Monday , August 26 2019
Breaking News
Home / ರಾಜಕೀಯ / ಕಾಂಗ್ರೇಸ್-ಬಿಜೆಪಿಯೇತರ ಫೆಡರಲ್ ಫ್ರಂಟ್ ಸರಕಾರ ರಚನೆಗೆ ಮುಂದಾದ ಕೆಸಿಆರ್

ಕಾಂಗ್ರೇಸ್-ಬಿಜೆಪಿಯೇತರ ಫೆಡರಲ್ ಫ್ರಂಟ್ ಸರಕಾರ ರಚನೆಗೆ ಮುಂದಾದ ಕೆಸಿಆರ್

ಸಂದೇಶ ಇ-ಮ್ಯಾಗಝಿನ್: ತೆಲಂಗಾಣ ರಾಷ್ಟ್ರ ಸಮಿತಿಯ ಮುಖ್ಯಸ್ಥ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರ ಶೇಖರ್ ರಾವ್ ಅವರು ಕಾಂಗ್ರೇಸ್ -ಬಿಜೆಪಿಯೇತರ ಪಕ್ಷಗಳ ಫೆಡರಲ್ ಫ್ರಂಟ್ ಸರಕಾರ ರಚನೆಗೆ ಮುಂದಾಗಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ಯುಪಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಬರದೇ ಇದ್ದಲ್ಲಿ ಕಾಂಗ್ರೇಸ್‌ನ ಬಾಹ್ಯ ಬೆಂಬಲದೊಂದಿಗೆ ಫೆಡರಲ್ ಸರಕಾರ ರಚಿಸುವ ದೂರದೃಷ್ಟಿ ರಾಜಕಾರಣದ ಲೆಕ್ಕಾಚಾರದಲ್ಲಿದ್ದಾರೆ ಚಂದ್ರ ಶೇಖರ್ ರಾವ್. ಇದಕ್ಕಾಗಿ ಅವರು ಈಗಾಗಲೇ ತಮಿಳುನಾಡಿನ ಡಿಎಂಕೆ ಮುಖಂಡರಾದ ಎಂ.ಕೆ.ಸ್ಟಾಲಿನ್ ಹಾಗೂ ಕೇರಳದ ಮುಖ್ಯಮಂತ್ರಿಯಾದ ಸಿಪಿಎಂ ನ ಪಿಣರಾಯಿ ವಿಜಯನ್ ಅವರ ಜೊತೆ ಕಳೆದವಾರ ಸುದೀರ್ಘ ಮಾತು ಕತೆ ನಡೆಸಿದ್ದಾರೆ. ಇದೀಗ ಉತ್ತರಪ್ರದೇಶದ ಬಹುಜನ ಸಮಾಜವಾದಿ ಪಕ್ಷದ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿ ಮಾತು ಕತೆ ನಡೆಸಿದ್ದಾರೆ. ಇನ್ನೊಂದೆಡೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೇಸ್‌ನ ಮಮತಾ ಬ್ಯಾನರ್ಜಿಯವರ ಜೊತೆ ಕೂಡ ಮಾತನಾಡಿದ್ದಾರೆ. ಆಂಧ್ರದ ವೈಎಸ್‌ಆರ್ ಕಾಂಗ್ರೇಸ್ ಮುಖಂಡ ಜಗನ್ ಕೂಡ ಫೆಡರಲ್ ಫ್ರಂಟ್ ಗೆ ಬೆಂಬಲ ನೀಡಿದ್ದಾರೆನ್ನಲಾಗಿದೆ.

ಪ್ರಾದೇಶಿಕ ಪಕ್ಷಗಳೆಲ್ಲ ಒಟ್ಟು ಸೇರಿದರೆ ಒಂದು ನಿರೀಕ್ಷಿತ ಮಟ್ಟ ತಲುಪ ಬಹುದು. ಕೊನೆಗೆ ಮ್ಯಾಜಿಕ್ ಸಂಖ್ಯೆ ತಲುಪಲು ಬೇಕಾದ ಸ್ಥಾನಗಳನ್ನು ಕಾಂಗ್ರೇಸ್ ಬಾಹ್ಯವಾಗಿ ನೀಡಿದ್ದೇ ಆದಲ್ಲಿ ಫೆಡರಲ್ ಫ್ರಂಟ್ ಸರಕಾರ ರಚನೆಯಾಗಲಿದೆ. ಆದರೆ ಬಿಜೆಪಿಗೆ ಯಾವ ಕಾರಣಕ್ಕೂ ಬೆಂಬಲ ನೀಡಲ್ಲ ಹಾಗೂ ಬಿಜೆಪಿಯಿಂದ ಬೆಂಬಲ ಪಡೆಯುವುದೂ ಇಲ್ಲ ಎಂದು ಟಿಆರ್‌ಎಸ್ ಪಕ್ಷದ ವಕ್ತಾರ ಅಬಿಲ್ ರಸೂಲ್ ಖಾನ್ ತಿಳಿಸಿದ್ದಾರೆ.

Check Also

ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಲ್ಲ: ಮುಕ್ತಾರ್ ಅಬ್ಬಾಸ್ ನಖ್ವಿ

101ಸಂದೇಶ ಇ-ಮ್ಯಾಗಝಿನ್: ಅಲ್ಪಸಂಖ್ಯಾತ ಪದವು ಮುಸ್ಲಿಮರನ್ನು ಮಾತ್ರ ಸೂಚಿಸುವುದಿಲ್ಲ ನಮ್ಮ ದೇಶದಲ್ಲಿ ಜೈನರು, ಬೌದ್ಧರು, ಕ್ರಿಶ್ಚಿಯನ್ನರು, ಪಾರ್ಸಿಗಳು ಮತ್ತು ಸಿಖ್ಖರು …

Leave a Reply

Your email address will not be published. Required fields are marked *