Thursday , June 20 2019
Breaking News
Home / ಅಂತಾರಾಷ್ಟ್ರೀಯ / ಜೀವನಪೂರ್ತಿ ತನ್ನನ್ನು ಸೌದಿ ರಾಜಕುಮಾರ ಎಂದು ಜನರನ್ನು ವಂಚಿಸಿದ್ದ ವ್ಯಕ್ತಿಗೆ ಕೊನೆಗೆ ಈ ಸ್ಥಿತಿಯಾಯಿತು

ಜೀವನಪೂರ್ತಿ ತನ್ನನ್ನು ಸೌದಿ ರಾಜಕುಮಾರ ಎಂದು ಜನರನ್ನು ವಂಚಿಸಿದ್ದ ವ್ಯಕ್ತಿಗೆ ಕೊನೆಗೆ ಈ ಸ್ಥಿತಿಯಾಯಿತು

ಸಂದೇಶ ಇ-ಮ್ಯಾಗಝಿನ್: ಆತ ತನ್ನನ್ನು ತಾನೇ ಸೌದಿ ರಾಜಕುಮಾರ ಖಾಲಿದ್ ಅಲ್ ಸೌದ್ ಎಂದು ಪರಿಚಯಿಸುತ್ತಿದ್ದ, ಸರಕಾರಿ ದಾಖಲೆಗಳಲ್ಲೂ ಆತ ತನ್ನನ್ನು ಸೌದಿ ರಾಜಕುಮಾರ ಎಂದೇ ಗುರುತಿಸಿಕೊಂಡಿದ್ದ. ಕೈಯಲ್ಲಿ ರೋಲೆಕ್ಸ್ ವಾಚ್, ಚಿನ್ನದ ಬ್ರೆಸ್‌ಲೆಟ್ ಧರಿಸಿ ಈತ ತನ್ನ ಫೆರಾರಿ ಕಾರಿನಲ್ಲಿ ಮಿಯಾಮಿ, ಫ್ಲೊರಿಡಾ ಮುಂತಾದ ಕಡೆ ಸುತ್ತಾಡುತ್ತಿದ್ದ. ಆದರೆ ಈತ ನಿಜ ಸೌದಿ ರಾಜಕುಮಾರನಾಗಿರಲಿಲ್ಲ. ಈತನ ಹೆಸರು ಆಂಟನಿ ಗಿಗ್ ನೆಕ್ ಮೂಲತಃ ಪ್ಲೊರಿಡಾ ನಿವಾಸಿ. ಈತ ಜೀನವ ಪೂರ್ತಿ ತನ್ನನ್ನು ಸೌದಿ ಪ್ರಿನ್ಸ್ ಖಾಲಿದ್ ಅಲ್ ಸೌದ್ ಎಂದೇ ಗುರುತಿಸಿದ್ದ. ಹಾಗಂತ ಈತ ಸುಮ್ಮನೆ ಆ ರೀತಿ ಮಾಡಿದ್ದಲ್ಲ. ಸೌದಿ ರಾಯಲ್ ಫ್ಯಾಮಿಲಿಯ ಹೆಸರು ಬಳಸಿ ಜನರಿಗೆ ಸುಮಾರು 80 ಲಕ್ಷ ಡಾಲರ್ ವಂಚಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ. ಆದರೆ ಈತನ ಕಳ್ಳಾಟ ಹೆಚ್ಚು ದಿನ ನಡೆಯಲಿಲ್ಲ. 2017 ರಲ್ಲಿ ತನ್ನ ಬಂಗಲೆಯಲ್ಲಿ ಪೋರ್ಕ್ ಮಾಂಸ ತಿನ್ನುವಾಗ ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಈತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಇದೀಗ ಈತನಿಗೆ 18 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಮುಸ್ಲಿಮರು ಪೋರ್ಕ್(ಹಂದಿ) ಮಾಂಸ ತಿನ್ನದ ಕಾರಣ ಈತನ ಮನೆಯಲ್ಲಿ ಹಂದಿ ಮಾಂಸವನ್ನು ಯಾಕೆ ಬೇಯಿಸುತ್ತಾರೆ ಎಂದು ಸ್ಥಳೀಯರು ಸಂಶಯಗೊಂಡಿದ್ದರು ಎನ್ನಲಾಗಿದೆ. ಅಸಲಿ ಸೌದಿ ರಾಜಕುಮಾರ ಖಾಲಿದ್ ಅಲ್ ಸೌದ್ ಮಕ್ಕಾದ ಗವರ್ನರ್ ಆಗಿದ್ದು, ಅವರಿಗೆ ಇದೀಗ 79 ವರ್ಷ ಪ್ರಾಯವಾಗಿದೆ.

Check Also

ಸೌದಿ ಅರೇಬಿಯಾ ಈ ಬಾರಿ ತಪ್ಪಾಗಿ ಈದ್ ಆಚರಿಸಿದೆ ಎಂದು ಆರೋಪಿಸಿದ ಪಾಕಿಸ್ತಾನಿಗಳು

0110ಸಂದೇಶ ಇ-ಮ್ಯಾಗಝಿನ್: ಈ ಬಾರಿ ಸೌದಿ ಅರೇಬಿಯಾ ಭಾರತ ಹಾಗೂ ಪಾಕಿಸ್ತಾನದಕ್ಕಿಂತ ಒಂದು ದಿನ ಮುಂಚಿತವಾಗಿ ಈದ್ ಆಚರಿಸಿದ್ದು, ಜೂನ್ …

Leave a Reply

Your email address will not be published. Required fields are marked *