Monday , August 26 2019
Breaking News
Home / ರಾಷ್ಟ್ರೀಯ / ಮಾಬ್ ಲಿಂಚಿಂಗ್‌ಗೆ ಬಲಿಯಾಗುತ್ತಿದ್ದ ಮುಸ್ಲಿಮ್ ವ್ಯಕ್ತಿಯನ್ನು ರಕ್ಷಿಸಿದ ಹಿಂದೂ ಕುಟುಂಬ

ಮಾಬ್ ಲಿಂಚಿಂಗ್‌ಗೆ ಬಲಿಯಾಗುತ್ತಿದ್ದ ಮುಸ್ಲಿಮ್ ವ್ಯಕ್ತಿಯನ್ನು ರಕ್ಷಿಸಿದ ಹಿಂದೂ ಕುಟುಂಬ

ಸಂದೇಶ ಇ-ಮ್ಯಾಗಝಿನ್: ಜೈ ಶ್ರೀ ರಾಮ್ ಎಂದು ಜಪಿಸಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಥಳಿಸಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಿಂದ ವರದಿಯಾಗಿದೆ. ಸಂತ್ರಸ್ತ ಇಮ್ರಾನ್ ಇಸ್ಮಾಯಿಲ್ ಪಟೇಲ್ ಎಂಬ ವ್ಯಕ್ತಿ ಬೈಕಿನಲ್ಲಿ ಹೋಗುತ್ತಿದ್ದಾಗ ತಡೆದ ದುಷ್ಕರ್ಮಿಗಳ ಗುಂಪೊಂದು ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸಿ ನಿರಾಕರಿಸಿದ್ದಕ್ಕೆ ಥಳಿಸಿದೆ ಎನ್ನಲಾಗಿದೆ. ಗುಂಪು ನನ್ನನ್ನು ಥಳಿಸುತ್ತಿದ್ದಾಗ ಸ್ಥಳಕ್ಕಾಗಮಿಸಿದ ಗಣೇಶ್ ಮತ್ತು ಅವರ ಕುಟುಂಬದವರು ನನ್ನನ್ನು ಹಲ್ಲೆಕೋರರಿಂದ ರಕ್ಷಿಸಿದ್ದಾರೆ ಎಂದು ಇಮ್ರಾನ್ ಇಸ್ಮಾಯಿಲ್ ತಿಳಿಸಿದ್ದಾರೆ. ಹೊಟೇಲ್ ಉದ್ಯೋಗಿಯಾಗಿರುವ ಇಮ್ರಾನ್ ರಾತ್ರಿ ಪಾಳಿಯ ಕೆಲಸ ಮುಗಿಸಿ ಬೆಳಗ್ಗೆ ಮನೆಗೆ ಹಿಂದಿರುಗುತ್ತಿದ್ದಾಗ, ಬೇಗಂಪುರ್ ಎಂಬಲ್ಲಿ ಅಡ್ಡಹಾಕಿದ ದುಷ್ಕರ್ಮಿಗಳು ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸಿದ್ದಾರೆ. ಮತ್ತು ಹಲ್ಲೆ ನಡೆಸಿದ್ದಾರೆ. ಬಳಿಕ ಗಣೇಶ್ ಮತ್ತವರ ಕುಟುಂಬದವರು ಬಂದು ಹಲ್ಲೆಕೋರರನ್ನು ಕಾಡಿಬೇಡಿ ಹಲ್ಲೆ ಮಾಡದಂತೆ ತಡೆದಿದ್ದಲ್ಲದೆ, ಇಮ್ರಾನ್ ಅವರ ಬೈಕ್ ಕೀಯನ್ನು ಹಲ್ಲೆಕೋರರಿಂದ ಪಡೆದು ಇಮ್ರಾನ್ ಮನೆಗೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.

ಬೇಗಂಪುರ ಪೊಲೀಸ್ ಇನ್ಸ್‌ಪೆಕ್ಟರ್ ಮಧುಕರ್ ಸಾವಂತ್ ಪತ್ರಕರ್ತರೊಂದಿಗೆ ಮಾತನಾಡಿ, “ಗುರುವಾರ ರಾತ್ರಿ ಜೈ ಶ್ರೀ ರಾಮ್ ಜಪಿಸುವಂತೆ ಒತ್ತಾಯಿಸಿ ಒಬ್ಬ ವ್ಯಕ್ತಿಯನ್ನು ಥಳಿಸಲಾಗಿದೆ ಎಂದು ದೂರು ನೀಡಲಾಗಿದ್ದು, ಸೆಕ್ಷನ್ 153 ಎ ಅಡಿಯಲ್ಲಿ ನಾವು ದೂರು ದಾಖಲಿಸಿದ್ದೇವೆ. ನಾವು ಈ ಬಗ್ಗೆ ತನಿಖೆ ನಡೆಸುತ್ತೇವೆ ಮತ್ತು ಅದರ ನಂತರವೇ ನಾವು ಏನನ್ನಾದರೂ ಹೇಳಬಹುದು” ಎಂದು ಹೇಳಿದರು.

Check Also

ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

000ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್ ಅವರು ಈ ಪ್ರದೇಶದಲ್ಲಿ ವಾಸಿಸುವ …

Leave a Reply

Your email address will not be published. Required fields are marked *