Monday , September 16 2019
Breaking News
Home / ರಮದಾನ್ ವಿಶೇಷಾಂಕ / ರೋಗಗ್ರಸ್ಥನಾಗಿ ಉಪವಾಸ ಹಿಡಿಯಲು ಸಾಧ್ಯವಾಗದ ತನ್ನ ಮುಸ್ಲಿಮ್ ಡ್ರೈವರ್‌‌ಗಾಗಿ ಹಿಂದೂ ಅಧಿಕಾರಿ ಮಾಡಿದ್ದೇನು ನೋಡಿ

ರೋಗಗ್ರಸ್ಥನಾಗಿ ಉಪವಾಸ ಹಿಡಿಯಲು ಸಾಧ್ಯವಾಗದ ತನ್ನ ಮುಸ್ಲಿಮ್ ಡ್ರೈವರ್‌‌ಗಾಗಿ ಹಿಂದೂ ಅಧಿಕಾರಿ ಮಾಡಿದ್ದೇನು ನೋಡಿ

ಸಂದೇಶ ಇ-ಮ್ಯಾಗಝಿನ್: ದೇಶದಲ್ಲಿ ಮೊನ್ನೆಯಿಂದ ಹಿಂದೂ ಮುಸ್ಲಿಮ್ ಬಾಂಧವ್ಯ ಕೆಡಿಸುವ ಹಲವಾರು ಆಘಾತಕಾರಿ ಮುಖ್ಯಾಂಸಗಳನ್ನು ನಾವು ಈಗಾಗಲೇ ಓದಿದ್ದೇವೆ. ಕೋಮುವಾದ ತುಂಬಿರುವ ಈ ದೇಶಕ್ಕೆ ಭವಿಷ್ಯವಿಲ್ಲ ಎಂದೆಲ್ಲ ಹೇಳುವವರಿದ್ದಾರೆ. ಆದರೆ ನಮ್ಮ ಊಹೆಗೂ ನಿಲುಕದ ಕೆಲವು ಘಟನೆಗಳು ವರದಿಯಾಗುತ್ತವೆ.

ಮಹಾರಾಷ್ಟ್ರದ ಬುಲ್‌ಧಾನಾದಲ್ಲಿ ಹಿಂದೂ ಸರಕಾರಿ ಅರಣ್ಯ ಅಧಿಕಾರಿಯೊಬ್ಬರು ತಮ್ಮ ರೋಗ ಗ್ರಸ್ಥ ಮುಸ್ಲಿಮ್ ಡ್ರೈವರ್‌ನ ಬದಲಿಗೆ ರಂಝಾನ್ ಉಪವಾಸ ವೃತ ಮಾಡುತ್ತಿದ್ದಾರೆ. ಅಧಿಕಾರಿ ಸಂಜಯ್ ಮಾಲಿ ತಮ್ಮ ಕಾರು ಚಾಲಕ ಜಾಫರ್‌ನ ಉಪವಾಸ ವೃತವನ್ನು ಜಾಫರ್‌ನ ಬದಲಿಗೆ ತಾವೇ ಮಾಡುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಆರೋಗ್ಯವಾಗಿಯೇ ಇದ್ದ ಜಾಫರ್ ರಂಝಾನ್ ಪ್ರಾರಂಭವಾಗುವ ಸ್ವಲ್ಪ ದಿನ ಮುಂಚೆ ಆರೋಗ್ಯ ಕೆಡುತ್ತೆ. ಸ್ವಲ್ಪ ದಿನ ಆಸ್ಪತ್ರೆಯಲ್ಲಿದ್ದು ಬಂದರೂ ಜಾಫರ್‌ಗೆ ಡ್ಯೂಟಿಯ ಜೊತೆಗೆ ಉಪವಾಸ ವೃತ ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅಧಿಕಾರಿ ಸಂಜಯ್ ಮಾಲಿಯವರು ತಮ್ಮ ಕಾರು ಚಾಲಕ ಜಾಫರ್‌ನ ಪರವಾಗಿ ತಾವೇ ಉಪವಾಸ ಕೈಗೊಂಡಿದ್ದಾರೆ.

ಸುದ್ದಿ ಸಂಸ್ಥೆಯ ಜೊತೆ ಮಾತನಾಡಿದ ಸಂಜಯ್ ‘ಮೇ 6 ರಂದು ನಾನು ಜಾಫರ್‌ನಲ್ಲಿ ಈ ಬಾರಿ ಉಪವಾಸ ವೃತ ಮಾಡಲು ಸಾಧ್ಯವುಂಟಾ ಎಂದು ಕೇಳಿದೆ. ಆರೋಗ್ಯ ಸರಿ ಇಲ್ಲದ ಕಾರಣ ಈ ಬಾರಿ ಡ್ಯೂಟಿಯ ಜೊತೆ ಉಪವಾಸ ಸಾಧ್ಯವಿಲ್ಲ ಎಂದ, ಆಗ ಜಾಫರ್ ಪರವಾಗಿ ಈ ಬಾರಿ ನಾನೇ ಉಪವಾಸ ಕೈಗೊಳ್ಳಲು ತೀರ್ಮಾಸಿದೆ ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಪ್ರತಿ ಧರ್ಮವು ನಮಗೆ ಒಳ್ಳೆಯದು ಅಥವಾ ಯಾವುದನ್ನಾದರೂ ಒಳ್ಳೆಯದನ್ನು ಕಲಿಸುತ್ತದೆ ಎಂದು ನಾನು ನಂಬುತ್ತೇನೆ. ನಾವು ಸಾಮುದಾಯಿಕ ಸಾಮರಸ್ಯವನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ನಾವು ಮೊದಲಿಗೆ ಮಾನವೀಯತೆಯನ್ನು ನೋಡಬೇಕು, ಧರ್ಮಗಳ ನಂಬರ್ ನಂತರ ಬರಬೇಕು. ಇದು ನನ್ನ ಜೀವನದ ಮೊದಲ ಉಪವಾಸದ ಅನುಭವವಾಗಿದ್ದು, ಉಪವಾಸ ಮಾಡುತ್ತಿರುವುದರಿಂದ ನನ್ನ ಆರೋಗ್ಯದಲ್ಲೂ ವೃದ್ಧಿಯಾಗಿದೆ ಎಂದು ಸಂಜಯ್ ತಿಳಿಸಿದ್ದಾರೆ.

Check Also

ಮ್ಯಾಂಚೆಸ್ಟರ್‌ ಯುನೈಟೆಡ್‌ನ ಈ ಸ್ಟಾರ್ ಆಟಗಾರ ಉಮ್ರಾ ನಿರ್ವಹಿಸಲು ಮಕ್ಕಾಗೆ ಆಗಮಿಸಿದ್ದಾರೆ

001ಸಂದೇಶ ಇ-ಮ್ಯಾಗಝಿನ್: ಮಂಚೆಸ್ಟರ್ ಯುನೈಟೆಡ್‌ನ ಸ್ಟಾರ್ ಮಿಡ್‌ಫೀಲ್ಡರ್ ಪೌಲ್ ಪೋಗ್ಬಾ ಅವರು ಉಮ್ರಾ ಎಂದು ಕರೆಯಲ್ಪಡುವ ಮುಸ್ಲಿಮರ ಚಿಕ್ಕ ಮಕ್ಕಾ …

Leave a Reply

Your email address will not be published. Required fields are marked *