Tuesday , July 23 2019
Breaking News
Home / ಅಂತಾರಾಷ್ಟ್ರೀಯ / ಈಸ್ಟ್ ಲಂಡನ್ ಮಸೀದಿಯಲ್ಲಿ ತರಾವೀಹ್ ನಮಾಝ್ ಸಮಯದಲ್ಲಿ ಗುಂಡು ಹಾರಿಸಿ ಭಯೋತ್ಪಾದಕ ದಾಳಿಗೆ ಯತ್ನ

ಈಸ್ಟ್ ಲಂಡನ್ ಮಸೀದಿಯಲ್ಲಿ ತರಾವೀಹ್ ನಮಾಝ್ ಸಮಯದಲ್ಲಿ ಗುಂಡು ಹಾರಿಸಿ ಭಯೋತ್ಪಾದಕ ದಾಳಿಗೆ ಯತ್ನ

ಸಂದೇಶ ಇ-ಮ್ಯಾಗಝಿನ್: ಈಸ್ಟ್ ಲಂಡನ್ ಮಸೀದಿಯಲ್ಲಿ ನಿನ್ನೆ ರಾತ್ರಿ 10.45 ಕ್ಕೆ ರಮದಾನ್ ತರಾವೀಹ್ ನಮಾಝ್ ನಡೆಯುತ್ತಿದ್ದ ಸಮಯದಲ್ಲಿ ಗನ್ ಮ್ಯಾನ್ ಒಬ್ಬ ಮಸೀದಿಗೆ ನುಗ್ಗಲು ಯತ್ನಿಸಿ ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾದ ಘಟನೆ ವರದಿಯಾಗಿದೆ. ಲಂಡನ್ ಮೆಟ್ರೊಪಾಲಿಟಿನ್ ಪೊಲೀಸರ ಪ್ರಕಾರ ಶಂಕಿತ ಆರೋಪಿ ಸೆವೆನ್ ಕಿಂಗ್ಸ್ ರೋಡ್ ಮೂಲಕ ಮಸೀದಿಗೆ ಪ್ರವೇಶ ಪಡೆದಿದ್ದು, ಆತನ ಕೈಯಲ್ಲಿ ಗನ್ ಇದ್ದುದ್ದನ್ನು ನೋಡಿ ಸಾಮೂಹಿಕ ನಮಾಝ್‌‍ನಲ್ಲಿ ಪಾಲ್ಗೊಳ್ಳದೆ ಮಸೀದಿಯಲ್ಲಿ ಕುಳಿತಿದ್ದ ಮುಸ್ಲಿಮರು ಆತನನ್ನು ಹಿಡಿದು ಮಸೀದಿಯಿಂದ ಹೊರ ದಬ್ಬಿದ್ದಾರೆ. ಈ ವೇಳೆ ಆತ ಒಂದು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆದಾಗ್ಯೂ ಪೊಲೀಸರು ಈ ಘಟನೆಯನ್ನು ಭಯೋತ್ಪಾದಕ ಕೃತ್ಯದ ವಿಫಲ ಯತ್ನ ಎನ್ನಲು ನಿರಾಕರಿಸಿದ್ದಾರೆ. ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಕಳೆದ ಮಾರ್ಚ್ 15 ರಂದು ನ್ಯೂಝಿಲ್ಯಾಂಡ್‌ನ ಕ್ರೈಸ್ಟ್ ಚರ್ಚ್ ನ ಎರಡು ಮಸೀದಿಗಳಲ್ಲಿ ಆಸ್ಟ್ರೇಲಿಯನ್ ಮೂಲದ ಭಯೋತ್ಪಾದಕನೊಬ್ಬ ಗುಂಡು ಹಾರಿಸಿ ಸುಮಾರು 50 ಜನರನ್ನು ಹತ್ಯೆ ಗೈದಿದ್ದ ಘಟನೆ ನಡೆದು ಕೇವಲ ಎರಡು ತಿಂಗಳಾಗುವಷ್ಟರಲ್ಲೇ ಅಪಾರ ಜನ ಸೇರುವ ಈಸ್ಟ್ ಲಂಡನ್ ಮಸೀದಿಯಲ್ಲಿ ನಡೆದ ಈ ಕೃತ್ಯ ನಮಾಝಿಗರ ಆತಂಕಕ್ಕೆ ಕಾರಣವಾಗಿದೆ.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

000ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *