Tuesday , February 18 2020
Breaking News
Home / ಲೇಖನ / ಏನಿದು ಅಭಿನಂದನ್ ಬಿಡುಗಡೆಗೆ ಕಾರಣವಾದ ಜಿನೆವಾ ಒಪ್ಪಂದ?

ಏನಿದು ಅಭಿನಂದನ್ ಬಿಡುಗಡೆಗೆ ಕಾರಣವಾದ ಜಿನೆವಾ ಒಪ್ಪಂದ?

ಸಂದೇಶ ಇ-ಮ್ಯಾಗಝಿನ್: ಭಾರತದ ವಾಯು ಸೇನೆಯ ಮಿಗ್ -21 ಫೈಟರ್ ಜೆಟ್‌ನ ಫೈಟರ್ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಮೊನ್ನೆ ದಾಳಿ ನಡೆಸುವಾಗ ಪ್ರತಿದಾಳಿ ನಡೆಸಿದ ಪಾಕ್ ವಾಯುಪಡೆಗಳು ಅಭಿನಂದನ್ ಚಲಾಯಿಸುತ್ತಿದ್ದ ಮಿಗ್ -21 ಫೈಟರ್ ಜೆಟನ್ನು ಪತನ ಗೊಳಿಸಿತ್ತು. ಆನಂತರ ಪ್ಯಾರಾಚೂಟ್ ಸಹಾಯದಿಂದ ಪಾಕಿಸ್ತಾನದ ಗಡಿಯ ಒಳ ಭಾಗದಲ್ಲಿ ಬಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನದ ಸೇನೆ ಬಂಧಿಸಿ ಯುದ್ಧ ಖೈದಿಯಾಗಿ ಇಟ್ಟಿತ್ತು. ನಿನ್ನೆ ಅಂದರೆ ಶುಕ್ರವಾರ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆ ಗೊಳಿಸಿತ್ತು.

ವಿಷಯ ಇರುವುದು ಇಲ್ಲೇ… ಪಾಕಿಸ್ತಾನ ಮತ್ತು ಭಾರತ ಉಭಯ ದೇಶಗಳನ್ನು ಆಳುತ್ತಿರುವ ರಾಜಕಾರಣಿಗಳು ಈ ಬಿಡುಗಡೆಯನ್ನು ತಮ್ಮ ಸಾಧನೆ ಎಂಬಂತೆ ಬಿಂಬಿಸಿ ಫೋಸ್ ಕೊಡುತ್ತಿದ್ದಾರೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಾವು ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದೇವೆ ಎಂದು ವಿಶ್ವದ ಮುಂದೆ ಸೊಬಗರಂತೆ ದೊಡ್ಡತನ ಮೆರೆದು ನಟಿಸಲು ಯತ್ನಿಸಿದ್ದಾರೆ. ಮತ್ತೊಂದೆಡೆ ಭಾರತದಲ್ಲಿ ಬಿಜೆಪಿ ಪಕ್ಷದ ರಾಜಕಾರಣಿಗಳು ಅಭಿನಂದನ್ ಬಿಡುಗಡೆ ನಮ್ಮ ಸಾಧನೆ ಎಂದು ಬಿಂಬಿಸಲು ಹೊರಟು ಇದರಲ್ಲಿ ನಮಗೆ ಚುನಾವಣೆಯಲ್ಲಿ ಎಷ್ಟು ಲಾಭವಾಗಬಹುದು ಎಂದು ಲೆಕ್ಕ ಹಾಕುತ್ತಿದ್ದಾರೆ. ಆದರೆ ವಾಸ್ತವದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಗೆ ಕೆಲಸ ಮಾಡಿದ್ದು ಸುಮಾರು 70 ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಮಾಡಲಾದ ವಿಶ್ವ ಸಂಸ್ಥೆಯ ಜಿನೇವಾ ಒಪ್ಪಂದವೇ ಆಗಿತ್ತು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ ಎಂಬುದು ದುರಂತ. ಮೀಡಿಯಾಗಳು ಈ ಬಗ್ಗೆ ಜನರಿಗೆ ಹೇಳುತ್ತಲೂ ಇಲ್ಲ.ಈ ಒಪ್ಪಂದಕ್ಕೆ ಸ್ವಿಟ್ಜರ್‌ಲ್ಯಾಂಡಿನ ಜಿನೇವಾದಲ್ಲಿ 1929ರ ಜುಲೈ 27ರಂದು ಸಹಿ ಹಾಕಲಾಯಿತು. ಈ ಜಿನೇವಾ ಒಪ್ಪಂದ ಪ್ರಮುಖ ಅಂಶಗಳೆಂದರೆ,

  • ಯುದ್ಧದ ಸಂದರ್ಭದಲ್ಲಿ ಸೆರೆಸಿಕ್ಕ ಕೈದಿಗಳನ್ನು ಹಿಂಸಿಸುವಂತಿಲ್ಲ.
  • ಕೈದಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡ ಬೇಕು.
  • ಕೈದಿಗೆ ಅನ್ನ ಆಹಾರದಲ್ಲಿ ಯಾವುದೇ ಕಡಿಮೆ ಮಾಡುವಂತಿಲ್ಲ.
  • ಕೈದಿಗಳನ್ನು ಯಾವುದೇ ಜನಾಂಗ, ಬಣ್ಣ, ಲಿಂಗ, ಧರ್ಮ, ನಂಬಿಕೆ, ಜನ್ಮ ಅಥವಾ ಸಂಪತ್ತಿನ ಆಧಾರದ ಮೇಲೆ ಚಿಕಿತ್ಸೆ​ ಮಾಡುವಂತಿಲ್ಲ.
  • ಕೈದಿಗಳಿಗೆ ಮರಣ ದಂಡನೆ ಶಿಕ್ಷೆ ನೀಡುವಂತಿಲ್ಲ.
  • ಕೈದಿಗಳಿಗೆ ವಿಶೇಷ ಭದ್ರತೆ ನೀಡಬೇಕು.
  • ಯುದ್ಧ ಮುಗಿದ ನಂತರ ಎರಡೂ ರಾಷ್ಟಗಳು ಪರಸ್ಪರ ಸೆರೆಸಿಕ್ಕ ಕೈದಿಗಳನ್ನು ಹಸ್ತಾಂತರಿಸಬೇಕು.

ಈ ಒಪ್ಪಂದಕ್ಕೆ ಭಾರತ ಪಾಕಿಸ್ತಾನ ಸೇರಿದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳು ನಂತರದ ಕಾಲಘಟ್ಟದಲ್ಲಿ ಸಹಿ ಹಾಕಿವೆ. ಆದರೆ ವಿಂಗ್ ಕಮಾಂಡರ್ ಅಭಿನಂದನ್ ವಿಷಯದಲ್ಲಿ ಪಾಕಿಸ್ತಾನ ಈ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ ಎನ್ನಲಾಗಿದೆ. ಮೇಲ್ನೋಟಕ್ಕೆ ಅದು ನಿಜ ಕೂಡ ಹೌದು. ಅನಗತ್ಯ ಪ್ರಶ್ನೆ ಕೇಳಿ ಹಿಂಸಿಸಿದ್ದು, ಕಣ್ಣಿಗೆ ಬಟ್ಟೆ ಕಟ್ಟಿ ಕೈ ಕಟ್ಟಿದ್ದು, ಮುಖ ಮೂತಿಯಲ್ಲಿ ರಕ್ತ ಬರುವ ಹಾಗೆ ಹೊಡೆದಿದ್ದು, ಅದೂ ಅಲ್ಲದೆ ಆಗಾಗ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು ಮುಂತಾದ ಕುತಂತ್ರಗಳನ್ನು ಪಾಕಿಸ್ತಾನ ಮಾಡಿದೆ. ಇದು ಜಿನೇವಾ ಒಪ್ಪಂದದ ಉಲ್ಲಂಘನೆ ಎಂದು ತೋರುತ್ತಿದೆ. ಇದರ ವಿರುದ್ಧ ಭಾರತ ವಿಶ್ವ ಸಂಸ್ಥೆಗೆ ದೂರು ಸಲ್ಲಿಸಬಹುದಾಗಿದೆ.

ಇದರ ಹೊರತು ಭಾರತದ ಹೆಮ್ಮೆಯ ಸುಪುತ್ರ ಸೇನಾನಿ ಅಭಿನಂದನ್ ಅವರ ಬಿಡುಗಡೆಯಲ್ಲಿ ಯಾವುದೇ ದೇಶದ ರಾಜಕಾರಣಿಗಳ ಒತ್ತಡವೂ ಇಲ್ಲ. ಅಥವಾ ಇಮ್ರಾನ್ ಖಾನ್ ಹೇಳುವ ಹಾಗೆ ಶಾಂತಿಯ ಕಾರಣದಿಂದಲೂ ಇದನ್ನು ಮಾಡಲಾಗಿಲ್ಲ. ಒಂದು ವೇಳೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಹತ್ಯೆ ಗೈದಿದ್ದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧಾಪರಾಧಿಯಾಗಿ ನಿಲ್ಲಬೇಕಾಗುತ್ತಿತ್ತು. ಆದರೆ ಪಾಕಿಸ್ತಾನಕ್ಕೆ ಅದು ಬೇಕಾಗಿಯೂ ಇರಲಿಲ್ಲ. ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತನ್ನನ್ನು ಹೊಗಳಿಸಿ ಕೊಳ್ಳುವ ಅವಕಾಶವನ್ನು ಇಮ್ರಾನ್ ಖಾನ್ ಚೆನ್ನಾಗಿ ಬಳಸಿ ಕೊಂಡರು. ಭಾರತದಲ್ಲೂ ಇದನ್ನು ಮುಂದಿನ ಚುನಾವಣೆಯಲ್ಲಿ ಲಾಭಗಳಿಸಲು ಬಳಸಲಾಗುತ್ತಿದೆ.

Check Also

ಭಿಕ್ಷುಕರು ಮತ್ತು ಮುಸ್ಲಿಮ್ ಸಮುದಾಯ-ಕಣ್ಣು ತೆರೆಸುವ ಲೇಖನ

ಕಟ್ಟಿಗೆ ಕಡಿದು ಮಾರಿಯಾದರೂ  ಸ್ವಾಭಿಮಾನದಿಂದ ಬದುಕ ಬೇಕೆಂದು ಯಾವ ಧರ್ಮ ಕಲಿಸಿ ಕೊಟ್ಟಿತೋ ಮತ್ತು ಯಾವ ಧರ್ಮ ಬೇಡುವುದನ್ನು ನಿರುತ್ಸಾಹ …

Leave a Reply

Your email address will not be published. Required fields are marked *