Friday , April 3 2020
Breaking News
Home / ರಾಷ್ಟ್ರೀಯ / ಜಾಗತಿಕ ಹಸಿವು ಸೂಚ್ಯಾಂಕ: 55 ರಿಂದ 102 ನೇ ಸ್ಥಾನಕ್ಕೆ ಕುಸಿದ ಭಾರತ

ಜಾಗತಿಕ ಹಸಿವು ಸೂಚ್ಯಾಂಕ: 55 ರಿಂದ 102 ನೇ ಸ್ಥಾನಕ್ಕೆ ಕುಸಿದ ಭಾರತ

ಸಂದೇಶ ಇ-ಮ್ಯಾಗಝಿನ್: ಆರ್ಥಿಕ ಕುಸಿತದಿಂದಾಗಿ ತಲೆ ಕೆಡಿಸಿಕೊಂಡಿರುವ ಭಾರತೀಯರಿಗೆ ಮತ್ತೊಂದು ಆಘಾತ ಸುದ್ದಿ ಎದುರಾಗಿದೆ. ಜಾಗತಿಕ ಹಸಿವು ಸೂಚ್ಯಾಂಕದ ವರದಿಯ ಪ್ರಕಾರ ವಿಶ್ವದಲ್ಲಿ ಹಸಿವಿನಿಂದ ಕಂಗೆಟ್ಟಿರುವ 117 ರಾಷ್ಟ್ರಗಳ ಪೈಕಿ ಭಾರತವು ಈ ಬಾರಿ 102 ನೇ ಸ್ಥಾನ ಪಡೆದುಕೊಂಡಿದೆ. 2014 ರಲ್ಲಿ 55 ನೇ ಸ್ಥಾನದಲ್ಲಿದ್ದ ಭಾರತವು, 2019ರ ಜಾಗತಿಕ ವರದಿಯ ಪ್ರಕಾರ102 ನೇ ಸ್ಥಾನದಲ್ಲಿದೆ ಎಂದು ವರದಿಯು ತಿಳಿಸಿದೆ.

ಜರ್ಮನಿಯ ವೆಲ್ಟ್ ಹಂಗರ್ ಹಿಲ್ಫ್ ಸಂಘಟನೆಯ ಹಾಗೂ ಐರಿಷ್ ನೆರವು ಸಂಸ್ಥೆ ಕನ್ಸರ್ನ್ ವರ್ಲ್ಡ್ ವೈಡ್ ಜಂಟಿಯಾಗಿ ಸಿದ್ಧಪಡಿಸಿರುವ ಈ ವಾರ್ಷಿಕ ವರದಿಯಲ್ಲಿ ಭಾರತವನ್ನು ಅತ್ಯಂತ ಹಸಿವಿನಿಂದ ಕೂಡಿರುವ ದೇಶ ಎಂದು ಉಲ್ಲೇಖಿಸಲಾಗಿದೆ.

ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳು ವರದಿಯಲ್ಲಿ ಭಾರತಕ್ಕಿಂತ ಮುಂದಿದೆ. ನೇಪಾಳ 73, ಪಾಕಿಸ್ತಾನ 94 ಹಾಗೂ ಬಾಂಗ್ಲಾದೇಶ 88 ನೇ ಸ್ಥಾನಗಳನ್ನು ಪಡೆದುಕೊಂಡಿದೆ. ಭಾರತದ ಈ ಸೂಚ್ಯಾಂಕ ಕುಸಿತವು ಅತ್ಯಂತ ಕಳವಳಕಾರಿ ಮತ್ತು ತೀವ್ರತೆಯಿಂದ ಕೂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Check Also

ಕೆಲಸ ದಿಂದ ವಜಾ ಮಾಡಿದ್ದಕ್ಕೆ ಮಾಜೀ ಉದ್ಯೋಗಿ ಮಾಲೀಕನಿಗೆ ಮಾಡಿದ್ದೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಮುಂಬೈಯ ಘಟ್‌ಕೋಪರ್ ಪ್ರದೇಶದಲ್ಲಿ ರವಿವಾರ ಒಂದು ವಿಚಿತ್ರ ರೀತಿಯ ಹತ್ಯೆ ನಡೆದಿದೆ. ಪೊಲೀಸರ ಪ್ರಕಾರ ಮಾಜಿ ಉದ್ಯೋಗಿಯೊಬ್ಬ …

Leave a Reply

Your email address will not be published. Required fields are marked *