Tuesday , December 10 2019
Breaking News
Home / ಹದೀಸ್ / ಇಸ್ಲಾಮಿನಲ್ಲಿ ಫಲಗಳ ವ್ಯಾಪಾರ

ಇಸ್ಲಾಮಿನಲ್ಲಿ ಫಲಗಳ ವ್ಯಾಪಾರ

ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ

ಅಬ್ದುಲ್ಲಾ ಬಿನ್ ಉಮರ್ (ರ)ವರದಿ ಮಾಡುತ್ತಾರೆ:
ಪ್ರವಾದಿ(ಸ.ಅ)ರು ಫಲಗಳು ಪಕ್ವವಾಗದೆ ಅವುಗಳ ವ್ಯಾಪಾರ ಮಾಡುವುದನ್ನು ನಿಷೇಧಿಸಿರುವರು. ಪ್ರವಾದಿ (ಸ.ಅ)ರು ಇಂತಹ ಹಣ್ಣುಗಳನ್ನು ಮಾರುವುದನ್ನು ಖರೀದಿಸುವುದನ್ನು ನಿಷೇಧಿಸಿರುವರು. (ಬುಖಾರಿ, ಮುಸ್ಲಿಮ್)

ಅರೇಬಿಯಾದಲ್ಲಿ ಖರ್ಜೂರ, ದ್ರಾಕ್ಷಿ ಇತ್ಯಾದಿ ಫಲಗಳ ಬೆಳೆಯಾಗುವ ಕಡೆಯ ಜನರು ಫಲ ಮಾಗುವುದಕ್ಕೆ ಮುಂಚೆ ಅವು ಮರಗಳಲ್ಲಿರುವಾಗಲೇ ಮಾರಿ ಬಿಡುತ್ತಿದ್ದರು. ಇದೇ ರೀತಿ ಹೊಲದಲ್ಲಿ ಧಾನ್ಯ ತಯಾರಾಗುವ ಮುಂಚೆಯೇ ಮಾರಲಾಗುತ್ತಿತ್ತು. ಪ್ರವಾದಿ (ಸ.ಅ)ರು ಇದರಿಂದ ತಡೆದರು. ಯಾಕೆಂದರೆ, ಈ ರೀತಿ ಮಾರುವುದರಿಂದ ಒಂದು ಅಪಾಯ ಇರುತ್ತದೆ. ಅದೇನೆಂದರೆ, ಗದ್ದೆ ಅಥವಾ ತೋಟದ ಬೆಳೆಯ ಮೇಲೆ ಅನಿರೀಕ್ಷಿತ ಆಪತ್ತು ಎರಗಬಹುದು. ಉದಾಹರಣೆಗೆ: ಬಿರುಗಾಳಿ ಅಥವಾ ಆಲಿಕಲ್ಲು ಮಳೆಯಿಂದ ಬೆಳೆ ನಾಶವಾಗಬಹುದು. ಅಥವಾ ಬೆಳೆಗೆ ಯಾವುದಾದರೂ ರೋಗ ತಗಲಿದರೆ ಖರೀದಿಸಿದವನಿಗೆ ದೊಡ್ಡ ನಷ್ಟವಾದೀತು. ಹಾಗಾದರೆ ಬೆಲೆ ಪಾವತಿಸುವಲ್ಲಿ ಜಗಳ ಉಂಟಾಗಬಹುದು. ಈ ಕೆಡುಕು ಮತ್ತು ಅಪಾಯಗಳ ಕಾರಣದಿಂದ ಲೋಕಪ್ರವಾದಿ(ಸ.ಅ) ಈ ವ್ಯಾಪಾರವನ್ನು ನಿಷೇಧಿಸಿರುವರು.

Check Also

ಇಸ್ಲಾಮ್ ಸ್ವಾಭಿಮಾನ ಜೀವನಕ್ಕೆ ಪ್ರೋತ್ಸಾಹ ನೀಡುತ್ತದೆ

ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ ಇಸ್ಲಾಮ್ ಸ್ವಾಭಿಮಾನಕ್ಕೆ ಬಹಳ ಮಹತ್ವ ನೀಡುತ್ತದೆ. ಅದುದರಿಂದ ಪ್ರವಾದಿ(ಸ.ಅ)ರ ಶಿಕ್ಷಣವೇನೆಂದರೆ ಜನರ ಮುಂದೆ ತನ್ನ ಬೇಡಿಕೆಗಳನ್ನಿಟ್ಟು …

Leave a Reply

Your email address will not be published. Required fields are marked *