Monday , September 16 2019
Breaking News
Home / ವೀಡಿಯೋ / ಗಲ್ಫ್‌ನಲ್ಲಿ ಕಷ್ಟಪಟ್ಟು ದುಡಿದು ಊರಿಗೆ ಬರುವಾಗ ಲಗೇಜ್ ತುಂಬಿಸಿ ಬರ್ತೀರಲ್ಲ, ಈ ಲಗೇಜ್ ಎಷ್ಟು ಸೇಫ್ ಗೊತ್ತಾ; ಇಲ್ಲಿದೆ ಶಾಕಿಂಗ್ ವೀಡಿಯೋ

ಗಲ್ಫ್‌ನಲ್ಲಿ ಕಷ್ಟಪಟ್ಟು ದುಡಿದು ಊರಿಗೆ ಬರುವಾಗ ಲಗೇಜ್ ತುಂಬಿಸಿ ಬರ್ತೀರಲ್ಲ, ಈ ಲಗೇಜ್ ಎಷ್ಟು ಸೇಫ್ ಗೊತ್ತಾ; ಇಲ್ಲಿದೆ ಶಾಕಿಂಗ್ ವೀಡಿಯೋ

ಸಂದೇಶ ಇ-ಮ್ಯಾಗಝಿನ್: ಗಲ್ಫ್ ಮರುಭೂಮಿಗಳಲ್ಲಿ ಬೆವರು ಹರಿಸಿ ದುಡಿದು ಊರಿಗೆ ಬರುವಾಗ ಕಷ್ಟ ಪಟ್ಟು ಸಂಪಾದಿಸಿದ ದುಡ್ಡಲ್ಲಿ ಸ್ವಲ್ಪ ಖರೀದಿ ಮಾಡಿ ಬ್ಯಾಗಲ್ಲಿ ತುಂಬಿ ವಿಮಾನದ ಲಗೇಜಲ್ಲಿ ಹಾಕ್ತೀರಲ್ಲ. ಇಂತಹ ಲಗೇಜುಗಳು ಎಷ್ಟು ಸೇಫ್ ಅನ್ನೋ ಪ್ರಶ್ನೆ ಹುಟ್ಟು ಹಾಕುವ ಶಾಕಿಂಗ್ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ವಿಮಾನದ ಲಗೇಜ್ ಖಾಲಿ ಮಾಡುವ ಸಿಬ್ಬಂದಿಯೊಬ್ಬ ಬ್ಯಾಗುಗಳನ್ನು ತೆರೆದು ಒಳಗೆ ಕೈ ಹಾಕಿ ತಡಕಾಡುತ್ತಿದ್ದಾನೆ. ವಿಮಾನ ಯಾವುದೆಂದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲವಾದರೂ ಇಂತಹ ಕೃತ್ಯ ಬಡ ಪ್ರವಾಸಿಗಳು ಕಷ್ಟ ಪಟ್ಟು ದುಡಿದು ಮನೆಗೆ ತರುವ ಲಗೇಜುಗಳು ಕೂಡ ಸೇಫ್ ಅಲ್ಲ ಎನ್ನುವ ಆತಂಕ ಎದುರಾಗಿದೆ. ಇಂತಹ ಕೃತ್ಯಗಳಿಗೆ ಆಯಾ ವಿಮಾನಗಳ ಮೇಲ್ವಿಚಾರಕರೇ ಹೊಣೆಯಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಂಡು ಜನರ ನಂಬಿಕೆ ಉಳಿಸಬೇಕಾದ ಜವಾಬ್ದಾರಿಯೂ ಅಧಿಕಾರಿಗಳ ಮೇಲಿದೆ. ಇದು ಭಾರತದ ವೀಡಿಯೋ ಹೌದಾ ಅಥವಾ ಬೇರೆ ಯಾವುದೇ ದೇಶದ್ದಾ ಎಂಬ ಸ್ಪಷ್ಟ ಮಾಹಿತಿ ಸಂದೇಶ ಇ-ಮ್ಯಾಗಝಿನ್‌ಗೆ ದೊರೆತಿಲ್ಲ.

Check Also

ಕೋರ್ಟ್ ವಿಚರಣೆಯನ್ನು ತಪ್ಪಿಸಿ ಈದ್ ಆಚರಿಸಿದ ಸಾಧ್ವಿ ಪ್ರಜ್ಞಾ

3111ಸಂದೇಶ ಇ-ಮ್ಯಾಗಝಿನ್: ಭೋಪಾಲ್ ಸಂಸದೆ ಹಾಗೂ ಮಾಲೇಗಾಂವ್ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಮ್ಮೆ ವಿವಾದದ …

Leave a Reply

Your email address will not be published. Required fields are marked *