Saturday , April 4 2020
Breaking News
Home / ವಿಶೇಷ / ಮುಸ್ಲಿಮರ ರಂಝಾನ್ ಶೀರ್‌ಕುರ್ಮಾ‌ಗೆ ಶ್ಯಾವಿಗೆ ತಯಾರಿಸುವುದು ಹಿಂದೂ ಕುಟುಂಬ

ಮುಸ್ಲಿಮರ ರಂಝಾನ್ ಶೀರ್‌ಕುರ್ಮಾ‌ಗೆ ಶ್ಯಾವಿಗೆ ತಯಾರಿಸುವುದು ಹಿಂದೂ ಕುಟುಂಬ

ಸಂದೇಶ ಇ-ಮ್ಯಾಗಝಿನ್: ಒಂದು ಸಮುದಾಯದವರ ಸಂಪ್ರದಾಯಕ್ಕೆ ಇನ್ನೊಂದು ಸಮುದಾಯದವರ ಸಹಕಾರ ಇನ್ನೊಂದು ಸಮುದಾಯದವರ ಹಬ್ಬದ ಅಡಿಗೆಗೆ ಬಳಸುವ ವಸ್ತು ತಯಾರಿಸುವುದು ಮತ್ತೊಂದು ಸಮುದಾಯದ ಜನ. ಇಂತಹ ವಿಭಿನ್ನ ಧರ್ಮಗಳ ಸಹಾಬಾಳ್ವೆ ಜೀವನ ನಮ್ಮ ಭವ್ಯ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ಜಗತ್ತಿನ ಬೇರೆ ಯಾವ ದೇಶದಲ್ಲೂ ಈ ರೀತಿಯ ವಾತಾವರಣ ಇಲ್ಲ ಎಂಬುದು ನಮಗೆ ಹೆಮ್ಮೆಯ ವಿಚಾರ.

ಮುಸ್ಲಿಮ್ ಸಮುದಾಯದವರ ಉಪವಾಸದ ತಿಂಗಳಾದ ರಂಝಾನ್‌ನಲ್ಲಿ ಶೀರ್ ಕುರ್ಮಾ ಸಾಮಾನ್ಯವಾಗಿ ತಯಾರಿಸುತ್ತಾರೆ. ಹಾಲಿನಲ್ಲಿ ಮಾಡುವ ಈ ಖಾದ್ಯಕ್ಕೆ ಶ್ಯಾವಿಗೆಯ ಅವಶ್ಯವಾಗಿದೆ. ವಾರಣಾಸಿಯ ಹಿಂದೂ ಕುಟುಂಬವೊಂದು ರಮ್‌ಝಾನ್ ತಿಂಗಳಲ್ಲಿ ಬಳಕೆಯಾಗುವ ಈ ಶ್ಯಾವಿಗೆಯನ್ನು ತಯಾರಿಸುತ್ತದೆ. ಹಾಗಂತ ಇವರ ವೃತ್ತಿಯಲ್ಲ ಇದು. ರಂಝಾನ್ ತಿಂಗಳಿಗೆ ಮೂರು ತಿಂಗಳು ಮೊದಲು ಅನಂತ್ ಲಾಲ್ ಕೇಸ್ರಾನಿಯವರ ಕುಟುಂಬ ತಮ್ಮ ಕುಟುಂಬದ ಕಸುಬಾದ ಕೃಷಿಯನ್ನು ಸ್ಥಗಿತಗೊಳಿಸಿ ಶ್ಯಾವಿಗೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ.

ರಂಝಾನ್‌ಗಿಂತ ಮೂರು ತಿಂಗಳು ಮುಂಚೆ ನಾವು ಶ್ಯಾವಿಗೆ ಮಾಡಲು ಪ್ರಾರಂಭಿಸುತ್ತೇವೆ. ಮುಸ್ಲಿಮ್ ಸಹೋದರರು ಈ ಸಮಯದಲ್ಲಿ ನಮ್ಮ ಮನೆಯನ್ನು ಹುಡುಕಿಕೊಂಡು ಬಂದು ಖರೀದಿಸುತ್ತಾರೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ನಮ್ಮ ಕುಟುಂಬದ ತಲತಲಾಂತರದಿಂದ ಈ ಕಾರ್ಯ ಮಾಡುತ್ತಾ ಬಂದಿದೆ. ನಾವು ಧರ್ಮದ ಆಧಾರದ ಮೇಲೆ ಜನರನ್ನು ವಿಂಗಡಿಸುವುದಿಲ್ಲ. ಎಲ್ಲರನ್ನೂ ಸಹೋದರರನ್ನಾಗಿ ಕಾಣುತ್ತೇವೆ ಎಂದು ಪರಿವಾರದ ಸದಸ್ಯ ಅನಂತ್ ಲಾಲ್ ಕೇಸ್ರಾನಿ ಹೇಳುತ್ತಾರೆ.

ಈ ಅವಧಿಯಲ್ಲಿ ಈ ಕುಟುಂಬ ತಯಾರಿಸುವ ಶ್ಯಾವಿಗೆ ವಿದೇಶಗಳಿಗೂ ರಫ್ತಾಗುತ್ತದೆ. ವಿವಿಧ ಬಗೆಯ ಶ್ಯಾವಿಗೆ ತಯಾರಿಸಲಾಗುತ್ತಿದ್ದು, ಇದರಲ್ಲಿ ರುಮಾನಿ ಶ್ಯಾವಿಗೆ ಗ್ರಾಹಕರ ಅಚ್ಚು ಮೆಚ್ಚಿನ ಶ್ಯಾವಿಗೆ ಯಾಗಿದೆ. ಇದಕ್ಕಾಗಿ ಹೊರ ರಾಜ್ಯಗಳಿಂದಲೂ ಮುಸ್ಲಿಮ್ ವ್ಯಾಪಾರಿಗಳು ಅನಂತ್ ಲಾಲ್ ಅವರ ಕುಟುಂಬ ಇರುವ ವಾರಣಾಸಿಯ ಅಫ್‌ಸಾನ್ ಗಂಜ್‌ಗೆ ಬಂದು ಖರೀದಿಸುತ್ತಾರೆ.

Check Also

ನನ್ನ ಉಮ್ಮಾ: ಹಿಂದೂ ವ್ಯಕ್ತಿ ತನ್ನ ಮುಸ್ಲಿಂ ತಾಯಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಪೋಸ್ಟ್ ವೈರಲ್

ಸಂದೇಶ ಇ-ಮ್ಯಾಗಝಿನ್: ಕೇರಳದ ಮಲಪ್ಪುರಂನ ಕಾಳಿಕಾವ್‌ನ ಅನಿವಾಸಿ ಭಾರತೀಯರಾದ ಶ್ರೀಧರನ್ ಅವರ ಫೇಸ್‌ಬುಕ್ ಪೋಸ್ಟ್, “ನನ್ನ ಉಮ್ಮಾ (ತಾಯಿ) ಅಲ್ಲಾಹನ …

Leave a Reply

Your email address will not be published. Required fields are marked *