Monday , July 22 2019
Breaking News
Home / ಗಲ್ಫ್ ಸುದ್ದಿ / ಹಜ್: ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮ; ಸಚಿವ ಸಂಪುಟದ ತೀರ್ಮಾನ

ಹಜ್: ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮ; ಸಚಿವ ಸಂಪುಟದ ತೀರ್ಮಾನ

ಸಂದೇಶ ಇ-ಮ್ಯಾಗಝಿನ್: ಹಜ್ ಅನ್ನು ರಾಜಕೀಯಗೊಳಿಸುವ ಯಾವುದೇ ಕೃತ್ಯವು ಸ್ವೀಕಾರಾರ್ಹವಲ್ಲ ಎಂದು ಮಂಗಳವಾರ ಜಿದ್ದಾದಲ್ಲಿ ನಡೆದ ಸೌದಿ ಮಂತ್ರಿ ಪರಿಷತ್ತಿನ ಸಭೆಯಲ್ಲಿ ತೀರ್ಮಾನಿಸಲಾಯಿತು. ದೊರೆ ಸಲ್ಮಾನ್ ಅವರ ಅಧ್ಯಕ್ಷತೆಯಲ್ಲಿ ಜೆದ್ದಾದ ಅಲ್-ಸಲಾಮ್ ಅರಮನೆಯಲ್ಲಿ ಕ್ಯಾಬಿನೆಟ್ ಸಚಿವರ ಸಾಪ್ತಾಹಿಕ ಅಧಿವೇಶನ ನಡೆಯಿತು. ಅಧಿವೇಶನದ ನಂತರ ಸೌದಿ ಪತ್ರಿಕಾ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ, ಮಾಧ್ಯಮ ಸಚಿವ ತುರ್ಕಿ ಅಲ್-ಶಬಾನಾ, ಹಜ್ ಯಾತ್ರಾರ್ಥಿಗಳು ಯಾವುದೇ ರಾಜಕೀಯ ಅಥವಾ ಪಂಥೀಯ ಘೋಷಣೆಗಳನ್ನು ಕೂಗುವಂತಹ ಅಥವಾ ಇತರ ಹಜ್ ಯಾತ್ರಿಕರಿಗೆ ತೊಂದರೆ ಮಾಡಿ ಶಾಂತಿ ಭಂಗ ಮಾಡಲು ಯತ್ನಿಸುವ ಕೃತ್ಯಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.

ಸೌದಿ ಗೆಜೆಟ್ ವರದಿ ಮಾಡಿದಂತೆ, ಸಭೆಯಲ್ಲಿ ಯಾತ್ರಾರ್ಥಿಗಳಿಗೆ ಇಂತಹ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಲಾಯಿತು ಮತ್ತು ಅವುಗಳನ್ನು ತಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಯಿತು. ಅಂತಹ ಕೃತ್ಯಗಳನ್ನು ಎಸಗುವವರ ವಿರುದ್ಧ ಸಾಧ್ಯವಿರುವ ಎಲ್ಲಾ ಕಾನೂನು ನಿಯಮಗಳು ಮತ್ತು ಸೂಚನೆಗಳನ್ನು ಅನ್ವಯಿಸಲಾಗುವುದು ಎಂದು ಕ್ಯಾಬಿನೆಟ್ ಎಚ್ಚರಿಸಿದೆ.

Check Also

ಇಸ್ರೇಲ್ ದಾಳಿಗೆ ಹುತಾತ್ಮರಾದ ಫೆಲಸ್ತೀನಿಗಳ ಕುಟುಂಬಸ್ಥರಿಗೆ ಸೌದಿ ರಾಜನಿಂದ ಅಮೋಘ ಕೊಡುಗೆ

104ಸಂದೇಶ ಇ-ಮ್ಯಾಗಝಿನ್: ಇಸ್ರೇಲಿ ಆಕ್ರಮಣದಿಂದ ಹುತಾತ್ಮರಾದವರ ಫೆಲಸ್ತೀನಿ ಕುಟುಂಬದ ಸುಮಾರು 1,000 ಸದಸ್ಯರ ಹಜ್ ಗೆ ಆಥಿತ್ಯ ವಹಿಸುವುದಾಗಿ ಸೌದಿ …

Leave a Reply

Your email address will not be published. Required fields are marked *