Tuesday , April 7 2020
Breaking News
Home / ರಾಜ್ಯ / ವಿಶ್ವಾಸಮತ ಕಳೆದುಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ: ರಾಜ್ಯ ಮೈತ್ರಿ ಸರಕಾರ ಪತನ

ವಿಶ್ವಾಸಮತ ಕಳೆದುಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ: ರಾಜ್ಯ ಮೈತ್ರಿ ಸರಕಾರ ಪತನ

ಸಂದೇಶ ಇ-ಮ್ಯಾಗಝಿನ್: ಕೊನೆಗೂ ಹಲವು ದಿನಗಳ ತಿಕ್ಕಾಟದ ನಂತರ ಮುಖ್ಯಮಂತ್ರಿ ಕುಮಾರ ಸ್ವಾಮಿ ನೇತೃತ್ವದ ರಾಜ್ಯ ಮೈತ್ರಿ ಸರಕಾರ ಪತನವಾಯಿತು. ಕಾಂಗ್ರೇಸ್-ಜೆಡಿಎಸ್ ಮೈತ್ರಿ ಸರಕಾರದ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ವಿಶ್ವಾಸಮತ ವೋಟಿಂಗ್ ಹಾಕದೆ ವಿದಾಯ ಭಾಷಣ ಮಾಡಿದರು. ಮುಖ್ಯಮಂತ್ರಿಯವರ ನಿರ್ಣಯವನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಡಿವಿಷನ್ ಗೆ ಹಾಕಿ ಧ್ವನಿಮತದ ಮೂಲಕ ನಡೆದ ಬಲಾಬಲ ಪರೀಕ್ಷೆ ನಡೆಸಿದರು. ಬಲಾಬಲ ಪರೀಕ್ಷೆಯಲ್ಲಿ ಮೈತ್ರಿಗೆ ಸೋಲಾಗಿ, ಸರಕಾರ ಬಹುಮತ ಕಳೆದುಕೊಂಡಿರುವುದು ಅಧಿಕೃತವಾಗಿ ಘೋಷಣೆಯಾಯಿತು. ಉಪ ಸ್ಪೀಕರ್ ಕೃಷ್ಣಾ ರೆಡ್ಡಿ ಸೇರಿ 204 ಶಾಸಕರ ಮತವನ್ನು ಪರಿಗಣಿಸಲಾಗಿದ್ದು, ಸರಕಾರ ವಿಶ್ವಾಸ ಮತ ಉಳಿಸಿಕೊಳ್ಳಲು 103 ಮ್ಯಾಜಿಕ್ ನಂಬರ್ ಎಂದು ನಿರ್ಣಯಿಸಲಾಗಿತ್ತು. ಕಾಂಗ್ರೇಸ್-ಜೆಡಿಎಸ್ ಮೈತ್ರಿ ಸರ್ಕಾರದ ಪರ 99 ಮತಗಳು ಬಿದ್ದವು. ಬಿಜೆಪಿಯ ಪರ 105 ಮತಗಳು ದಾಖಲಾದವು. 20 ಅತೃಪ್ತ ಶಾಸಕರು ಇಂದು ಸದನಕ್ಕೆ ಗೈರಾಗಿದ್ದರು.

2018ರ ಮೇ 23 ರಂದು ರಚನೆಯಾದ ಮೈತ್ರಿ ಸರಕಾರ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ನೇತೃತ್ವದಲ್ಲಿ ಸುಮಾರು ಒಂದು ವರ್ಷ ಎರಡು ತಿಂಗಳುಗಳ ಕಾಲ ಆಡಳಿತ ನಡೆಸಿದೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ತಮ್ಮ ವಿದಾಯ ಭಾಷಣದಲ್ಲಿ ರೈತರ ಸಾಲಮನ್ನ ಈ ಸರಕಾರದ ಮಹತ್ವದ ನಿರ್ಧಾರ, ನಾವು ರೈತರಿಗೆ ಮೋಸ ಮಾಡಿಲ್ಲ ಎಂದು ಹೇಳಿದರು.

Check Also

ಅಪಘಾತವಾದರೂ ಹನಿ ನೀರು ಕುಡಿಯದೆ ಮೃತಪಟ್ಟ ಉಪವಾಸಿಗ ಶಿಕ್ಷಕ

ಸಂದೇಶ ಇ-ಮ್ಯಾಗಝಿನ್: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಶಾಲಾ ಶಿಕ್ಷಕರೊಬ್ಬರು ಅಪಘಾತವಾದರೂ ಉಪವಾಸ ಮುರಿಯುತ್ತೆ ಎಂದು ಹನಿ ನೀರು ಮುಟ್ಟದೆ …

Leave a Reply

Your email address will not be published. Required fields are marked *