Tuesday , December 10 2019
Breaking News
Home / ಹದೀಸ್ / ಸಂಪಾದನೆಯು ಇಬಾದತ್ ಆಗಿದೆ

ಸಂಪಾದನೆಯು ಇಬಾದತ್ ಆಗಿದೆ

ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ

ಸಂಕಲ್ಪ ಶುದ್ದಿಯು ಮಾನವನ ಇಡೀ ಜೀವನ ಮತ್ತು ಅವನ ಎಲ್ಲಾ ಕಾರ್ಯಗಳನ್ನು ಇಬಾದತ್ ಆಗಿ ಮಾಡುತ್ತದೆ. ಸಂಕಲ್ಪದ ದೋಷವು ಉತ್ತಮ ಕಾರ್ಯಗಳನ್ನು ಪಾಪವಾಗಿ ಮಾರ್ಪಡಿಸುತ್ತದೆ. ಇಸ್ಲಾಮ್ ಧರ್ಮನಿಷ್ಠೆ ಮತ್ತು ಇಬಾದತ್ ನ ಎಷ್ಟು ವಿಶಾಲ ಕಲ್ಪನೆಯನ್ನು ಮೂಡಿಸುತ್ತದೆ ಎಂದು ಈ ಹದೀಸ್ ನಿಂದ ವ್ಯಕ್ತವಾಗುತ್ತದೆ.

ಕಅದ್ ಬಿನ್ ಉಜ್ರ(ರ) ಹೇಳುತ್ತಾರೆ:
ಲೋಕಪ್ರವಾದಿ(ಸ.ಅ)ರ ಬಳಿಯಿಂದ ಓರ್ವ ವ್ಯಕ್ತಿ ಹಾದು ಹೋಗುತ್ತಿದ್ದನು. ಅವನು ದುಡಿದು ಸಂಪಾದಿಸುವುದಕ್ಕಾಗಿ ಹೋಗುತ್ತಿದ್ದನು. ಪ್ರವಾದಿ ಮುಹಮ್ಮದ್(ಸ.ಅ)ರ ಬಳಿ ಕುಳಿತಿದ್ದವರು ಅವನ ಪರಿಶ್ರಮ ಮತ್ತು ಉತ್ಸಾಹವನ್ನು ಕಂಡು ಹೀಗೆಂದರು; “ಪ್ರವಾದಿವರ್ಯರೇ! ಅವನ ಈ ಪರಿಶ್ರಮ ಮತ್ತು ಉತ್ಸಾಹವು ಅಲ್ಲಾಹನ ಮಾರ್ಗದಲ್ಲಾಗಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು.”

ಲೋಕ ಪ್ರವಾದಿ ಮುಹಮ್ಮದ್(ಸ.ಅ) ಹೇಳಿದರು; “ಅವನು ತನ್ನ ಸಣ್ಣ ಸಣ್ಣ ಮಕ್ಕಳ ಉದರ ಪೋಷಣೆಗಾಗಿ ಈ ಪರಿಶ್ರಮ ನಡೆಸುತ್ತಿರುವನೆಂದಾದರೆ ಅದು ಅಲ್ಲಾಹನ ಮಾರ್ಗದ ಪರಿಶ್ರಮ ಎಂದು ಪರಿಗಣಿಸಲ್ಪಡುವುದು. ಅವನು ತನ್ನ ವಯೋವೃದ್ದ ತಂದೆ ತಾಯಿಗಳ ಪೋಷಣೆಗಾಗಿ ಪರಿಶ್ರಮಿಸುತ್ತಿದ್ದರೆ ಅದು ಅಲ್ಲಾಹನ ಮಾರ್ಗದಲ್ಲೆಂದು ಪರಿಗಣಿಸಲ್ಪಡುವುದು. ಅವನು ಯಾರ ಮುಂದೆಯೂ ಕೈ ಚಾಚುವಂತಾಗಬಾರದೆಂಬ ಸಂಕಲ್ಪದಿಂದ ಸ್ವತಃ ತನಗಾಗಿ ಪರಿಶ್ರಮಿಸಿದರೆ ಅದು ಅಲ್ಲಾಹನ ಮಾರ್ಗದಲ್ಲೇಂದು ಪರಿಗಣಿಸಲ್ಪಡುವುದು. ಆದರೆ ಅವನ ಉದ್ದೇಶವು ಜನರ ಮುಂದೆ ತನ್ನ ಆರ್ಥಿಕ ಸುಸ್ಥಿತಿಯನ್ನು ಮೆರೆಯಬೇಕೆಂದೋ ಜನರಿಗೆ ತನ್ನ ಶ್ರೀಮಂತಿಕೆಯನ್ನು ಮೆರೆಯಬೆಕೆಂದೋ ಆಗಿದ್ದರೆ ಅವನ ಎಲ್ಲಾ ಪರಿಶ್ರಮಗಳು ಶೈತನಾನ ಮಾರ್ಗದಲ್ಲಿ ಎಂದು ಪರಿಗಣಿಸಲ್ಪಡುವುದು.” (ಅಲ್ ಮುಂದಿರಿ ತಬ್ರಾನಿಯಿಂದ)

Check Also

ಇಸ್ಲಾಮ್ ಸ್ವಾಭಿಮಾನ ಜೀವನಕ್ಕೆ ಪ್ರೋತ್ಸಾಹ ನೀಡುತ್ತದೆ

ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ ಇಸ್ಲಾಮ್ ಸ್ವಾಭಿಮಾನಕ್ಕೆ ಬಹಳ ಮಹತ್ವ ನೀಡುತ್ತದೆ. ಅದುದರಿಂದ ಪ್ರವಾದಿ(ಸ.ಅ)ರ ಶಿಕ್ಷಣವೇನೆಂದರೆ ಜನರ ಮುಂದೆ ತನ್ನ ಬೇಡಿಕೆಗಳನ್ನಿಟ್ಟು …

Leave a Reply

Your email address will not be published. Required fields are marked *