Thursday , June 20 2019
Breaking News
Home / ಕ್ರೀಡೆ / ಉಪವಾಸದಿಂದ ತನ್ನ ಕ್ರಿಕೆಟ್ ಜೀವನದ ಮೇಲಾಗುವ ಲಾಭಗಳನ್ನು ಬಹಿರಂಗ ಪಡಿಸಿದ ಕ್ರಿಕೆಟರ್ ಹಾಶಿಂ ಆಮ್ಲ

ಉಪವಾಸದಿಂದ ತನ್ನ ಕ್ರಿಕೆಟ್ ಜೀವನದ ಮೇಲಾಗುವ ಲಾಭಗಳನ್ನು ಬಹಿರಂಗ ಪಡಿಸಿದ ಕ್ರಿಕೆಟರ್ ಹಾಶಿಂ ಆಮ್ಲ

ಸಂದೇಶ ಇ-ಮ್ಯಾಗಝಿನ್: ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಹಾಶಿಂ ಆಮ್ಲ ಅವರು ರಂಝಾನ್ ತಿಂಗಳಲ್ಲಿ ಕ್ರಿಕೆಟ್ ವಿಶ್ವ ಕಪ್ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಉಪವಾಸದಿಂದಾಗಿ ನನಗೆ ಆಧ್ಯಾತ್ಮಿಕ ಹಾಗೂ ಮಾನಸಿಕ ಕಸರತ್ತು ಸಿಗುತ್ತದೆ. ಉಪವಾಸಿಗನಾಗಿ ಮೈದಾನದಲ್ಲಿ ಆಡುವಾಗ ನನಗೆ ವಿಶಿಷ್ಟ ಉಲ್ಲಾಸ ವಿರುತ್ತದೆ. ಇದನ್ನು ನಾನು ಹಿಂದೆ ಹಲವಾರು ಬಾರಿ ಅನುಭವಿಸಿದ್ದೇನೆ. ಅದೇ ಕಾರಣದಿಂದಾಗಿ ಉಪವಾಸಿಗನಾಗಿ ನನಗೆ ಕೆಲವೊಂದು ದಾಖಲೆಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಐಸಿಸಿ ವೈಬ್‌ಸೈಟ್‌ನಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿರುವ ಆಮ್ಲ, ‘ನಾನು ಪ್ರತೀ ವರ್ಷ ರಂಝಾನ್‌ನಲ್ಲಿ ಉಪವಾಸ ವೃತಾಚರಣೆ ಮಾಡುತ್ತೇನೆ. ನಾನು ಉಪವಾಸಿಗನಾಗಿ ಆಡಿಗಾಗಲೆಲ್ಲ ಇತರ ಸಮಯದಲ್ಲಿ ಆಡುವಾಗ ಸಿಗುವುದಕ್ಕಿಂತ ಹೆಚ್ಚಿನ ಮಾನಸಿಕ ಹಾಗೂ ಆಧ್ಯಾತ್ಮಿಕ ಶಕ್ತಿ ನನ್ನಲ್ಲಿ ತುಂಬಿರುತ್ತದೆ ವಿಶ್ವ ಕಪ್ ಇದೇ ಅವಧಿಯಲ್ಲಿ ಬಂದಿರುವುದು ನನ್ನ ಪಾಲಿಗೆ ಸಂತಸ ತಂದಿದೆ ಎಂದಿದ್ದಾರೆ.

ಈ ಹಿಂದೆ 2012 ರಲ್ಲಿ ಇಂಗ್ಲೇಂಡ್ ವಿರುದ್ಧ ಉಪವಾಸಿಗನಾಗಿ ಟೆಸ್ಟ್ ಮ್ಯಾಚ್ ಆಡುತ್ತಿದ್ದಾಗ ಆಮ್ಲ ಅವರು ದಕ್ಷಿಣ ಆಫ್ರಿಕಾ ಪರವಾಗಿ ಟೆಸ್ಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಮಾಡಿದ್ದರು. ಇದೀಗ ವಿಶ್ವ ಕಪ್ ಗಾಗಿ ಕಾಯುತ್ತಿರುವ ಆಮ್ಲ ಮೊನ್ನೆ ನಡೆದ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕ್ರಮವಾಗಿ 65 ಹಾಗೂ 51 ರನ್ನುಗಳ ಅಜೇಯ ಆಟ ಆಡಿದ್ದರು. ಈ ಸಮಯದಲ್ಲಿ ಅವರು ಉಪವಾಸಿಗರಾಗಿದ್ದರು ಎಂಬುದು ವಿಶೇಷ.

Check Also

ಈ ರೀತಿ ಆದಲ್ಲಿ ಇರ್ಫಾನ್ ಪಠಾಣ್ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ‍ ರಚಿಸಲಿದ್ದಾರೆ

000ಸಂದೇಶ ಇ-ಮ್ಯಾಗಝಿನ್: ಟಿ-20 ಕ್ರಿಕೆಟ್ ಬಂದ ನಂತರ ಕ್ರಿಕೆಟ್ ಆಟದ ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗಿದೆ. ಇದೇ ಕಾರಣದಿಂದಾಗಿ ಬೇರೆ ಬೇರೆ …

Leave a Reply

Your email address will not be published. Required fields are marked *