Thursday , June 20 2019
Breaking News
Home / ವಿಶೇಷ / ಕುರ್‌ಆನಿನ ಈ ಸೂಕ್ತಿ ‘ನ್ಯಾಯದ ಶ್ರೇಷ್ಟ ಅಭಿವ್ಯಕ್ತಗಳಲ್ಲಿ ಒಂದಾಗಿದೆ’ : ಹಾರ್ವರ್ಡ್ ಲಾ ಸ್ಕೂಲ್

ಕುರ್‌ಆನಿನ ಈ ಸೂಕ್ತಿ ‘ನ್ಯಾಯದ ಶ್ರೇಷ್ಟ ಅಭಿವ್ಯಕ್ತಗಳಲ್ಲಿ ಒಂದಾಗಿದೆ’ : ಹಾರ್ವರ್ಡ್ ಲಾ ಸ್ಕೂಲ್

ಸಂದೇಶ ಇ-ಮ್ಯಾಗಝಿನ್: ವಿಶ್ವದಲ್ಲೇ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಹಾರ್ವರ್ಡ್ ಲಾ ಸ್ಕೂಲ್, ತನ್ನ ಬೋಧನಾ ಗ್ರಂಥಾಲಯದ ಪ್ರವೇಶದ್ವಾರದಲ್ಲಿ ಪವಿತ್ರ ಕುರ್‌ಅನಿನ ಒಂದು ಸೂಕ್ತಿಯನ್ನು ಪ್ರಕಟಿಸಿದೆ. ಇದನ್ನು ಇತಿಹಾಸದ ನ್ಯಾಯದ ಮಹಾನ್ ಅಭಿವ್ಯಕ್ತಿಗಳಲ್ಲಿ ಒಂದು ಎಂದು ಸೂಕ್ತಿಯ ಬಗ್ಗೆ ವಿವರಣೆ ನೀಡಲಾಗಿದೆ. ಸೂರಾಃ ಅಲ್ ನಿಸಾ (ಸ್ತ್ರೀಯರು) ನ 135 ನೇ ಸೂಕ್ತಿಯನ್ನು ಬೋಧನಾ ವಿಭಾಗದ ಮುಖ್ಯ ದ್ವಾರದ ಎದುರಿನ ‘ದಿ ವರ್ಡ್ಸ್ ಆಫ್ ಜಸ್ಟಿಸ್ ಎಕ್ಸಿಬಿಷನ್’ ಗೋಡೆಯಲ್ಲಿ ಪ್ರಕಟಿಸಲಾಗಿದೆ.

ಸೂರಾಃ ಅಲ್ ನಿಸಾ 135 ನೇ ಸೂಕ್ತಿಯು, “ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವಿಗೋಸ್ಕರ ಸಾಕ್ಷ್ಯವಹಿಸುವವರಾಗಿರುತ್ತಾ ದೃಢವಾಗಿ ನಿಂತು ನ್ಯಾಯ ಪಾಲಿಸುವವರಾಗಿರಿ. ಅದು ಸ್ವತಃ ನಿಮಗೆ ಅಥವಾ ನಿಮ್ಮ ಮಾತಾಪಿತರಿಗೆ ಅಥವಾ ನಿಕಟ ಸಂಬಂಧಿಕರಿಗೆ ವಿರುದ್ಧವಾಗಿದ್ದರೂ ಸರಿ. (ನ್ಯಾಯಬೇಡುವವನು) ಧನಿಕನಾಗಿರಲಿ ಬಡವನಾಗಿರಲಿ ಅವರಿಬ್ಬರೊಂದಿಗೂ ಹೆಚ್ಚು ನಿಕಟನಾಗಿರುವವನು ಅಲ್ಲಾಹುವಾಗಿರುವನು. ಆದ್ದರಿಂದ ನೀವು ನ್ಯಾಯ ಪಾಲಿಸದೆ ದೇಹೇಚ್ಛೆಗಳನ್ನು ಅನುಸರಿಸದಿರಿ. ನೀವು ತಿರುಚುವುದಾಗಲಿ ಹಿಂದೆ ಸರಿಯುವುದಾಗಲಿ ಮಾಡಿದರೆ ಖಂಡಿತವಾಗಿಯೂ ನೀವು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.” ಎಂದು ಹೇಳುತ್ತದೆ.

ಈ ಅಧ್ಯಾಯವು ಕಾನೂನಿನ ಅಧ್ಯಾಪಕರಿಂದ ಪ್ರಕಟಿಸಲ್ಪಟ್ಟಿದೆ ಎಂದು ತಿಳಿಯಿತು. ಇತಿಹಾಸದಲ್ಲಿ ನ್ಯಾಯದ ಮಹಾನ್ ಅಭಿವ್ಯಕ್ತಿಯಾಗಿ ಇದನ್ನು ವಿವರಿಸಲಾಗಿದೆ ಎಂದು ಕಾಲೇಜಿನಲ್ಲಿ ಕಲಿಯುತ್ತಿರುವ ಸೌದಿ ಅರೇಬಿಯಾದ ವಿದ್ಯಾರ್ಥಿ ಅಬ್ದುಲ್ಲಾ ಜುಮ್ಮಾ ಹೇಳಿದ್ದಾರೆ.

ಕಾಲೇಜಿನ ಅಧಿಕೃತ ವೆಬ್ಸೈಟ್ ಪ್ರಕಾರ, ‘ದಿ ವರ್ಡ್ಸ್ ಆಫ್ ಜಸ್ಟಿಸ್ ಎಕ್ಸಿಬಿಷನ್’ ಮಾನವೀಯತೆಯ ಶ್ರದ್ಧೆಯ ಬಗ್ಗೆ ನ್ಯಾಯ ಮತ್ತು ಘನತೆಗೆ ಯೋಗ್ಯತೆಗೆ ಸಾಕ್ಷಿಯಾಗಿದೆ. “ಈ ಗೋಡೆಗಳ ಮೇಲಿನ ಪದಗಳು ನ್ಯಾಯದ ಪರಿಕಲ್ಪನೆಯ ಶಕ್ತಿ ಮತ್ತು ದೌರ್ಬಲ್ಯವನ್ನು ದೃಢೀಕರಿಸುತ್ತವೆ.”

ಲಾ ಸ್ಕೂಲ್ ರಚಿಸಿದ ‘ದಿ ವರ್ಡ್ಸ್ ಆಫ್ ಜಸ್ಟಿಸ್ ಎಕ್ಸಿಬಿಷನ್’ ನಲ್ಲಿ ಸುಮಾರು ಎರಡು ಡಜನ್ ಬೇರೆ ಬೇರೆ ಗ್ರಂಥಗಳ ಉಲ್ಲೇಖಗಳು ಇವೆ. ಅವುಗಳಲ್ಲಿ ಪ್ರವೇಶದ್ವಾರದಲ್ಲಿ ಈ ಮೂರನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ. ಅವುಗಳೆಂದರೆ ಸೇಂಟ್ ಅಗಸ್ಟೀನ್, ಪವಿತ್ರ ಕುರಾನ್ ಮತ್ತು ಮ್ಯಾಗ್ನಾ ಕಾರ್ಟಾದ ಉಲ್ಲೇಖಗಳಾಗಿವೆ.

Check Also

ಮುಸ್ಲಿಮರ ರಂಝಾನ್ ಶೀರ್‌ಕುರ್ಮಾ‌ಗೆ ಶ್ಯಾವಿಗೆ ತಯಾರಿಸುವುದು ಹಿಂದೂ ಕುಟುಂಬ

002ಸಂದೇಶ ಇ-ಮ್ಯಾಗಝಿನ್: ಒಂದು ಸಮುದಾಯದವರ ಸಂಪ್ರದಾಯಕ್ಕೆ ಇನ್ನೊಂದು ಸಮುದಾಯದವರ ಸಹಕಾರ ಇನ್ನೊಂದು ಸಮುದಾಯದವರ ಹಬ್ಬದ ಅಡಿಗೆಗೆ ಬಳಸುವ ವಸ್ತು ತಯಾರಿಸುವುದು …

Leave a Reply

Your email address will not be published. Required fields are marked *