಾಜಕೀಯ ಲಾಭಿ ಬಲವಾದ ಕೊಡಲಿಯೇಟು ನೀಡುತ್ತಿದೆಯಾದರೂ ಇಂದಿಗೂ ಭಾರತೀಯರ ಮಧ್ಯೆ ಕೋಮು ಸೌಹಾರ್ದತೆ ಹಾಗೂ ಭಾವೈಕ್ಯತೆ ಕಾಣಲು ಸಾಧ್ಯ. ಹಿಂದೂಗಳು ಮುಸ್ಲಿಮರಿಗೆ ಸಹಾಯ ಮಾಡುವುದು ಮುಸ್ಲಿಮರು ಹಿಂದೂಗಳಿಗೆ ಸಹಾಯ ಮಾಡುವುದು. ಇದು ನಮ್ಮ ದೇಶದಲ್ಲಿ ನಡೆಯುತ್ತಲೇ ಇರುತ್ತದೆ. ಧರ್ಮದ ಕಾರಣ ನೀಡಿ ಸಹಾಯವನ್ನು ನಿರಾಕರಿಸುವವರು ಇಲ್ಲ ಎಂದಲ್ಲ. ಇಂತಹ ಕಠಿಣ ಹೃದಯದವರ ಮಧ್ಯೆ ಒಳ್ಳೆಯವರೂ ಇದ್ದಾರೆ ಎನ್ನುವುದು ಸಮಾಧಾನಕರ ಸಂಗತಿ. ಇತ್ತೀಚೆಗೆ ಹೈದರಾಬಾದಿನ ಒಬ್ಬರು ಹಿಂದೂ ಮಹಿಳೆ ಮುಸ್ಲಿಮರಿಗೆ ಇಫ್ತಾರ್ ಸಮಯದಲ್ಲಿ ಉಪವಾಸ ತೊರೆಯಲು ಆಹಾರ ವಿತರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೈದರಾಬಾದಿನ ಹೃದಯಭಾಗವಾದ ಚಾರ್ ಮಿನಾರ್‌ನಲ್ಲಿ ಈದ್ ಶಾಪಿಂಗ್‌ಗೆ ಬಂದಿದ್ದ ಮುಸಲ್ಮಾನ ಕುಟುಂಬಗಳಿಗೆ ಒಬ್ಬರು ಹಿಂದೂ ಮಹಿಳೆ ಇಫ್ತಾರ್ ಕಿಟ್ ವಿತರಿಸುತ್ತಿದ್ದರು. ಇವರನ್ನು ವ್ಯಕ್ತಿಯೊಬ್ಬರು ಮಾತನಾಡಿಸಿದಾಗ ನನ್ನ ಸಹೋದರ ಸಮುದಾಯವಾದ ಮುಸ್ಲಿಮರ ಜೊತೆ ಐಕ್ಯಮತವನ್ನು ಪ್ರಕಟಿಸಲು ಈ ಕಾರ್ಯ ಮಾಡುತ್ತಿರುವುದಾಗಿ ಮಂಜುಳಾ ಹೆಸರಿನ ಮಹಿಳೆ ತಿಳಿಸಿದ್ದಾರೆ. ಇವರು ರಾಜಕೀಯ ಪಕ್ಷವಾದ ತೆಲಂಗಾಣ ರಾಷ್ಟ್ರೀಯ ಸಮಿತಿಯ ಕಾರ್ಯಕರ್ತೆ ಎನ್ನಲಾಗಿದೆ.

Check Also

ಮ್ಯಾಂಚೆಸ್ಟರ್‌ ಯುನೈಟೆಡ್‌ನ ಈ ಸ್ಟಾರ್ ಆಟಗಾರ ಉಮ್ರಾ ನಿರ್ವಹಿಸಲು ಮಕ್ಕಾಗೆ ಆಗಮಿಸಿದ್ದಾರೆ

001ಸಂದೇಶ ಇ-ಮ್ಯಾಗಝಿನ್: ಮಂಚೆಸ್ಟರ್ ಯುನೈಟೆಡ್‌ನ ಸ್ಟಾರ್ ಮಿಡ್‌ಫೀಲ್ಡರ್ ಪೌಲ್ ಪೋಗ್ಬಾ ಅವರು ಉಮ್ರಾ ಎಂದು ಕರೆಯಲ್ಪಡುವ ಮುಸ್ಲಿಮರ ಚಿಕ್ಕ ಮಕ್ಕಾ …

Leave a Reply

Your email address will not be published. Required fields are marked *