Monday , August 26 2019
Breaking News
Home / ರಾಷ್ಟ್ರೀಯ / ಮಾಬ್ ಲಿಂಚಿಂಗ್ ಸಂತ್ರಸ್ತರಿಗೆ ಸಹಾಯ ಮಾಡಲು ಹೆಲ್ಪ್ ಲೈನ್ ಪ್ರಾರಂಭ

ಮಾಬ್ ಲಿಂಚಿಂಗ್ ಸಂತ್ರಸ್ತರಿಗೆ ಸಹಾಯ ಮಾಡಲು ಹೆಲ್ಪ್ ಲೈನ್ ಪ್ರಾರಂಭ

ಸಂದೇಶ ಇ-ಮ್ಯಾಗಝಿನ್: ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಅಪರಾಧ ಮತ್ತು ಗುಂಪು ಹತ್ಯೆ(ಮಾಬ್ ಲಿಂಚಿಂಗ್) ಪ್ರಕರಣಗಳ ಹಿನ್ನೆಲೆಯಲ್ಲಿ ಇದೀಗ ಅಂತಹ ಕೃತ್ಯಗಳ ಸಂತ್ರಸ್ತರನ್ನು ಸಹಾಯ ಮಾಡಲು ಇದೀಗ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ದೇಶದ 100 ನಗರಗಳಲ್ಲಿ ದ್ವೇಷ ಅಪರಾಧ ಕೃತ್ಯಕ್ಕೆ ಬಲಿಯಾದವರಿಗೆ ಸಹಾಯ ಮಾಡಲು ಈ ಸಂಖ್ಯೆ ಲಭ್ಯವಿರುತ್ತದೆ ಎನ್ನಲಾಗಿದೆ. ಟೋಲ್-ಫ್ರೀ ಸಂಖ್ಯೆ 1800-3133-600-00 ಯನ್ನು ಹೆಲ್ಪ್ ಲೈನ್ ಎಗೈನ್ಸ್ಟ್ ಹೇಟ್ ಎಂದು ಹೆಸರಿಸಲಾಗಿದೆ. ರಾಜಧಾನಿ ದೆಹಲಿಯಲ್ಲಿ ನಡೆದ ಸಹಾಯವಾಣಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಖ್ಯಾತ ವಕೀಲ ಸಂಜಯ್ ಹೆಗ್ಡೆ, ಹಿರಿಯ ಪತ್ರಕರ್ತ ಊರ್ಮಿಳೇಶ್, ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನ ಮಾಜಿ ನೂಡಲ್ ಅಧಿಕಾರಿ ವೈದ್ಯ ಡಾ. ಕಫೀಲ್ ಖಾನ್, ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಅಪೂರ್ವಾನಂದ್ ಮುಂತಾದವರು ಭಾಗವಹಿಸಿದ್ದರು.

“ಅನೇಕ ಯುರೋಪಿಯನ್ ದೇಶಗಳಲ್ಲಿ ನಡೆಯುತ್ತಿರುವಂತೆ ದ್ವೇಷದ ಅಪರಾಧವನ್ನು ಗುರುತಿಸಲು ಮತ್ತು ಅದರ ವಿರುದ್ಧ ಕ್ರಮ ಕೈಗೊಳ್ಳಲು ಈ ಸಹಾಯವಾಣಿಯನ್ನು ಪ್ರಾರಂಭಿಸುವ ಅಗತ್ಯವಿತ್ತು. ಏಕೆಂದರೆ ದೇಶದಲ್ಲಿ ಅಲ್ಪಸಂಖ್ಯಾತರ ಧರ್ಮದ ಗುರುತಿನ ಕಾರಣದಿಂದಾಗಿ ಅವರ ಮೇಲೆ ದಾಳಿ ನಡೆಯುತ್ತಿದೆ. ಇಂತಹ ದ್ವೇಷದ ಅಪರಾಧಗಳ ದೂರನ್ನು ತೆಗೆದುಕೊಳ್ಳಲು ಪೊಲೀಸರು ನಿರಾಕರಿಸುತ್ತಾರೆ” ಎಂದು ಅಪೂರ್ವಾನಂದ್ ಹೇಳಿದರು.

Check Also

ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

000ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್ ಅವರು ಈ ಪ್ರದೇಶದಲ್ಲಿ ವಾಸಿಸುವ …

Leave a Reply

Your email address will not be published. Required fields are marked *