Monday , September 16 2019
Breaking News
Home / ರಿಯಲ್ ಹೀರೋಸ್ / ಉಪವಾಸಿಗ ಮುಸ್ಲಿಂ ಯುವಕನ ಜೊತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಅಂಕಲ್‌ಗೆ ಹಸಿದಿತ್ತು ಆದರೆ ಅವರು ಮಾಡಿದ್ದೇನು ನೋಡಿ

ಉಪವಾಸಿಗ ಮುಸ್ಲಿಂ ಯುವಕನ ಜೊತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಅಂಕಲ್‌ಗೆ ಹಸಿದಿತ್ತು ಆದರೆ ಅವರು ಮಾಡಿದ್ದೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಭಾರತದಲ್ಲಿ ಸರ್ವ ಧರ್ಮ ಸಹಿಷ್ಣುತೆ ನಶಿಸುತ್ತಿದೆ ಎಲ್ಲೆಂದರಲ್ಲಿ ಕೋಮುವಾದವೇ ತುಂಬಿ ಹೋಗಿದೆ ಅಂತ ಇತ್ತೀಚಿನ ಕೆಲವೊಂದು ಘಟನೆಗಳನ್ನು ಪತ್ರಿಕೆಗಳಲ್ಲಿ ಓದುವಾಗ ನಮಗೆ ಅನಿಸುವುದಿದೆ. ಆದರೆ ಭಾರತದಲ್ಲಿ ಇಂದಿಗೂ ಸರ್ವ ಧರ್ಮಗಳನ್ನು ಗೌರವಿಸಿ ತನ್ನ ಧರ್ಮವನ್ನು ಅನುಸರಿಸುವ ಜನರು ಇದ್ದಾರೆ. ಎಲ್ಲಾ ಧರ್ಮಗಳಲ್ಲೂ ಕೋಮುವಾದಿಗಳು ಇರುವುದು ನಿಜ ಆದರೆ ಸರ್ವ ಧರ್ಮಗಳನ್ನು ಪ್ರೀತಿಸಿ ತನ್ನ ಧರ್ಮವನ್ನು ಅನುಸರಿಸುವ ಜನರೂ ಕಮ್ಮಿಯೇನಲ್ಲ.

ಇತ್ತೀಚೆಗೆ ನಡೆದ ಈ ಒಂದು ಘಟನೆ ಅದಕ್ಕೆ ಸ್ಪಷ್ಟ ಉದಾಹರಣೆ. ಗುವಾಹಟಿಯ ಮುಸ್ಲಿಮ್ ಯುವಕನೊಬ್ಬ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ. ಆ ಯುವಕನ ಜೊತೆ ಪಕ್ಕದ ಸೀಟಿನಲ್ಲಿ ಹಿರಿಯ ಹಿಂದೂ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿದ್ದರು.

ಇಬ್ಬರೂ ಪರಸ್ಪರ ಮಾತನಾಡಿರಲಿಲ್ಲ. ಅವರವರ ಪಾಡಿಗೆ ಕುಳಿತಿದ್ದರು. ಆ ಹಿರಿಯ ವ್ಯಕ್ತಿಗೆ ಹಸಿವಾಗಿತ್ತು. ಅವರು ಗಗನ ಸಖಿಯನ್ನು ಕರೆದು ಆಹಾರ ಆರ್ಡರ್ ಮಾಡಿದರು. ಆ ನಂತರ ತನ್ನ ಪಕ್ಕದಲ್ಲಿ ಕುಳಿತ ಮುಸ್ಲಿಮ್ ಯುವಕನನ್ನು ನೋಡಿದ ಅವರು ಪುನಃ ಗಗನ ಸಖಿಯನ್ನು ಕರೆದು ಆಹಾರವನ್ನು ಕ್ಯಾನ್ಸಲ್ ಮಾಡಿದರು.

ತದನಂತರ ಯುವಕನ ಕಡೆಗೆ ನೋಡಿದ ಆ ವ್ಯಕ್ತಿ… ನಿನಗೆ ಉಪವಾಸ ಉಂಟ ಮಗಾ? ಎಂದು ಕೇಳಿದರು. ಯುವಕ ಹೌದು ಎಂದ. ಆನಂತರ ಅವರು ಮುಸ್ಲಿಮ್ ಯುವಕನ ಜೊತೆ ಮಾತನಾಡಲಿಲ್ಲ. ಅವರ ಪಾಡಿಗೆ ಪುಸ್ತಕ ಓದುತ್ತಾ ಕುಳಿತರು.

ವಿಮಾನ ತನ್ನ ಸ್ಥಾನಕ್ಕೆ ತಲುಪಿದ ನಂತರ ಎಲ್ಲರೂ ಇಳಿಯಲು ಅಣಿಯಾಗುತ್ತಿದ್ದರು. ಯುವಕ ಆ ಹಿರಿಯ ವ್ಯಕ್ತಿಯಲ್ಲಿ ಕೇಳಿದ, ಅಂಕಲ್ ನೀವು ಯಾಕೆ ಆಹಾರ ಸೇವಿಸಲಿಲ್ಲ. ಆರ್ಡರ್ ಮಾಡಿದ್ದನ್ನೂ ಕ್ಯಾನ್ಸಲ್ ಮಾಡಿಬಿಟ್ರಲ್ಲ ಯಾಕೆ ಅಂತ ಪ್ರಶ್ನಿಸಿದ.

ಯುವಕನ ಮುಖ ನೋಡಿ ಮುಗುಳ್ನಕ್ಕ ಆ ಹಿರಿಯ ವ್ಯಕ್ತಿ… ಮಗಾ ನೀನು ಉಪವಾಸಿಗನಾಗಿರುವಾಗ ನಿನ್ನ ಮುಂದೆ ನಾನು ಹೇಗೆ ತಿನ್ನಲಿ! ಎಂದರು. ಹಾಗೇನೂ ಇಲ್ಲ ಅಂಕಲ್ ನನಗೆ ಪ್ರಾಬ್ಲಂ ಇಲ್ಲ ಎಂದ ಯುವಕ.

ಪುನಃ ಯುವಕನ ಮುಖ ನೋಡಿ ನಗುತ್ತಾ… ನೋಡು ಮಗಾ ನಾನು ಹಿಂದು ಹೌದು…ಆದರೆ ಇದರ ಅರ್ಥ ನಾನು ಬೇರೆ ಧರ್ಮದವರ ಭಾವನೆಯನ್ನು ಗೌರವಿಸದೆ ಅವರನ್ನು ದ್ವೇಷಿಸಬೇಕೆಂದಲ್ಲ. ಮಾನವೀಯತೆ ಯಾವತ್ತಿಗೂ ಮೊದಲು ಎಂದು ಯುವಕನ ಬೆನ್ನು ತಟ್ಟಿ ಹೋದರು ಅಂಕಲ್.

ಈ ಮುಸ್ಲಿಮ್ ಯುವಕನ ಹೆಸರು ಮೊಹಮ್ಮದ್ ಸೈಫ್… ಅಸ್ಸಾಮಿನ ಗುವಾಹಟಿಯವರಾದ ಸೈಫ್ ಈ ಘಟನೆಯನ್ನು ತಮ್ಮ ಫೇಸ್ಬುಕ್ ವಾಲ್‌ನಲ್ಲಿ ಬರೆದಿದ್ದಾರೆ. ಆ ಹಿರಿಯ ಹಿಂದೂ ವ್ಯಕ್ತಿಯ ಹೆಸರನ್ನು ಅವರು ತಮ್ಮ ಪೋಸ್ಟಲ್ಲಿ ಉಲ್ಲೇಖಿಸಿಲ್ಲ. 81 ವರ್ಷ ಪ್ರಾಯದವರಾದ ಆ ಹಿರಿಯ ವ್ಯಕ್ತಿ… ನಿವೃತ್ತ ಸಿವಿಲ್ ಇಂಜಿನಿಯರ್ ಎಂದು ಸೈಫ್ ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದಾರೆ.

Check Also

ಅಮೇರಿಕಾದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಶಸ್ತಿ ಪಡೆದ 10 ವರ್ಷದ ಹಫೀಜ್-ಎ-ಕುರಾನ್

000ಸಂದೇಶ ಇ-ಮ್ಯಾಗಝಿನ್: ಕ್ಯಾವಿಟಿ ಕ್ರಷರ್ ಅನ್ನು ಕಂಡುಹಿಡಿದಿದ್ದಕ್ಕಾಗಿ 10 ವರ್ಷದ ಪಾಕಿಸ್ತಾನಿ ಮಗು ಮತ್ತು ಅವರ ಕುಟುಂಬದೊಂದಿಗೆ ಅಮೆರಿಕದಲ್ಲಿ ಎಐ …

Leave a Reply

Your email address will not be published. Required fields are marked *